Sign In

By signing in or creating an account, you agree with Associated Broadcasting Company's Terms & Conditions and Privacy Policy.

’ವೀರಪುತ್ರ’ನಾಗಿ ಅಗ್ನಿಸಾಕ್ಷಿ ಸಿದ್ದಾರ್ಥ್: ಖಡಕ್ ಲುಕ್​ನಲ್ಲಿ ಚಾಕಲೇಟ್ ಹೀರೋ ವಿಜಯ್ ಸೂರ್ಯ

Vijay Surya: 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ವಿಜಯ್ ಸೂರ್ಯ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ವೀರಪುತ್ರ' ಹೆಸರಿನ ಸಿನಿಮಾದಲ್ಲಿ ವಿಜಯ್ ನಟಿಸಿದ್ದು, ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

’ವೀರಪುತ್ರ’ನಾಗಿ ಅಗ್ನಿಸಾಕ್ಷಿ ಸಿದ್ದಾರ್ಥ್: ಖಡಕ್ ಲುಕ್​ನಲ್ಲಿ ಚಾಕಲೇಟ್ ಹೀರೋ ವಿಜಯ್ ಸೂರ್ಯ
ವಿಜಯ್ ಸೂರ್ಯ
Follow us
ಮಂಜುನಾಥ ಸಿ.
|

Updated on: Sep 08, 2023 | 10:20 PM

ಕಿರುತೆರೆಯಲ್ಲಿ (Tv) ಮಿಂಚಿ ಬೆಳ್ಳಿತೆರೆ ಪ್ರವೇಶಿಸಿ ದೊಡ್ಡ ಯಶಸ್ಸು ಕಂಡ ದೊಡ್ಡ ಬಳಗವೇ ಕನ್ನಡ ಚಿತ್ರರಂಗದಲ್ಲಿದೆ. ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಾಧಿಕಾ ಪಂಡಿತ್, ಮಯೂರಿ ಇನ್ನೂ ಹಲವರ ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಈಗಲೂ ಆಗಾಗ್ಗೆ ಕಿರುತೆರೆಯ ಸ್ಟಾರ್​ಗಳು ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. ಕೆಲವರು ಯಶಸ್ಸು ಗಳಿಸುತ್ತಾರೆ ಕೆಲವರು ಇಲ್ಲ. ಕಿರುತೆರೆಯ ಸ್ಟಾರ್ ಆಗಿರುವ ವಿಜಯ್ ಸೂರ್ಯ ಇದೀಗ ಹೊಸ ಸಿನಿಮಾದೊಟ್ಟಿಗೆ ಹಿರಿತೆರೆಗೆ ಎಂಟ್ರಿ ನೀಡಿದ್ದಾರೆ.

ಜನಪ್ರಿಯ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ವಿಜಯ್ ಸೂರ್ಯ ಈಗ ‘ವೀರಪುತ್ರ’ ಆಗಿದ್ದಾರೆ. ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ಹೊಸ ಸಿನಿಮಾ ‘ವೀರಪುತ್ರ’ದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಾಕಲೇಟ್ ಹೀರೋನಂಥಿದ್ದ ವಿಜಯ್ ಸೂರ್ಯ ಈ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ಕೂದಲು ಬಿಟ್ಟು, ರಡಗ್ ಆಗಿ ಕಾಣಿಸಿಕೊಂಡಿದ್ದಾರೆ.

ಡಾ.ದೇವರಾಜ್.ಎಸ್ ಅವರು ‘ವೀರಪುತ್ರ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ‘ಸಪ್ಲಿಮೆಂಟರಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ‘ವೀರಪುತ್ರ’ ಸಿನಿಮಾವು ಮೆಡಿಕಲ್ ಮಾಫಿಯಾ ಹಾಗೂ ಫ್ಯಾಮಿಲಿ ರಿವೇಂಜ್ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ದೇವರಾಜ್ ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತಿದ್ದಾರೆ. ‘ಸಂಪ್ಲಿಮೆಂಟರಿ’, ‘ಧೀರಸಾಮ್ರಾಟ್’ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಗುರು ಬಂಡಿ ಅವರೇ ಈ ಸಿನಿಮಾಖ್ಕೂ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:‘ಜೈ ಭೀಮ್​’ಗೆ ರಾಷ್ಟ್ರ ಪ್ರಶಸ್ತಿ ಮಿಸ್​ ಆಗಿದ್ದಕ್ಕೆ ಪ್ರಕಾಶ್​ ರಾಜ್​ ಬೇಸರ; ವಿಜಯ್​ ರಾಜಕೀಯದ ಎಂಟ್ರಿ ಬಗ್ಗೆ ನಟನ ಅಭಿಪ್ರಾಯ ಏನು?

ವಿಜಯ್ ಸೂರ್ಯ ಅವರಿಗೆ ಎದುರಾಗಿ ನಾಯಕಿಯಾಗಿ ಲೇಖಚಂದ್ರ ನಟಿಸುತ್ತಿದ್ದಾರೆ. ಹಿರಿಯ ನಟಿಯಾದ ಉಮಾಶ್ರೀ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ ಬರೆದಿದ್ದಾರೆ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಸಂಕಲನವನ್ನು ಸಿ. ರವಿಚಂದ್ರನ್ ಮಾಡಿದ್ದಾರೆ, ಉದಯ್ ಆದಿತ್ಯ ಸಿನಿಮಾಟೊಗ್ರಫಿ ಸಿನಿಮಾಕ್ಕಿದೆ. ಜನಪ್ರಿಯ ಗೀತ ಸಾಹಿತಿ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಹೈದ್ರಾಬಾದ್ ಹಾಗೂ ಬೆಂಗಳೂರಿನಲ್ಲಿ 60ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ. ಉಳಿದ ಕೆಲವು ಭಾಗದ ಚಿತ್ರೀಕರಣ ಅಕ್ಟೋಬರ್​ ತಿಂಗಳಿನಿಂದ ಪ್ರಾರಂಭ ಆಗಲಿದೆ.

ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಆಗಿರುವ ವಿಜಯ್ ಸೂರ್ಯಗೆ ಇದು ಮೊದಲ ಸಿನಿಮಾ ಏನಲ್ಲ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿರುವ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ಸೂರ್ಯ ಪ್ರಸ್ತುತ ‘ಪ್ರೇಮಲೋಕ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿ ನಡುವೆಯೇ ‘ವೀರಪುತ್ರ’ ಸಿನಿಮಾದ ಚಿತ್ರೀಕರಣವನ್ನೂ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ