ತೆಲುಗಿನಲ್ಲಿ ಹಿಟ್ ಆದ ‘ಇರುಮುಡಿ’; ಟಕ್ಕರ್ ಕೊಡೋಕೆ ರೆಡಿ ಆದ ‘ಟಾಕ್ಸಿಕ್’

ಬಾಕ್ಸ್ ಆಫೀಸ್‌ನಲ್ಲಿ ಮೈತ್ರಿ ಮತ್ತು ಎಸ್‌ವಿಸಿ ಸಂಸ್ಥೆಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ರವಿತೇಜ ಅವರ 'ಇರುಮುಡಿ' ಯಶಸ್ಸಿನ ಓಟಕ್ಕೆ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ಬ್ರೇಕ್ ಹಾಕಲು ರೆಡಿ ಆಗಿದೆ.  ‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಹಾಗೂ ಯಶ್ ಅವರ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ದೊಡ್ಡ ಪ್ರಮಾಣದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದೆ. 

ತೆಲುಗಿನಲ್ಲಿ ಹಿಟ್ ಆದ ‘ಇರುಮುಡಿ’; ಟಕ್ಕರ್ ಕೊಡೋಕೆ ರೆಡಿ ಆದ ‘ಟಾಕ್ಸಿಕ್’
ಟಾಕ್ಸಿಕ್-ಇರುಮುಡಿ

Updated on: Aug 24, 2026 | 9:06 AM

ಮುಖ್ಯಾಂಶಗಳು

  • 'ಇರುಮುಡಿ' ಬಾಕ್ಸ್ ಆಫೀಸ್ ಧಮಾಕ
  • ಥಿಯೇಟರ್ ಕಬ್ಜಾ ಮಾಡಲು 'ಟಾಕ್ಸಿಕ್' ಪ್ಲಾನ್
  • ಮೈತ್ರಿ ಹಾಗೂ ದಿಲ್ ರಾಜು ಮುಖಾಮುಖಿ

‘ಟಾಕ್ಸಿಕ್’ ಸಿನಿಮಾ (Toxic Movie) ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಹೇಳಲಾಗಿತ್ತು. ಆದರೆ, ತೆಲುಗಿನಲ್ಲಿ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾ ತೆರೆಗೆ ಬಂದಿದೆ. ಪ್ರದರ್ಶನದ ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿ ಪ್ರಮುಖ ವಿತರಕರ ನಡುವೆ ಕಠಿಣ ಪೈಪೋಟಿ ಶುರುವಾಗಿದೆ ಎಂದು ವರದಿ ಆಗಿದೆ.

ಮಾಸ್ ಮಹಾರಾಜ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ಪ್ರದರ್ಶನ ಕಂಡ ಕೆಲವೇ ದಿನಗಳಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಭಕ್ತಿ ಪ್ರಧಾನ ಕಥಾವಸ್ತು ಮತ್ತು ಕೌಟುಂಬಿಕ ಕಥೆ ಹೊಂದಿರುವುದರಿಂದ ಸಿನಿಮಾ ದೀರ್ಘಕಾಲ ಓಡಲಿದೆ ಎಂದು ವಿತರಕರು ನಿರೀಕ್ಷಿಸಿದ್ದಾರೆ.

‘ಇರುಮುಡಿ’ ಚಿತ್ರವನ್ನು ಮೈತ್ರಿ ಸಂಸ್ಥೆ ನಿರ್ಮಾಣ ಮಾಡಿದೆ. ‘ಟಾಕ್ಸಿಕ್’ ಚಿತ್ರವನ್ನು ತೆಲುಗಿನಲ್ಲಿ ದಿಲ್ ರಾಜು ವಿತರಣೆ ಮಾಡುತ್ತಿದ್ದಾರೆ. ಈಗ ತೆಲುಗಿನ ಪ್ರಮುಖ ಪ್ರದೇಶವಾದ ನಿಜಾಂ ಭಾಗದಲ್ಲಿ ‘ಟಾಕ್ಸಿಕ್’ vs ‘ಇರುಮುಡಿ’ ನಡುವೆ ಭರ್ಜರಿ ಫೈಟ್ ಏರ್ಪಟ್ಟಿದೆ.

‘ಟಾಕ್ಸಿಕ್’ ನಿಕಾಂ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗಲಿದೆ. ದಿಲ್ ರಾಜು ಅವರ ಎಸ್‌ವಿಸಿ ಮತ್ತು ಏಷ್ಯನ್ ಸಂಸ್ಥೆಯ ಬಹುತೇಕ ಚಿತ್ರಮಂದಿರಗಳು ‘ಟಾಕ್ಸಿಕ್’ ಪಾಲಾಗಲಿವೆ. ಪರಿಣಾಮವಾಗಿ ಬುಧವಾರದಿಂದ ‘ಇರುಮುಡಿ’ ಸಿನಿಮಾಗೆ ದೊಡ್ಡ ಹೊಡೆತ ಬೀಳುತ್ತಿದೆ.

ಮೈತ್ರಿ ಮೂವಿ ಮೇಕರ್ಸ್ ‘ಇರುಮುಡಿ’ ಚಿತ್ರವನ್ನು ನೈಜಾಂನಲ್ಲಿ ವಿತರಣೆ ಮಾಡುತ್ತಿದೆ. ಅವರು ವೇಗವಾಗಿ ಚಿತ್ರಮಂದಿರಗಳನ್ನು ಕಾಯ್ದಿರಿಸುತ್ತಿದ್ದಾರೆ.

ಇದನ್ನೂ ಓದಿ: ‘ಅನಿಮಲ್’ ಕಲೆಕ್ಷನ್ ಭವಿಷ್ಯ ನುಡಿದಿದ್ದ ಸಚಿವ ಮಲ್ಲಾ ರೆಡ್ಡಿಯಿಂದ ‘ಟಾಕ್ಸಿಕ್’ ಕಲೆಕ್ಷನ್ ಭವಿಷ್ಯ

‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಹಾಗೂ ಯಶ್ ಅವರ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ದೊಡ್ಡ ಪ್ರಮಾಣದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದೆ. ಸಿನಿಮಾಗೆ ವಿವಿಧ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುವ ಕೆಲಸ ಕೂಡ ನಡೆಯುತ್ತಿದೆ. ರುಕ್ಮಿಣಿ ವಸಂತ್,  ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಶ್ನೆ:  ಟಾಕ್ಸಿಕ್ ರಿಲೀಸ್ ಯಾವಾಗ?
ಉತ್ತರ: ಆಗಸ್ಟ್ 26

ಪ್ರಶ್ನೆ:  ಟಾಕ್ಸಿಕ್ ಚಿತ್ರದ ನಿರ್ದೇಶನ ಯಾರದ್ದು?
ಉತ್ತರ: ಗೀತು ಮೋಹನ್​ದಾಸ್

ಪ್ರಶ್ನೆ: ಟಾಕ್ಸಿಕ್ ಚಿತ್ರದಲ್ಲಿ ಯಶ್ ಅವರ ಪಾತ್ರದ ಹೆಸರೇನು?
ಉತ್ತರ: ರಾಯ ಹಾಗೂ ಟಿಕೆಟ್

 

Published On - 7:01 am, Mon, 24 August 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us