ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್ನಿಂದಲೇ ಪ್ಲ್ಯಾನ್? ಸೂರಜ್ ಆರೋಪ
ಬಿಗ್ ಬಾಸ್ ಕನ್ನಡ ಸೀಸನ್ 12ರ ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ಕ್ಯಾಪ್ಟನ್ ಆಗುವ ನಿರೀಕ್ಷೆ ಹೆಚ್ಚಿದೆ. ಹಲವು ಕುಟುಂಬದ ಸದಸ್ಯರು ಗಿಲ್ಲಿಯೇ ಕ್ಯಾಪ್ಟನ್ ಆಗಬೇಕೆಂದು ಬಯಸಿದ್ದಾರೆ. ಗಿಲ್ಲಿಯ ಮನರಂಜನೆ ಮತ್ತು ಬದಲಾದ ಆಟವನ್ನು ಎಲ್ಲರೂ ಮೆಚ್ಚಿದ್ದಾರೆ. ಇದು ಬಿಗ್ ಬಾಸ್‌ನ ತಂತ್ರ ಎಂದು ಸೂರಜ್ ಹೇಳಿದ್ದಾರೆ.ಇದು ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್ (Bigg Boss) ಮನೆ ಕಳೆದ ಕೆಲವು ವಾರಗಳಿಂದ ಸ್ಪರ್ಧಿಳ ಕಲರವದಿಂದ ತುಂಬಿತ್ತು.ಈ ವಾರ ಫ್ಯಾಮಿಲಿ ವೀಕ್. ಹೀಗಾಗಿ, ಕುಟುಂಬದವರ ನಗು, ಖುಷಿ ಸ್ಪರ್ಧಿಗಳ ಸಂತೋಷ ಹೆಚ್ಚಿಸಿದೆ. ಹಲವು ವಾರಗಳಿಂದ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿಯೇ ಇಲ್ಲ. ಈ ವಾರ ಅವರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಗೋ ಸಾಧ್ಯತೆ ಇದೆ. ಎಲ್ಲರ ಮನೆಯವರು ಆಗಮಿಸಿ ಸ್ಪರ್ಧಿಗಳಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮವರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಬಂದವರಲ್ಲಿ ಬಹುತೇಕರು ಗಿಲ್ಲಿಯೇ ಕ್ಯಾಪ್ಟನ್ ಆಗಲಿ ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ಸೂರಜ್ ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಅವರು ಅದ್ಭುತವಾಗಿ ಮನರಂಜನೆ ನೀಡುತ್ತಿದ್ದಾರೆ. ಕೆಲವೊಮ್ಮೆ ಅವರ ಮಾತು ಮಿತಿ ಮೀರಿದ ಉದಾಹರಣೆ ಇದೆ. ಆದರೆ, ಇತ್ತೀಚಿನ ವಾರಗಳಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ. ಅವರು ತಮ್ಮನ್ನು ತಾವು ತಿದ್ದುಕೊಂಡಿದ್ದಾರೆ. ಗಿಲ್ಲಿ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಹೊರಗಿನಿಂದ ಬಂದವರಿಗೆ ಗಿಲ್ಲಿ ಆಟ ಇಷ್ಟ ಆಗುತ್ತಿದೆ.
Gilli mele jealousy 😄 Bandre adu success sign 🔥 #Gilli #GilliNata #BBK12 pic.twitter.com/9el9GHq6dE
— Saiprasad (@Saipras64179760) December 25, 2025
ಎಲ್ಲಾ ಸದಸ್ಯರ ಕುಟುಂಬದವರಿಗೆ ಸ್ಪರ್ಧಿಗಳಿಗೆ ಗಿಲ್ಲಿಯೇ ಫೇವರಿಟ್. ಈ ವಿಷಯ ಸ್ಪಷ್ಟವಾಗಿ ಕಾಣುತ್ತಿದೆ. ಬಂದ ಎಲ್ಲರೂ ಗಿಲ್ಲಿಯನ್ನು ಹೊಗಳುತ್ತಿದ್ದಾರೆ. ಗಿಲ್ಲಿ ಕಾಮಿಡಿ ಇಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಗಿಲ್ಲಿಯಲ್ಲಿ ಇಷ್ಟ ಆಗುವ ಗುಣ ಹೇಳುತ್ತಿದ್ದಾರೆ. ಗಿಲ್ಲಿ ಇಲ್ಲದೆ ಇದ್ದಿದ್ದರೆ ಇಡೀ ಮನೆ ಡಲ್ ಆಗುತ್ತಿತ್ತು ಎಂದು ಕೆಲವರು ನೇರವಾಗಿ ಹೇಳಿದ್ದು ಇದೆ. ಹೀಗಾಗಿ, ಕ್ಯಾಪ್ಟನ್ ಯಾರಾಗಬೇಕು ಎಂದು ಹೇಳಿದರೆ ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?
ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದರು ರಘು. ಆಗ ಸೂರಜ್ ಅವರು, ‘ಬಿಗ್ ಬಾಸ್ ಪ್ಲ್ಯಾನ್ ಹಾಕಿದಾರೆ’ ಎಂದರು. ಇದು ಸರಿ ಅಲ್ಲ ಎಂದು ವೀಕ್ಷಕರು ಹೇಳಿದ್ದಾರೆ.ಈ ಮೊದಲು ವೋಟಿಂಗ್ ಮೂಲಕ ಧನುಷ್, ಕಾವ್ಯಾ ಕೂಡ ಕ್ಯಾಪ್ಟನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Fri, 26 December 25




