‘ಲೈಕಾ ಪ್ರೊಡಕ್ಷನ್ಸ್​’ ನಿರ್ಮಾಣದ ಸಿನಿಮಾ ಮೂಲಕ ನಿಖಿಲ್​ ಕುಮಾರ್​ ಕಮ್​ಬ್ಯಾಕ್​; ಆ.23ಕ್ಕೆ ಸಿಹಿ ಸುದ್ದಿ

ಕಾಲಿವುಡ್​ನಲ್ಲಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ತನ್ನದೇ ಛಾಪು ಮೂಡಿಸಿದೆ. ನಿಖಿಲ್​ ಕುಮಾರ್​ ನಟನೆಯ ಹೊಸ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಈ ಸಂಸ್ಥೆ ಕಾಲಿಡುತ್ತಿದೆ. ಆಗಸ್ಟ್​ 23ರಂದು ಈ ಸಿನಿಮಾ ಸೆಟ್ಟೇರಲಿದೆ. ಈ ಪ್ರಾಜೆಕ್ಟ್​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

‘ಲೈಕಾ ಪ್ರೊಡಕ್ಷನ್ಸ್​’ ನಿರ್ಮಾಣದ ಸಿನಿಮಾ ಮೂಲಕ ನಿಖಿಲ್​ ಕುಮಾರ್​ ಕಮ್​ಬ್ಯಾಕ್​; ಆ.23ಕ್ಕೆ ಸಿಹಿ ಸುದ್ದಿ
ನಿಖಿಲ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Aug 21, 2023 | 9:11 PM

ನಟ ಕಮ್​ ರಾಜಕಾರಣಿ ನಿಖಿಲ್​ ಕುಮಾರ್​ (Nikhil Kumar) ಅವರು ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ರಾಜಕೀಯದ ಚಟುವಟಿಕೆಗಳಲ್ಲೂ ಬ್ಯುಸಿ ಆಗಿದ್ದರು. ಆದರೆ ಚುನಾವಣೆಯ ಕಾರ್ಯಗಳ ನಿಮಿತ್ತ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಬಣ್ಣ ಹಚ್ಚಲು ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಸಜ್ಜಾಗುತ್ತಿದ್ದಾರೆ. ಅವರ ಕಮ್​ಬ್ಯಾಕ್​ ಪ್ರಾಜೆಕ್ಟ್​ ಬಗ್ಗೆ ಈಗ ಹೊಸ ಅಪ್​ಡೇಟ್​ ಕೇಳಿಬಂದಿದೆ. ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ (Lyca Production) ಮೂಲಕ ನಿರ್ಮಾಣ ಆಗಲಿರುವ ಹೊಸ ಸಿನಿಮಾದಲ್ಲಿ ನಿಖಿಲ್​ ಕುಮಾರ್​ ನಟಿಸಲಿದ್ದಾರೆ. ಅದು ಅವರ ಕಮ್​ಬ್ಯಾಕ್​ ಸಿನಿಮಾ ಆಗಲಿದೆ. ಆಗಸ್ಟ್​ 23ರಂದು ಈ ಸಿನಿಮಾ ಸೆಟ್ಟೇರಲಿದೆ. ಅಂದು ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

‘ಜಾಗ್ವಾರ್’, ‘ಸೀತಾರಾಮ ಕಲ್ಯಾಣ’, ‘ಕುರುಕ್ಷೇತ್ರ’, ‘ರೈಡರ್​’ ಸಿನಿಮಾಗಳಲ್ಲಿ ನಿಖಿಲ್​ ಕುಮಾರ್​ ನಟಿಸಿದ್ದಾರೆ. ಆದರೆ ರಾಜಕೀಯದ ಕಾರಣದಿಂದ ಅವರು ಸಿನಿಮಾ ಕೆಲಸಗಳಿಗೆ ದೀರ್ಘವಾದ ಬ್ರೇಕ್​ ನೀಡಿದ್ದರು. ಈಗ ಮತ್ತೆ ಬಣ್ಣದ ಲೋಕದ ಕಡೆಗೆ ಅವರು ಆಸಕ್ತಿ ತೋರಿಸುತ್ತಿದ್ದಾರೆ. ಅವರ ಕಮ್​ಬ್ಯಾಕ್​ ಪ್ರಾಜೆಕ್ಟ್​ಗೆ ‘ಲೈಕಾ ಪ್ರೊಡಕ್ಷನ್​’ ಸಂಸ್ಥೆಯು ಬಂಡವಾಳ ಹೂಡಲು ಮುಂದಾಗಿರುವುದು ವಿಶೇಷ. ಬಿಗ್​ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ಇದನ್ನೂ ಓದಿ: ಹೇಗಿದ್ದಾನೆ ನೋಡಿ ನಿಖಿಲ್ ಕುಮಾರ್ ಮಗ ಅವ್ಯಾನ್; ಫೋಟೋ ಹಂಚಿಕೊಂಡ ಹೀರೋ

ನಿಖಿಲ್​ ಕುಮಾರ್​ ಮತ್ತು ‘ಲೈಕಾ ಪ್ರೊಡಕ್ಷನ್ಸ್​’ ಕಾಂಬಿನೇಷನ್​ನಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ 2019ರಲ್ಲೇ ಕೇಳಿಬಂದಿತ್ತು. ಸಂಸ್ಥೆಯ ಮಾಲೀಕರಾದ ಸುಭಾಸ್ಕರನ್​ ಅವರೇ ಆ ವಿಷಯ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರುವುದು ವಿಳಂಬ ಆಯಿತು. ಕೊವಿಡ್​, ನಿಖಿಲ್​ ಕುಮಾರ್​ ವಿವಾಹ, ಕರ್ನಾಟಕ ಲೋಕಸಭೆ ಚುನಾವಣೆ.. ಹೀಗೆ ಅನೇಕ ಕಾರಣಗಳಿಂದ ಆ ಸಿನಿಮಾದ ಕೆಲಸ ಆರಂಭ ಆಗಿರಲಿಲ್ಲ. ಆದರೆ ಈಗ ಆ ಚಿತ್ರಕ್ಕೆ ಚಾಲನೆ ನೀಡುವ ಸಮಯ ಬಂದಿದೆ. ಅದ್ದೂರಿಯಾಗಿ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: ‘ಪುನೀತ್​ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್​ ಮಾತು

ತಮಿಳು ಚಿತ್ರರಂಗದಲ್ಲಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ತನ್ನದೇ ಛಾಪು ಮೂಡಿಸಿದೆ. ‘ಕತ್ತಿ,’ ‘2.0’, ‘ಪೊನ್ನಿಯಿನ್​ ಸೆಲ್ವನ್​’ ಮುಂತಾದ ಗಮನಾರ್ಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಖ್ಯಾತಿ ಈ ಸಂಸ್ಥೆಗೆ ಇದೆ. ಈಗ ಇದೇ ಬ್ಯಾನರ್​ನಲ್ಲಿ ‘ಚಂದ್ರಮುಖಿ 2’, ‘ಇಂಡಿಯನ್​ 2’, ‘ಲಾಲ್​ ಸಲಾಂ’ ಮುಂತಾದ ಸಿನಿಮಾಗಳು ಮೂಡಿಬರುತ್ತಿವೆ. ನಿಖಿಲ್​ ಕುಮಾರ್​ ನಟನೆಯ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ‘ಲೈಕಾ ಪ್ರೊಡಕ್ಷನ್ಸ್​’ ಕಾಲಿಡುತ್ತಿದೆ ಎಂಬುದು ವಿಶೇಷ. ಈ ಚಿತ್ರದ ಶೀರ್ಷಿಕೆ ಏನು? ನಿಖಿಲ್​ ಕುಮಾರ್​ಗೆ ಆ್ಯಕ್ಷನ್​-ಕಟ್​ ಹೇಳಲಿರುವ ನಿರ್ದೇಶಕರು ಯಾರು? ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್