ಬ್ಯೂಟಿಫುಲ್ ಪತ್ನಿ ಜೊತೆ ನಟಿಸೋಕೆ ಒಲ್ಲೆ ಅಂತಿರೋದೇಕೆ ನಾಗ ಚೈತನ್ಯ?

|

Updated on: Dec 19, 2019 | 9:02 AM

ಸಿನಿಮಾ ಇಂಡಸ್ಟ್ರಿಲಿ ಒಂದು ಜೋಡಿ ಹಿಟ್ ಆದ್ರೆ ಸಾಕು ಮತ್ತೆ ಮತ್ತೆ ತೆರೆಯ ಮೇಲೆ ಅದೇ ಜೋಡಿಯನ್ನ ತರೋಕೆ ಡೈರೆಕ್ಟರ್​ಗಳು ಪ್ಲಾನ್ ಮಾಡೋ ಘಟನೆಗಳು ನಡೆಯುತ್ತಿರುತ್ತವೆ. ಅಂದ ಹಾಗೆ ಸದ್ಯ ಟಾಲಿವುಡ್​ನಲ್ಲಿ ಡೈರೆಕ್ಟರ್​ಗಳ ಈ ಆಲೋಚನೆ ನಾಗ ಚೈತನ್ಯಗೆ ತಲೆಬಿಸಿಯುಂಟು ಮಾಡಿದೆಯಂತೆ. ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಸಿನಿಮಾಗಳನ್ನ ಕೊಟ್ಟ ಜೋಡಿಯ ಲಿಸ್ಟ್​ ಗೆ ನಾಗ್ ಚೈತನ್ಯ ಹಾಗು ಸಮಂತ ಕೂಡ ಸೇರ್ತಾರೆ. ಆದ್ರೆ ಈ ಜೋಡಿ ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಮ್ಮನಾಗಿದೆ. ಆದ್ರೆ ಕೆಲವು […]

ಬ್ಯೂಟಿಫುಲ್ ಪತ್ನಿ ಜೊತೆ ನಟಿಸೋಕೆ ಒಲ್ಲೆ ಅಂತಿರೋದೇಕೆ ನಾಗ ಚೈತನ್ಯ?
Follow us on

ಸಿನಿಮಾ ಇಂಡಸ್ಟ್ರಿಲಿ ಒಂದು ಜೋಡಿ ಹಿಟ್ ಆದ್ರೆ ಸಾಕು ಮತ್ತೆ ಮತ್ತೆ ತೆರೆಯ ಮೇಲೆ ಅದೇ ಜೋಡಿಯನ್ನ ತರೋಕೆ ಡೈರೆಕ್ಟರ್​ಗಳು ಪ್ಲಾನ್ ಮಾಡೋ ಘಟನೆಗಳು ನಡೆಯುತ್ತಿರುತ್ತವೆ. ಅಂದ ಹಾಗೆ ಸದ್ಯ ಟಾಲಿವುಡ್​ನಲ್ಲಿ ಡೈರೆಕ್ಟರ್​ಗಳ ಈ ಆಲೋಚನೆ ನಾಗ ಚೈತನ್ಯಗೆ ತಲೆಬಿಸಿಯುಂಟು ಮಾಡಿದೆಯಂತೆ.

ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಸಿನಿಮಾಗಳನ್ನ ಕೊಟ್ಟ ಜೋಡಿಯ ಲಿಸ್ಟ್​ ಗೆ ನಾಗ್ ಚೈತನ್ಯ ಹಾಗು ಸಮಂತ ಕೂಡ ಸೇರ್ತಾರೆ. ಆದ್ರೆ ಈ ಜೋಡಿ ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಮ್ಮನಾಗಿದೆ. ಆದ್ರೆ ಕೆಲವು ಕಥೆ ಹೆಣೆಯೋ ಡೈರೆಕ್ಟರ್ಸ್ ಮಾತ್ರ ಮತ್ತೆ ಇವರನ್ನ ಒಂದು ಮಾಡೋಕೆ ಪ್ಲಾನ್ ಮಾಡಿದ್ದಾರಂತೆ.

ಅಂದ ಹಾಗೆ ಸದ್ಯ ಸಮಂತಾಗೆ ಕೆಲವು ಆಫರ್​ಗಳು ಬಂದ್ರೂ ಕೂಡ ಅದೆಲ್ಲವನ್ನೂ ಬಿಟ್ಟು ಬ್ರೇಕ್ ತೆಗೆದುಕೊಂಡು ಮನೆಯಲ್ಲಿದ್ದಾರೆ. ಆದ್ರೆ ಇತ್ತ ನಾಗ ಚೈತನ್ಯಗೆ ಕಥೆ ಹೇಳೋಕೆ ಬಂದ ಹಲವು ನಿರ್ದೇಶಕರು ಇವರಿಬ್ಬರನ್ನ ತೆರೆಯಮೇಲೆ ತರೋ ಬಗ್ಗೆ ನಾಗ ಚೈತನ್ಯಗೆ ಹೇಳಿದ್ದಾರಂತೆ. ಹೀಗಾಗಿ ಈ ಮಾತು ಕೇಳಿರೋ ನಾಗ ಚೈತನ್ಯಗೆ ಬೇಸರವಾಗ್ತಿದೆ ಅನ್ನೋ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.

ಏ ಮಾಯೆ ಚೇಸಾವೆ, ಮಜಲಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರೋ ಜೋಡಿಯನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಅಟೋನಗರ ಸೂರ್ಯ ಸಿನಿಮಾ ನೋಡಿ ತಿರಸ್ಕಿರಿಸಿದ್ರು. ಹೀಗಾಗಿ ನಾಗಚೈತನ್ಯಗೆ ಪದೇ ಪದೇ ಒಂದೇ ಸ್ಟಾರ್ ಪೇರ್ ನೋಡಿ ಬೇಸರವಾಗುತ್ತೆ. ಒಂದು ವೇಳೆ ಮತ್ತೆ ಆ ಭಾವನೆ ಪ್ರೇಕ್ಷಕರಿಗೆ ಬರಬಾರದು ಹಾಗಾಗಿ ಬೇರೆ ಬೇರೆ ಸ್ಟಾರ್​ಗಳ ಜೊತೆ ನಟಿಸಬೇಕು ಅನ್ನೋ ಅಭಿಪ್ರಯಾದಲ್ಲಿದ್ದಾರಂತೆ.

ಆದ್ರೆ ಸದ್ಯ ಗೀತಾ ಗೋವಿಂದಂ ಸಿನಿಮಾ ಡೈರೆಕ್ಟರ್ ನಾಗ್​ಗೆ ಕಥೆ ಹೇಳಿದ ನಂತರ ಹೀಗೆಯೇ ಸಮಂತಾ ಪೇರ್ ಮಾಡೋ ಬಗ್ಗೆ ಮಾತನಾಡಿದ್ರಂತೆ. ನಂತರ ಈ ಹಿಂದೊಮ್ಮೆ ಕಥೆ ಹೇಳಿದ್ದ ಆರ್​ಎಕ್ಸ್ 100 ನಿರ್ದೇಶಕ ಅಜೇಯ್ ಭೂಪತಿ ಕೂಡ ಅದೇ ಅಭಿಪ್ರಾಯ ಹೇಳಿದ್ರಂತೆ. ಒಟ್ಟಿನಲ್ಲಿ ಸದ್ಯ ನಾಗ ಚೈತನ್ಯ ಅವರ ಈ ರೀತಿಯ ಅಭಿಪ್ರಾಯದ ನಡುವೆಯೂ ನಿರ್ದೇಶಕರು ಬೇರೆ ಬೇರೆ ನಟಿಯರಿಗೆ ಚಾನ್ಸ್ ಕೊಡ್ತಾರ ಅಥವಾ ಸಮಂತಾರನ್ನೇ ಮನವೊಲಿಸಿ ನಾಗ್ ಜೊತೆ ಸ್ಕ್ರೀನ್ ಶೇರ್ ಮಾಡೋ ಹಾಗೆ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Published On - 8:59 am, Thu, 19 December 19