AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುಕ ಹುಟ್ಟಿಸುವ ಹಾರರ್​ ಸಿನಿಮಾ ‘ಶೈತಾನ್​’; ಒಟಿಟಿ ಎಂಟ್ರಿಗೆ ಸಮಯ ನಿಗದಿ

ಅಜಯ್​ ದೇವಗನ್​ ಮತ್ತು ಆರ್​. ಮಾಧವನ್​ ಅವರು ‘ಶೈತಾನ್​’ ಸಿನಿಮಾದಲ್ಲಿ ಮುಖಾಮುಖಿ ಆಗಿದ್ದಾರೆ. ವಶೀಕರಣದ ಕಹಾನಿ ಈ ಸಿನಿಮಾದಲ್ಲಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ ‘ಶೈತಾನ್​’ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಹಾರರ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಸಖತ್​ ಥ್ರಿಲ್​ ನೀಡಲಿದೆ.

ನಡುಕ ಹುಟ್ಟಿಸುವ ಹಾರರ್​ ಸಿನಿಮಾ ‘ಶೈತಾನ್​’; ಒಟಿಟಿ ಎಂಟ್ರಿಗೆ ಸಮಯ ನಿಗದಿ
ಜಾನಕಿ ಬೋಡಿವಾಲಾ, ಆರ್​. ಮಾಧವನ್​
ಮದನ್​ ಕುಮಾರ್​
|

Updated on: May 03, 2024 | 5:10 PM

Share

ಈ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್​ ಎನಿಸಿಕೊಂಡ ಕೆಲವೇ ಸಿನಿಮಾಗಳಲ್ಲಿ ‘ಶೈತಾನ್​’ (Shaitaan) ಕೂಡ ಇದೆ. ಅಜಯ್​ ದೇವಗನ್​ (Ajay Devgn), ಆರ್​. ಮಾಧವನ್​, ಜ್ಯೋತಿಕಾ, ಜಾನಕಿ ಬೋಡಿವಾಲಾ ಮುಂತಾದವರು ನಟಿಸಿದ ಈ ಸಿನಿಮಾದಲ್ಲಿ ಹಾರರ್​​ ಕಥಾಹಂದರ ಇದೆ. ಯುವತಿಯನ್ನು ವಶೀಕರಣ ಮಾಡುವ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ‘ಶೈತಾನ್​’ ಸಿನಿಮಾ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಗೆದ್ದು ಬೀಗಿದ ಈ ಸಿನಿಮಾ ಈಗ ಒಟಿಟಿಗೆ (Shaitaan OTT Release) ಎಂಟ್ರಿ ನೀಡುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಮೇ 4ರಿಂದ ‘ಶೈತಾನ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಟ್ರೇಲರ್​ ಬಿಡುಗಡೆ ಆಗುವ ತನಕ ‘ಶೈತಾನ್​’ ಬಗ್ಗೆ ಅಷ್ಟೇನೂ ಹೈಪ್​ ಇರಲಿಲ್ಲ. ಆದರೆ ಟ್ರೇಲರ್​ ರಿಲೀಸ್​ ಆದ ನಂತರ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿತು. ಹಾರರ್​ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಶೈತಾನ್​’ ಅತ್ಯುತ್ತಮ ಆಯ್ಕೆ. ಮಾರ್ಚ್​ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಚಿತ್ರಕ್ಕೆ ಬರೋಬ್ಬರಿ 149 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಆಯ್ತು ‘ಲಾಪತಾ ಲೇಡೀಸ್​’ ಸಿನಿಮಾ

ಕೆಲವರು ಥಿಯೇಟರ್​ನಲ್ಲಿ ‘ಶೈತಾನ್​’ ಚಿತ್ರವನ್ನು ಮಿಸ್​ ಮಾಡಿಕೊಂಡಿದ್ದಾರೆ. ಅಂಥವರೆಲ್ಲ ಒಟಿಟಿಯಲ್ಲಿ ನೋಡಲು ಕಾದಿದ್ದರು. ಈಗ ಒಟಿಟಿ ಪ್ರೇಕ್ಷಕರಿಗೆ ಚಿತ್ರತಂಡದ ಕಡೆಯಿಂದ ಗುಡ್​ ನ್ಯೂಸ್​ ಸಿಕ್ಕಿದೆ. ‘ಶೈತಾನ್​’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ನೆಟ್​ಫ್ಲಿಕ್​ ಪಾಲಾಗಿವೆ. ಮೇ 3ರ ಮಧ್ಯ ರಾತ್ರಿಯಿಂದಲೇ ಇದರ ಪ್ರಸಾರ ಆರಂಭ ಆಗಲಿದೆ. ಒಟಿಟಿ ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.

ಮಗಳನ್ನು ರಕ್ಷಿಸಿಕೊಳ್ಳಲು ಹೋರಾಡುವ ತಂದೆಯ ಪಾತ್ರವನ್ನು ಅಜಯ್​ ದೇವಗನ್​ ಅವರು ‘ದೃಶ್ಯಂ’ ಸಿನಿಮಾದಲ್ಲಿ ಮಾಡಿದ್ದರು. ಈಗ ‘ಶೈತಾನ್​’ ಸಿನಿಮಾದಲ್ಲೂ ತಂದೆ-ಮಗಳ ಪಾತ್ರ ಹೈಲೈಟ್​ ಆಗಿದೆ. ಆದರೆ ಈ ಸಿನಿಮಾದಲ್ಲಿ ಹಾರರ್​ ಅಂಶಗಳು ಹೈಲೈಟ್​ ಆಗಿವೆ. ವಶೀಕರಣಕ್ಕೆ ಒಳಗಾದ ಮಗಳನ್ನು ರಕ್ಷಿಸಿಕೊಳ್ಳಲು ಕಥಾನಾಯಕ ಕಷ್ಟಪಡತ್ತಾನೆ. ಮಗಳ ಪಾತ್ರಕ್ಕೆ ಜಾನಕಿ ಬೋಡಿವಾಲ ಬಣ್ಣ ಹಚ್ಚಿದ್ದಾರೆ. ವಿಲನ್​ ಪಾತ್ರದಲ್ಲಿ ಆರ್​. ಮಾಧವನ್​ ಕಾಣಿಸಿಕೊಂಡಿದ್ದಾರೆ. ನಟ ಅಜಯ್​ ದೇವಗನ್​ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ