‘ನಾ ನಿನ್ನ ಬಿಡಲಾರೆ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಇಲ್ಲಿದೆ ಹಾರರ್ ಟ್ರೇಲರ್

1979ರಲ್ಲಿ ‘ನಾ ನಿನ್ನ ಬಿಡಲಾರೆ’ ಸಿನಿಮಾ ಬಂದಿತ್ತು. ಈಗ ಅದೇ ಶೀರ್ಷಿಕೆಯಲ್ಲಿ ಹೊಸದೊಂದು ಹಾರರ್​ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ತರುಣ್ ಸುಧೀರ್​, ಚೇತನ್ ಕುಮಾರ್​ ಮುಂತಾದವರು ಶುಭ ಕೋರಿದ್ದಾರೆ. ನವೆಂಬರ್​ 29ರಂದು ‘ನಾ ನಿನ್ನ ಬಿಡಲಾರೆ’ ಚಿತ್ರ ಬಿಡುಗಡೆ ಆಗಲಿದೆ.

‘ನಾ ನಿನ್ನ ಬಿಡಲಾರೆ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಇಲ್ಲಿದೆ ಹಾರರ್ ಟ್ರೇಲರ್
‘ನಾ ನಿನ್ನ ಬಿಡಲಾರೆ’ ಸಿನಿಮಾ ಪೋಸ್ಟರ್​

Updated on: Nov 17, 2024 | 8:10 PM

ಹಾರರ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ‘ನಾ ನಿನ್ನ ಬಿಡಲಾರೆ’ ಚಿತ್ರದ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಅನಂತ್ ನಾಗ್, ಲಕ್ಷ್ಮಿ ಜೋಡಿಯಾಗಿ ನಟಿಸಿದ್ದ ಆ ಸಿನಿಮಾದಲ್ಲಿ ಬೆಚ್ಚಿ ಬೀಳಿಸುವ ಕಥೆ ಇತ್ತು. ಈಗ ಮತ್ತೆ ಅದೇ ಶೀರ್ಷಿಕೆಯನ್ನು ಇಟ್ಟುಕೊಂಡು ಹೊಸ ಹಾರರ್​ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಕೂಡ ದೆವ್ವ-ಭೂತದ ಕಹಾನಿ ಇದೆ. ಸಿನಿಮಾದ ಝಲಕ್ ತೋರಿಸಲು ಟ್ರೇಲರ್​ ಬಿಡುಗಡೆ ಆಗಿದೆ. ಭಾರತಿ ಬಾಲಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಜಿ.ಎಸ್. ಅವರು ನಿರ್ದೇಶನ ಮಾಡಿದ್ದಾರೆ.

‘ನಾ ನಿನ್ನ ಬಿಡಲಾರೆ’ ಸಿನಿಮಾ ನವೆಂಬರ್​ 29ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ಅಂಬಾಲಿ ಭಾರತಿ, ಪಂಚಿ, ಕೆ.ಎಸ್. ಶ್ರಿಧರ್, ಹರಿಣಿ ಶ್ರೀಕಾಂತ್, ಮಹಾಂತೇಶ್, ಶ್ರೀನಿವಾಸ್ ಪ್ರಭು ಮುಂತಾದವರು ನಟಿಸಿದ್ದಾರೆ. ಟ್ರೇಲರ್​ ಮೂಲಕ ಸಿನಿಮಾ ಬಗ್ಗೆ ಕೌತುಕ ಮೂಡಿಸಲಾಗಿದೆ. ದೆವ್ವ, ಆತ್ಮ, ದೇವರು ಮುಂತಾದ ಕಾನ್ಸೆಪ್ಟ್​ಗಳ ಜೊತೆ ಹಾರರ್​ ಮತ್ತು ಸಸ್ಪೆನ್ಸ್-ಥ್ರಿಲ್ಲಿಂಗ್ ಅಂಶಗಳು ಈ ಸಿನಿಮಾದಲ್ಲಿ ಇವೆ ಎಂಬುದನ್ನು ಟ್ರೇಲರ್ ಮೂಲಕ ತೋರಿಸಲಾಗಿದೆ.

Naa Ninna Bidalare Trailer | Naveen GS | Ambali Bhaarati, Panchi | MS Thyagaraj | A2 Music

ನಟಿ ಅಂಬಾಲಿ ಭಾರತಿ ಅವರು ಈ ಸಿನಿಮಾದಲ್ಲಿ ಆ್ಯಕ್ಷನ್​ ಮೆರೆದಿದ್ದಾರೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಖ್ಯಾತ ನಿರ್ದೇಶಕ ಚೇತನ್ ಕುಮಾರ್​ ಅವರು ಈ ಟ್ರೇಲರ್​ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಂಬಾಲಿ ಭಾರತಿ ಮಾಡಿರುವ ಸಾಹಸ ದೃಶ್ಯಗಳನ್ನು ಅವರು ಹೊಗಳಿದರು.

‘ನಾ ನಿನ್ನ ಬಿಡಲಾರೆ’ ಸಿನಿಮಾ ಟೀಮ್

ಅದೇ ರೀತಿ, ನಿರ್ದೇಶಕ ತರುಣ್ ಸುಧೀರ್​ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ‘ಪಾತ್ರಕ್ಕಾಗಿ ಅಂಬಾಲಿ ಭಾರತಿ ತೆಗೆದುಕೊಂಡ ಸಾಹಸ ದೃಶ್ಯಗಳ ರಿಸ್ಕ್ ಅದ್ಭುತವಾಗಿದೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಅವರು ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ಘೋಷಣೆಯಾಯ್ತು ಭಾರತದ ಅತ್ಯುತ್ತಮ ಹಾರರ್ ಸಿನಿಮಾದ ಎರಡನೇ ಭಾಗ

1979ರಲ್ಲಿ ತೆರೆಕಂಡ ‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಕೃಪೆಯ ಬಗ್ಗೆ ತೋರಿಸಲಾಗಿತ್ತು. ಈಗ ಹೊಸ ‘ನಾ ನಿನ್ನ ಬಿಡಲಾರೆ’ ಚಿತ್ರದ ಟ್ರೇಲರ್​ನಲ್ಲಿ ಕೂಡ ರಾಯರ ಪೂಜೆಯ ದೃಶ್ಯಗಳು ಕಾಣಿಸಿವೆ. ಆ ಕಾರಣದಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಯೂಟ್ಯೂಬ್​ನಲ್ಲಿ ಟ್ರೇಲರ್​ ನೋಡಿದ ಹಲವರು ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us