ಕೆಂಪೇಗೌಡರ ಬಗ್ಗೆ ಮಾಡ್ತಿರೋ ಸಿನಿಮಾಗೆ ತಡೆ ತಂದ ನಾಗಾಭರಣ

|

Updated on: Apr 22, 2024 | 1:07 PM

ಟಿಎಸ್​ ನಾಗಾಭರಣ ಅವರು ಸಲ್ಲಿಕೆ ಮಾಡಿದ ಅರ್ಜಿಯಲ್ಲಿ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆ ಅಥವಾ ಸಿನಿಮಾನ ಯಾವುದೇ ರೀತಿಯಲ್ಲಿ ಪ್ರಕಟಿಸಬಾರದು ಎಂದು ಕೇಸ್ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಿದೆ.

ಕೆಂಪೇಗೌಡರ ಬಗ್ಗೆ ಮಾಡ್ತಿರೋ ಸಿನಿಮಾಗೆ ತಡೆ ತಂದ ನಾಗಾಭರಣ
ಕೆಂಪೇಗೌಡ ಸಿನಿಮಾ
Follow us on

ಬೆಂಗಳೂರು ನಿರ್ಮಾಣಕ್ಕೆ ಕಾರಣವಾದ ನಾಡಪ್ರಭು ಕೆಂಪೇಗೌಡರ (Nadaprabhu Kempegowda) ಮೇಲೆ ಸಿನಿಮಾ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿತ್ತು. ಹಿರಿಯ ನಿರ್ದೇಶಕ ದಿನೇಶ್‍ ಬಾಬು ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಹೆಸರಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈಗ ಇದಕ್ಕೆ ತೊಂದರೆ ಎದುರಾಗಿದೆ. ಹಿರಿಯ ನಿರ್ದೇಶಕ ಟಿ.ಎಸ್‍. ನಾಗಾಭರಣ ಅವರು ಕೆಂಪೇಗೌಡರ ಜೀವನವನ್ನು ಆಧರಿಸಿ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದಾರೆ.

ಅರ್ಜಿಯಲ್ಲಿ ಏನಿತ್ತು?

ಟಿಎಸ್​ ನಾಗಾಭರಣ ಅವರು ಸಲ್ಲಿಕೆ ಮಾಡಿದ ಅರ್ಜಿಯಲ್ಲಿ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆ ಅಥವಾ ಸಿನಿಮಾನ ಯಾವುದೇ ರೀತಿಯಲ್ಲಿ ಪ್ರಕಟಿಸಬಾರದು ಎಂದು ಕೇಸ್ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಿದೆ. ಇದರಿಂದ ತಂಡಕ್ಕೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಜೀವನ ಆಧರಿಸಿ ಬರ್ತಿದೆ ಸಿನಿಮಾ; ನಟಿಸಲಿದ್ದಾರೆ ಕನ್ನಡದ ಜನಪ್ರಿಯ ನಟ

ಬೆಂಗಳೂರಿಗೆ ಹಲವು ಬಿರುದುಗಳು ಇವೆ. ಅನೇಕರಿಗೆ ಇದು ಆಶ್ರಯ ನೀಡಿದೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಅವರು ಬೆಂಗಳೂರು ಕಟ್ಟಿದ್ದು ಹೇಗೆ ಎಂಬ ಕಥೆಯನ್ನು ಸಿನಿಮಾ ರೂಪಕ್ಕೆ ಇಳಿಸುವ ಪ್ರಯತ್ನದಲ್ಲಿ ದಿನೇಶ್ ಅವರು ಇದ್ದರು. ಆದರೆ, ಈಗ ಅವರಿಗೆ ಹಿನ್ನಡೆ ಆಗಿದೆ. ವೃತ್ತಿಯಲ್ಲಿ ವೈದ್ಯರಾಗಿರೋ ಕಿರಣ್ ತೋಟಂಬೈಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಇದನ್ನು ಪ್ರಶ್ನಿಸಿ ತಂಡದವರು ಕೇಸ್ ದಾಖಲಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಬಗ್ಗೆ

‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಸಿನಿಮಾಗೆ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿ ಸಂಕೇತ್ ಎಂವೈಎಸ್ ಅವರದ್ದು. ಕಿರಣ್ ತೋಟಂಬೈಲ್ ಅವರೇ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಮಾಸ್ತಿ ಹಾಗೂ ರಘು‌ ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.