Meghana Raj: ‘ಅನಿಮಲ್ ನಿಜಕ್ಕೂ ಆಸಕ್ತಿಕರ ಸಿನಿಮಾ’; ಮೆಚ್ಚಿ ಹೊಗಳಿದ ಮೇಘನಾ ರಾಜ್

2023ರ ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ರಿಲೀಸ್ ಆಯಿತು. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಕೆಲವರು ಸಿನಿಮಾನ ಹೊಗಳಿದರೆ, ಇನ್ನೂ ಕೆಲವರು ತೆಗಳಿದ್ದರು. ಮೇಘನಾ ರಾಜ್ ಅವರು ಚಿತ್ರವನ್ನು ಮೆಚ್ಚಿ ಹೊಗಳಿದ್ದಾರೆ.

Meghana Raj: ‘ಅನಿಮಲ್ ನಿಜಕ್ಕೂ ಆಸಕ್ತಿಕರ ಸಿನಿಮಾ’; ಮೆಚ್ಚಿ ಹೊಗಳಿದ ಮೇಘನಾ ರಾಜ್
ಮೇಘನಾ-ಅನಿಮಲ್
Edited By:

Updated on: Apr 17, 2024 | 1:06 PM

ಮೇಘನಾ ರಾಜ್ (Meghana Raj) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪತಿ ಚಿರಂಜೀವಿ ಮೃತಪಟ್ಟ ಬಳಿಕ ಅವರು ಕಣ್ಣೀರಲ್ಲಿ ಕೈ ತೊಳೆದರು. ಆ ಬಳಿಕ ರಾಯನ್ ಜನಿಸಿದ. ಈ ಸಂದರ್ಭದಲ್ಲಿ ಅವರು ಚಿತ್ರರಂಗದಿಂದ ದೂರ ಇದ್ದರು. ಈಗ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರ ನಟನೆಯ ‘ತತ್ಸಮ ತದ್ಭವ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿದೆ. ಮೇಘನಾ ರಾಜ್ ಅವರು ಇತ್ತೀಚೆಗೆ ರ‍್ಯಾಪಿಡ್ ರಶ್ಮಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಅನಿಮಲ್’ ಸಿನಿಮಾ ಇಷ್ಟವಾಗಿದೆ ಎಂದಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

‘ಅನಿಮಲ್’ ಸಿನಿಮಾ 2023ರ ಡಿಸೆಂಬರ್ 1ರಂದು ರಿಲೀಸ್ ಆಯಿತು. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಕೆಲವರು ಸಿನಿಮಾನ ಹೊಗಳಿದರೆ, ಇನ್ನೂ ಕೆಲವರು ತೆಗಳಿದ್ದರು. ಎಲ್ಲವನ್ನೂ ಅತಿರೇಕವಾಗಿ ತೋರಿಸಲಾಗಿದೆ, ಮಹಿಳೆಯರಿಗೆ ಗೌರವ ನೀಡಿಲ್ಲ ಎನ್ನುವ ಆರೋಪ ಇದೆ. ಈ ಸಿನಿಮಾ ಬಗ್ಗೆ ಮೇಘನಾ ರಾಜ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅವರಿಗೆ ಸಿನಿಮಾ ಇಷ್ಟ ಆಗಿದೆಯಂತೆ.

‘ಅನಿಮಲ್​ನಲ್ಲಿ ಭಾವನೆಗಳು ವಿಪರೀತವಾಗಿ ತೋರಿಸಲಾಗಿದೆ ಎಂಬುದು ನಿಜ. ಆದರೆ, ಇದು ನಿಜಕ್ಕೂ ಆಸಕ್ತಿಕರ ಸಿನಿಮಾ. ಈ ಚಿತ್ರದಲ್ಲಿ ಗ್ರೇ ಶೇಡ್​ಗಳು ಕಾಣಿಸಿಲ್ಲ. ಬ್ಲ್ಯಾಕ್ ಅಥವಾ ವೈಟ್ ಮಾತ್ರ ತೋರಿಸಲಾಗಿದೆ. ಆ ರೀತಿಯ ಸಿನಿಮಾ ಮಾಡೋದು ಕಷ್ಟ. ಈ ರೀತಿಯ ಸಿನಿಮಾನ ಮಾಡಲು ನಿಜಕ್ಕೂ ಧೈರ್ಯ ಬೇಕು. ಮಾರಲ್​ ಪೊಲೀಸಿಂಗ್ ಹೆಚ್ಚಿದೆ. ಮನೆಯಲ್ಲಿ ನಾವು ಮಾಡೋದನ್ನೇ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಆದರೆ, ಅದನ್ನು ಸಿನಿಮಾದಲ್ಲಿ ತೋರಿಸಿದಾಗ ಪ್ರಶ್ನೆ ಮಾಡುತ್ತೇವೆ’ ಎಂದಿದ್ದಾರೆ ಮೇಘನಾ ರಾಜ್.

‘ಅನಿಮಲ್’ ಸಿನಿಮಾ ಬಗ್ಗೆ ಮೇಘನಾ ರಾಜ್

‘ಪ್ರತಿ ಬಾರಿ ಸಿನಿಮಾ ನೋಡವಾಗ ಮಾರಲ್ ಪೋಲಿಸಿಂಗ್​ನ ಬದಿಗಿಟ್ಟುಬಿಡಬೇಕು. ಒಂದು ಕಲೆಯಾಗಿ ಸಿನಿಮಾ ನೋಡಬೇಕು. ಮಾತಲ್ಲಿ ಕಥೆ ಹೇಳುವಾಗ ಒಬ್ಬ ಇದ್ದ, ಆತ ಹುಚ್ಚನಾಗಿದ್ದ ಎಂದು ಹೇಳುತ್ತೇವೆ. ಅದನ್ನು ಸಿನಿಮಾದಲ್ಲಿ ತೋರಿಸಿದರೆ ಇದನ್ನು ಹೇಗೆ ತೋರಿಸಿದಿರಿ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ‘ಅನಿಮಲ್ ಆಸಕ್ತಿಕರ ಸಿನಿಮಾ ಎನಿಸಿತು’ ಎಂದಿದ್ದಾರೆ ಮೇಘನಾ.

ಇದನ್ನೂ ಓದಿ: ‘ಅನಿಮಲ್’ ಸಿನಿಮಾದ ದೃಶ್ಯ ನೋಡಿ ಟ್ರೋಲ್ ಮಾಡಿದವರಿಗೆ ರಶ್ಮಿಕಾ ತಿರುಗೇಟು

‘ಅನಿಮಲ್’ ಸಿನಿಮಾ ಕೆಲವರಿಗೆ ಸಾಕಷ್ಟು ಇಷ್ಟ ಆಗಿದೆ. ಮಾಸ್ ಮಂದಿ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಆದರೆ, ಇನ್ನೂ ಕೆಲವರು ಸಿನಿಮಾನ ಬಕ್ವಾಸ್ ಎಂದು ತೆಗಳಿದ್ದಾರೆ. ‘ಅನಿಮಲ್’ ಬಗ್ಗೆ ಮೇಘನಾ ರಾಜ್ ಅಭಿಪ್ರಾಯ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 1:05 pm, Wed, 17 April 24