‘ತತ್ಸಮ ತದ್ಭವ’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ ನಟಿ ಮೇಘನಾ ರಾಜ್

|

Updated on: Sep 09, 2023 | 6:30 AM

ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ‘ನನ್ನ ಪತಿ ಕಾಣೆ ಆಗಿದ್ದಾನೆ’ ಎಂದು ಟ್ರೇರಲ್​ನಲ್ಲಿ ಮೇಘನಾ ರಾಜ್ ಹೇಳುವ ಸಾಲುಗಳು ಗಮನ ಸೆಳೆದಿದೆ. ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ತತ್ಸಮ ತದ್ಭವ’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ ನಟಿ ಮೇಘನಾ ರಾಜ್
ಮೇಘನಾ
Follow us on

ನಟಿ ಮೇಘನಾ ರಾಜ್ (Meghana Raj) ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರ ಸೆಪ್ಟೆಂಬರ್ 15ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕಾಗಿ ಮೇಘನಾ ರಾಜ್ ಅವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ಈ ಸಿನಿಮಾ ಸಖತ್ ಸಸ್ಪೆನ್ಸಿಂಗ್ ಆಗಿರಲಿದೆ ಎನ್ನುವುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ.

2020ರಲ್ಲಿ ಚಿರಂಜೀವಿ ಸರ್ಜಾ ಮೃತಪಟ್ಟರು. ಪತಿಯನ್ನು ಕಳೆದುಕೊಂಡ ಬಳಿಕ ಮೇಘನಾ ರಾಜ್ ಸಾಕಷ್ಟು ಕುಗ್ಗಿದ್ದರು. ಮಗ ಜನಿಸಿದ ಬಳಿಕ ಅವರು ಸ್ವಲ್ಪ ಚೇತರಿಸಿಕೊಂಡರು. ಈಗ ಮಗನ ಆರೈಕೆಯ ಜೊತೆಗೆ ಚಿತ್ರರಂಗದಲ್ಲು ಬ್ಯುಸಿ ಇದ್ದಾರೆ. ‘ತತ್ಸಮ ತದ್ಭವ’ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಲೇ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ.

ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ‘ನನ್ನ ಪತಿ ಕಾಣೆ ಆಗಿದ್ದಾನೆ’ ಎಂದು ಟ್ರೇರಲ್​ನಲ್ಲಿ ಮೇಘನಾ ರಾಜ್ ಹೇಳುವ ಸಾಲುಗಳು ಗಮನ ಸೆಳೆದಿದೆ. ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ.

ಮೇಘನಾ ರಾಜ್ ಕಂಬ್ಯಾಕ್ ಚಿತ್ರಕ್ಕೆ ಅವರ ಗೆಳೆಯ ಪನ್ನಗ ಭರಣ ಅವರು ಬಂಡವಾಳ ಹೂಡಿದ್ದಾರೆ. ಅವರು ಕೂಡ ಪ್ರಮೋಷನ್​ನಲ್ಲಿ ಭಾಗಿ ಆಗುತ್ತಿದ್ದಾರೆ. ವಿವಿಧ ಕಾಲೇಜುಗಳಿಗೆ ತೆರಳಿ ಮೇಘನಾ, ಪ್ರಜ್ವಲ್ ಹಾಗೂ ಪನ್ನಗ ಭರಣ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಬಗೆಯ ಪೋಸ್ಟ್​​ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಈ ಚಾಲೆಂಜ್​ ಗೆದ್ದರೆ ನಿಮಗೆ ಸಿಗಲಿದೆ ಮೇಘನಾ ರಾಜ್ ಭೇಟಿ ಮಾಡುವ ಅವಕಾಶ; ನೀವು ಮಾಡಬೇಕಾಗಿದ್ದಿಷ್ಟೇ..

ವಿಶಾಲ್ ಆತ್ರೇಯ ಅವರ ನಿರ್ದೇಶನದಲ್ಲಿ ‘ತತ್ಸಮ ತದ್ಭವ’ ಚಿತ್ರ ಮೂಡಿಬಂದಿದೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಹಾಡುಗಳು ಗಮನ ಸೆಳೆಯುತ್ತಿವೆ. ದೊಡ್ಡ ತಾರಾ ಬಳಗ ಚಿತ್ರದಲ್ಲಿದೆ. ಸದ್ಯ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಇವುಗಳ ಜೊತೆ ‘ತತ್ಸಮ ತದ್ಭವ’ ಸ್ಪರ್ಧಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ