‘ನಾನೆಂದೂ ನಿನ್ನವ, ಕೇವಲ ನಿನ್ನವ..’; ಸ್ಪಂದನಾ ಬಗ್ಗೆ ಭಾವುಕ ಸಾಲುಗಳನ್ನು ಹೇಳಿದ ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಅವರು ಹಲವು ವರ್ಷಗಳ ಕಾಲ ಸುಖ ಸಂಸಾರ ನಡೆಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು. ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟರು. ಮೊದಲ ಬಾರಿಗೆ ಪತ್ನಿ ಕುರಿತು ಅವರು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

‘ನಾನೆಂದೂ ನಿನ್ನವ, ಕೇವಲ ನಿನ್ನವ..’; ಸ್ಪಂದನಾ ಬಗ್ಗೆ ಭಾವುಕ ಸಾಲುಗಳನ್ನು ಹೇಳಿದ ವಿಜಯ್ ರಾಘವೇಂದ್ರ
ಸ್ಪಂದನಾ
Follow us
ರಾಜೇಶ್ ದುಗ್ಗುಮನೆ
|

Updated on:Aug 18, 2023 | 10:49 AM

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೃತಪಟ್ಟು ಇಂದಿಗೆ (ಆಗಸ್ಟ್ 18) 13 ದಿನಗಳು ಕಳೆದಿವೆ. ಅವರು ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಕುಟುಂಬದವರ ಬಳಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲಾ ಸದಸ್ಯರು ದುಃಖದಲ್ಲಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಬಳಿಕ ವಿಜಯ್ ರಾಘವೇಂದ್ರ (Vijay Raghavendra) ಅವರು ಸೈಲೆಂಟ್ ಆಗಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮೌನ ಮುರಿದ್ದಾರೆ. ಪತ್ನಿಯ ಬಗ್ಗೆ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಅವರು ಹಲವು ವರ್ಷಗಳ ಕಾಲ ಸುಖ ಸಂಸಾರ ನಡೆಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು. ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟರು. ಆ ನೋವಿನಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಮೊದಲ ಬಾರಿಗೆ ಪತ್ನಿ ಕುರಿತು ಅವರು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಪಂದನಾ ವಿಜಯ್ 11ನೇ ದಿನದ ಕಾರ್ಯದಲ್ಲಿ ಸುಮಾರು 4 ಸಾವಿರ ಜನ ಭಾಗಿಯಾಗುವ ನಿರೀಕ್ಷೆ, 75 ಬಾಣಸಿಗರಿಂದ ಅಡುಗೆ ತಯಾರಿ

ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ

ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ

ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ

ನಾನೆಂದೂ ನಿನ್ನವ.. ಕೇವಲ ನಿನ್ನವ..

ಹೀಗೆ ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಧ್ವನಿಯಲ್ಲಿ ನೋವು ಕಾಣಿಸಿದೆ.

ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಆಗಸ್ಟ್ 16ರಂದು ಸ್ಪಂದನಾ ಅವರ 11ನೇ ದಿನದ ಕಾರ್ಯ ನಡೆದಿದೆ. ಮಲ್ಲೇಶ್ವರದ ಕಬಡ್ಡಿ ಗ್ರೌಂಡ್​ನಲ್ಲಿ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ಪಂದನಾ ತಂದೆ ಶಿವರಾಂ ಮನೆಯಲ್ಲಿ ಶಾಂತಿ ಹೋಮ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:15 am, Fri, 18 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ