ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ನಲ್ಲಿ ಈ ವಾರ ಎಲ್ಲರ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿನಯ್ ಹಾಗೂ ಸ್ನೇಹಿತ್ನಿಂದ ಅವರು ದೂರ ಉಳಿದು ತಮ್ನನ್ನು ತಾವು ಸಾಬೀತು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವಾರ ಅವರು ನಾಮಿನೇಟ್ ಆಗಿದ್ದು, ಇದರಿಂದ ಬಚಾವ್ ಆಗಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈಗ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಕಿಸ್ ಕೊಟ್ಟಿದ್ದಾರೆ. ಅದು ಯಾರಿಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ನಲ್ಲಿ ಈ ವಾರ ನಮ್ರತಾ ಗೌಡ ಅವರು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗೆ ಇರಬೇಕು ಎನ್ನುವ ನಿರ್ಧಾರವನ್ನು ಡ್ರೋನ್ ಪ್ರತಾಪ್ ಘೋಷಿಸಿದರು. ಇದಾದ ಬಳಿಕ ನಮ್ರತಾ ಸಾಕಷ್ಟು ಅತ್ತರು. ‘ಪ್ರತಾಪ್ ಮೋಸ ಮಾಡಿದ್ದಾನೆ’ ಎಂದು ಕಣ್ಣೀರು ಹಾಕಿದರು. ಮರುದಿನ ನಮ್ರತಾ ಗೌಡ ಹಳೆಯದನ್ನು ಮರೆತಿದ್ದಾರೆ. ಎಲ್ಲರ ಜೊತೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ.
ನಮ್ರತಾ ಕ್ಯಾಮೆರಾ ಬಳಿ ಹೋದರು. ಆಗ ಕ್ಯಾಮೆರಾ ಹಿಂದೆ ತಿರುಗಿತ್ತು. ‘ಇಲ್ಲಿ ನೋಡು. ನಾನು ಇನ್ನು ಅಳೋದಿಲ್ಲ’ ಎಂದು ನಮ್ರತಾ ಕ್ಯಾಮೆರಾಗೆ ಹೇಳಿದರು. ಆದರೆ, ಕ್ಯಾಮೆರಾ ಹಿಂದಿರುಗಲೇ ಇಲ್ಲ. ಆ ಬಳಿಕ ಕ್ಯಾಮೆರಾ ಹಿಂಭಾಗಕ್ಕೆ ಕಿಸ್ ಕೊಟ್ಟರು. ತಕ್ಷಣ ಕ್ಯಾಮೆರಾ ಹಿಂದಕ್ಕೆ ತಿರುಗಿತು. ‘ಅಯ್ಯೋ ನನಗೆ ನಾಚಿಕೆ ಆಗೋಯ್ತು’ ಎಂದರು ನಮ್ರತಾ ಓಡಿ ಹೋದರು. ಆ ಬಳಿಕ ಕ್ಯಾಮೆರಾ ಲೆನ್ಸ್ಗೂ ಕಿಸ್ ಕೊಟ್ಟರು.
ಈ ವಾರ ನಮ್ರತಾ ಗೌಡ ಅವರು ಪ್ರತಾಪ್ ಟೀಂ ಸೇರಿದ್ದಾರೆ. ಅವರು ಉತ್ತಮವಾಗಿ ಆಟ ಆಡಬೇಕಾದ ಅನಿವಾರ್ಯತೆ ಇದೆ. ಈ ವಾರ ನಾಮಿನೇಟ್ ಆದವರ ಸಾಲಿನಲ್ಲಿ ನಮ್ರತಾ ಕೂಡ ಇದ್ದಾರೆ. ಸ್ನೇಹಿತ್ ಅಥವಾ ನಮ್ರತಾ ಈ ವಾರ ಎಲಿಮಿನೇಟ್ ಆಗಬಹುದು ಎಂದು ಅನೇಕರು ಊಹಿಸಿದ್ದಾರೆ. ಯಾರು ಉಳಿದುಕೊಳ್ಳುತ್ತಾರೆ, ಯಾರು ಔಟ್ ಆಗುತ್ತಾರೆ ಎನ್ನುವುದಕ್ಕೆ ವೀಕೆಂಡ್ವರೆಗೆ ಕಾಯಬೇಕು.
ಇದನ್ನೂ ಓದಿ: ಅವಳಿ ಮಕ್ಕಳು ಹೊಟ್ಟೆಯಲ್ಲಿ ಇರುವಾಗಲೇ ಅಪಘಾತ; ಕರಾಳ ಘಟನೆ ನೆನೆದ ಬಿಗ್ ಬಾಸ್ ವಿನ್ನರ್
ಬಿಗ್ ಬಾಸ್ ಕನ್ನಡ 10ನೇ ಸೀಸನ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:43 am, Thu, 30 November 23