ಹುಟ್ಟುಹಬ್ಬಕ್ಕೆ ಹೊಸಚಿತ್ರ ಘೋಷಣೆ: ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಧನ್ವೀರ್

Dhanveer Gowda: ಧನ್ವೀರ್ ಗೌಡ ಇಂದು (ಸೆಪ್ಟೆಂಬರ್ 8) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಧನ್ವೀರ್ ಹುಟ್ಟುಹಬ್ಬದ ದಿನ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧನ್ವೀರ್.

ಹುಟ್ಟುಹಬ್ಬಕ್ಕೆ ಹೊಸಚಿತ್ರ ಘೋಷಣೆ: ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಧನ್ವೀರ್
ಧನ್ವೀರ್ ಗೌಡ
Follow us
ಮಂಜುನಾಥ ಸಿ.
|

Updated on: Sep 08, 2023 | 7:40 PM

ಕನ್ನಡ ಚಿತ್ರರಂಗದ (Sandalwood) ಯುವನಟ ಧನ್ವೀರ್ (Dhanveer Gowda) ಅವರ ಹುಟ್ಟುಹಬ್ಬ ಇಂದು. ನಟ ದರ್ಶನ್ ಸೇರಿದಂತೆ ಹಲವು ನಟರು ಧನ್ವೀರ್​ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಧನ್ವೀರ್ ನಟಿಸುತ್ತಿರುವ ಸಿನಿಮಾಗಳ ಪೋಸ್ಟರ್​ಗಳು ಸಹ ಇಂದು ಬಿಡುಗಡೆ ಆಗಿವೆ. ಇದೆಲ್ಲದರ ಜೊತೆಗೆ ಇಂದೇ ಧನ್ವೀರ್ ನಟಿಸುತ್ತಿರುವ ಐದನೇ ಸಿನಿಮಾದ ಘೋಷಣೆ ಸಹ ಆಗಿದೆ. ಮಾಸ್, ಲವ್ ಸಬ್ಜೆಟ್ಕ್ ಸಿನಿಮಾಗಳಲ್ಲಿ ನಟಿಸಿದ್ದ ಧನ್ವೀರ್ ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಆಯ್ದುಕೊಂಡಿದ್ದಾರೆ.

ಯುವ ನಿರ್ದೇಶಕ ರಘುಕುಮಾರ್ ಓ ಆರ್ ಧನ್ವೀರ್​ರ ಐದನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಕಥೆ ಹಾಗೂ ಚಿತ್ರಕತೆಯನ್ನು ನಿರ್ದೇಶಕ ರಘುಕುಮಾರ್ ಓ ಆರ್ ಅವರೇ ಬರೆದಿದ್ದಾರೆ. ರಘುಕುಮಾರ್ ಅವರಿಗೆ ಇದು ಮೊದಲ ಸಿನಿಮಾ. ಹೊಸ ನಿರ್ದೇಶಕರೊಟ್ಟಿಗೆ ಧನ್ವೀರ್ ನಟಿಸುತ್ತಿದ್ದು, ಈ ಸಿನಿಮಾ ಸಮೃದ್ಧಿ ಫಿಲಂಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ.

ಧನ್ವೀರ್ ನಟಿಸಲಿರುವ ಈ ಹೊಸ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಪ್ರಸ್ತುತ ‘ಡಿ-05’ ಎಂದು ಕರೆಯಲಾಗುತ್ತಿದೆ. ಸಿನಿಮಾದ ಮೊದಲ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಪೋಸ್ಟರ್​ನಲ್ಲಿ ಮೂಳೆಗಳ ರಾಶಿಯ ನಡುವೆ ಬಂದೂಕು ಹಿಡಿದು ನಿಂತ ವ್ಯಕ್ತಿಯೊಬ್ಬನ ಬೆನ್ನು ಮಾತ್ರವೇ ಕಾಣುತ್ತಿದೆ. ಆ ವ್ಯಕ್ತಿಯ ನೆರಳು ಅಸುರನ ರೂಪದಲ್ಲಿದೆ. ಪೋಸ್ಟರ್ ಗಮನ ಸೆಳೆಯುತ್ತಿದ್ದು, ಇದೊಂದು ಪಕ್ಕಾ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಎಂಬುದು ತಿಳಿಯುತ್ತಿದೆ. ಜೊತೆಗೆ ನಾಯಕನಿಗೆ ಎರಡು ಭಿನ್ನ ವ್ಯಕ್ತಿತ್ವ ಇರಬಹುದಾದ ಅನುಮಾನವನ್ನೂ ಪೋಸ್ಟರ್ ಮೂಡಿಸುತ್ತಿದೆ.

ಇದನ್ನೂ ಓದಿ:ರಕ್ತ ನೋಡೋಕೆ ಬಂದವನಲ್ಲ ಈ ‘ವಾಮನ’; ಆ್ಯಕ್ಷನ್ ಮೂಲಕ ಗಮನ ಸೆಳೆದ ಧನ್ವೀರ್

ಧನ್ವೀರ್ ನಟಿಸಲಿರುವ ಈ ಹೊಸ ಸಿನಿಮಾದಲ್ಲಿ ರಂಗಾಯಣ ರಘು , ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನು ಕೆಲವು ಹಿರಿಯ ಕಲಾವಿದರು ನಟಿಸುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾದ ಶೂಟಿಂಗ್ ಪ್ರಾರಂಭ ಮಾಡಲಿದ್ದೇನೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ಹೇಳಿದೆ.

‘ಡಿ 05’ ಸಿನಿಮಾ ನಿರ್ದೇಶನ ಮಾಡುತ್ತಿರುವ ರಘುಕುಮಾರ್ ಓ ಆರ್ ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿದ ಅನುಭವ ಹೊಂದಿದ್ದಾರೆ. “ಕೋಟಿಗೊಬ್ಬ 3” ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ದಿ ಬೆಲ್’ ಹೆಸರಿನ ಶಾರ್ಟ್ ಫಿಲಂ ನಿರ್ದೇಶಿಸಿದ್ದಾರೆ. ಇವರ ‘ದಿ ಬೆಲ್’ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮಾತ್ರವಲ್ಲದೆ ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್ ನಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆವ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಡಿ 05 ಸಿನಿಮಾದ ಸಿನಿಮಾಟೊಗ್ರಾಫರ್ ಆಗಿ ಕಾರ್ತಿಕ್ ಎಸ್ ಕೆಲಸ ಮಾಡಲಿದ್ದಾರೆ, ಮ್ಯೂಸಿಕ್ ಅನ್ನು ಜುಡಾ ಸ್ಯಾಂಡಿ ನೀಡಲಿದ್ದಾರೆ, ಶಬ್ದ ವಿನ್ಯಾಸವನ್ನು ರಾಜನ್ ಹಾಗೂ ಸಂಕಲನವನ್ನು ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ