AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ನೋಡೋಕೆ ಬಂದವನಲ್ಲ ಈ ‘ವಾಮನ’; ಆ್ಯಕ್ಷನ್ ಮೂಲಕ ಗಮನ ಸೆಳೆದ ಧನ್ವೀರ್

ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ‘ವಾಮನ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್​​ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಆ್ಯಕ್ಷನ್ ಟೀಸರ್ ಇತ್ತೀಚೆಗೆ ಮೈಸೂರಿನಲ್ಲಿ ರಿಲೀಸ್ ಆಯಿತು. ಧನ್ವೀರ್ ಅವರು ಟೀಸರ್​ನಲ್ಲಿ ಗಮನ ಸೆಳೆದರು. ‘ಅವನು ಬರೀ ರಕ್ತ ನೋಡೋಕೆ ಬಂದವನಲ್ಲ, ರಕ್ತದ ಹಿಂದಿರೋ ಚರಿತ್ರೆನೆ ಕೆದಕೋಕೆ ಬಂದವನು’ ಎಂಬ ಡೈಲಾಗ್ ಟೀಸರ್​ನಲ್ಲಿ ಹೈಲೈಟ್ ಆಗಿದೆ.

ರಕ್ತ ನೋಡೋಕೆ ಬಂದವನಲ್ಲ ಈ ‘ವಾಮನ’; ಆ್ಯಕ್ಷನ್ ಮೂಲಕ ಗಮನ ಸೆಳೆದ ಧನ್ವೀರ್
ರಾಜೇಶ್ ದುಗ್ಗುಮನೆ
|

Updated on: Aug 18, 2023 | 2:47 PM

Share

ನಟ ಧನ್ವೀರ್ ಅವರು 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿವರೆಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಧನ್ವೀರ್ (Dhanveer) ಆ್ಯಕ್ಷನ್ ಪ್ರಿಯರು. ಆ್ಯಕ್ಷನ್ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದಾರೆ. ಈಗ ಅವರು ‘ವಾಮನ’ ಚಿತ್ರದ (Vamana Movie) ಮೂಲಕ ಬರೋಕೆ ರೆಡಿ ಆಗಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಪ್ರಿಯರಿಗೆ ಭಾರೀ ಭೋಜನ ಇರಲಿದೆ. ಇತ್ತೀಚೆಗೆ ರಿಲೀಸ್ ಆದ ಆ್ಯಕ್ಷನ್ ಟೀಸರ್ ಗಮನ ಸೆಳೆಯುತ್ತಿದೆ. ಈ ಟೀಸರ್ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ‘ವಾಮನ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್​​ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಆ್ಯಕ್ಷನ್ ಟೀಸರ್ ಇತ್ತೀಚೆಗೆ ಮೈಸೂರಿನಲ್ಲಿ ರಿಲೀಸ್ ಆಯಿತು. ಧನ್ವೀರ್ ಅವರು ಟೀಸರ್​ನಲ್ಲಿ ಗಮನ ಸೆಳೆದರು. ‘ಅವನು ಬರೀ ರಕ್ತ ನೋಡೋಕೆ ಬಂದವನಲ್ಲ, ರಕ್ತದ ಹಿಂದಿರೋ ಚರಿತ್ರೆನೆ ಕೆದಕೋಕೆ ಬಂದವನು’ ಎಂಬ ಡೈಲಾಗ್ ಟೀಸರ್​ನಲ್ಲಿ ಹೈಲೈಟ್ ಆಗಿದೆ. ಈ ಮೊದಲು ರಿಲೀಸ್ ಆದ ಚಿತ್ರದ ಹಾಡುಗಳು ಸಾಕಷ್ಟು ಗಮನ ಸೆಳೆದಿದೆ.

‘ಇದು ಆ್ಯಕ್ಷನ್ ಸಿನಿಮಾ. ಈ ಚಿತ್ರದಲ್ಲಿ ಯಾವ ರೀತಿಯ ಆ್ಯಕ್ಷನ್ ಇರುತ್ತದೆ ಎಂಬುದನ್ನು ನಾವು ತೋರಿಸಬೇಕಿತ್ತು. ಅದಕ್ಕಾಗಿ ಈ ಟೀಸರ್ ರಿಲೀಸ್ ಮಾಡಿದ್ದೇವೆ. ವಾಮನ ಚಿತ್ರದಲ್ಲಿ ನಾಲ್ಕು ಆ್ಯಕ್ಷನ್ ದೃಶ್ಯಗಳಿವೆ’ ಎಂದು ನಿರ್ದೇಶಕ ಶಂಕರ್ ರಾಮನ್ ಮಾಹಿತಿ ನೀಡಿದ್ದಾರೆ.

ಚಿತ್ರದ ಮೂರು ಫೈಟ್​ಗೆ ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭಿನ್ನ ರೀತಿಯ ಫೈಟ್​ನ ಇಡಲಾಗಿದೆಯಂತೆ. ಕಥೆಯ ಜೊತೆಯಲ್ಲೇ ಸಾಗುವ ಈ ಫೈಟ್ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ವಿಕ್ರಮ್ ಮೋರ್ ಕೂಡ ಸಾಹಸ ದೃಶ್ಯವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ‘ವಾಮನ’ ಅವತಾರದ ಬಗ್ಗೆ ನಟ ಧನ್ವೀರ್ ಮಾತು; ಮಾಸ್ ಆಗಿ ಬರ್ತಿದೆ ಸಿನಿಮಾ

ವಾಮನ ಎಂದರೇನು ಎನ್ನುವ ಪ್ರಶ್ನೆಗೂ ತಂಡ ಉತ್ತರ ನೀಡಿದೆ. ದಶಾವತಾರದಲ್ಲಿ ಬರುವ ಐದನೇ ಅವತಾರವೇ ವಾಮನ. ಸಿನಿಮಾದಲ್ಲೂ ದುಷ್ಟರನ್ನು ಈ ವಾಮನ ನಾಶ ಮಾಡುತ್ತಾನೆ. ರೌಡಿಸಂ, ಡ್ರಗ್ಸ್ ಮಾಫಿಯಾ, ಭೂಗತಲೋಕದ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ  ಹುಣಸೂರು ಶಾಸಕ ಹರೀಶ್ ಗೌಡ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಹಾಜರಿ ಹಾಕಿದ್ದರು.

ಸಂಪತ್ ರಾಜ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ತಾರಾ, ಅವಿನಾಶ್ ಮೊದಲಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಚೇತನ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು