Angry Rantman: ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಫೇಮಸ್ ಆಗಿದ್ದ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ  

Angry Rantman Death News: ಇತ್ತೀಚಿನ ದಿನಗಳಲ್ಲಿ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ಮಗನ ಸ್ಥಿತಿ ಸರಿ ಇಲ್ಲ ಎಂದಿದ್ದರು. ಈಗ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ ಹೊಂದಿದ್ದಾರೆ.

Angry Rantman: ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಫೇಮಸ್ ಆಗಿದ್ದ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ  
ರ್ಯಾಂಟ್​ಮ್ಯಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 17, 2024 | 3:08 PM

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ (Angry Rantman) ಎಂದೇ ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ. ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದರು. ಸಾಕಷ್ಟು ಜೋಶ್​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಇದರ ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು. ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು. ಅವರ ನಿಧನವಾರ್ತೆ ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿಗೆ ಎಲ್ಲರೂ ಸಾಂತಪ ಸೂಚಿಸುತ್ತಿದ್ದಾರೆ. ಅವರು ನಿಧನ ವಾರ್ತೆ ಅನೇಕರಿಗೆ ಶಾಕಿಂಗ್ ಎನಿಸಿದೆ.

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ‘ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ’ ಎಂದು ಹೇಳಿದ್ದರು. ದಿನ ಕಳೆದಂತೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯ ಹದಗೆಡುತ್ತಲೇ ಹೋಯಿತು. ಈಗ ಅವರು ನಿಧನ ಹೊಂದಿದ್ದಾರೆ ಎಂದು ವರದಿ ಆಗಿದೆ.

ಎರಡು ದಿನಗಳ ಹಿಂದೆ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್ ಒಂದು ಸಿಕ್ಕಿತ್ತು. ಅವರನ್ನು ಸಪೋರ್ಟ್ ಸಿಸ್ಟಮ್​ನಲ್ಲಿ ಇಡಲಾಗಿದೆ ಎಂದು ಹೇಳಲಾಗಿತ್ತು. ಈಗ ವೈದ್ಯರಿಗೆ ಅವರನ್ನು ಉಳಿಸೋಕೆ ಸಾಧ್ಯವಾಗಿಲ್ಲ. ಅವರು ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ವಿನೋದ್ ರಾಜ್ ಸೇರಿ ಅನೇಕರನ್ನು ಪರಿಚಯಿಸಿದ್ದೇಕೆ ದ್ವಾರಕೀಶ್? ವಿಷ್ಣು ಮೇಲಿನ ಸಿಟ್ಟು ಕಾರಣವಾ?

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಪರಿಚಯ ಕನ್ನಡದ ಮಂದಿಗೂ ಇತ್ತು. ಅವರು ‘ಕೆಜಿಎಫ್ 2’ ಸಿನಿಮಾದ ವಿಮರ್ಶೆ ಮಾಡಿದ್ದರು. ‘ರಾಕಿಭಾಯ್ ಪ್ರಧಾನಮಂತ್ರಿ ಆದರೆ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತದೆ’ ಎಂದು ಕೂಗಿ ಹೇಳಿದ್ದರು. 10 ನಿಮಿಷಗಳ ಈ ವಿಡಿಯೋ ಬರೋಬ್ಬರಿ 17 ಲಕ್ಷ ವೀಕ್ಷಣೆ ಕಂಡಿದೆ. ಅವರು ಕೂಗಾಡಿಕೊಂಡು ಸಿನಿಮಾ ವಿಮರ್ಶೆ ಹೇಳಿದ್ದರು. ಯಶ್ ನಟನೆಯನ್ನು ಹಾಡಿ ಹೊಗಳಿದ್ದರು. ಈ ರೀತಿಯ ವಿಡಿಯೋಗಳಿಂದ ಅವರು ಹೆಚ್ಚು ಪರಿಚಿತರಾಗಿದ್ದರು. ಈಗ ಅವರಿಲ್ಲ ಎಂಬ ವಿಚಾರವನ್ನು ಅನೇಕರಿಗೆ ನಂಬೋಕೆ ಆಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:02 pm, Wed, 17 April 24

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ