ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ನಟಿ ಸಂಜನಾ ಗಲ್ರಾನಿ ಸುದ್ದಿಯಾಗಿದ್ದರು. ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು. ಈಗ ಅವರ ಸಹೋದರಿ ನಿಕ್ಕಿ ಗಲ್ರಾನಿ ಸುದ್ದಿಯಾಗಿದ್ದಾರೆ. ಹಣ ಪಡೆದು ಅದನ್ನು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ನಿಖಿಲ್ ಹೆಗ್ಡೆ ವಿರುದ್ಧ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ನಿಕ್ಕಿ ಗಲ್ರಾನಿ ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ತಮಗೆ ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ಪರಿಚಯದ ವ್ಯಕ್ತಿ ನಿಖಿಲ್ ತಮಗೆ ಮೋಸ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ. ಅದು 2016ರ ಸಮಯ. ನಿಖಿಲ್ ಕೆಫೆ ಒಂದನ್ನು ತೆರೆಯಲು ಮುಂದಾಗಿದ್ದರು. ಇದಕ್ಕೆ ದೊಡ್ಡ ಮೊತ್ತದ ಹಣ ಬೇಕಿತ್ತು. ಹೀಗಾಗಿ, ನಿಕ್ಕಿ ಬಳಿ ನಿಖಿಲ್ ಹಣ ಕೇಳಿದ್ದರು. ಅಂತೆಯೇ, ನಿಕ್ಕಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣವನ್ನು ನಿಖಿಲ್ಗೆ ವರ್ಗಾಯಿಸಿದ್ದರು. ಹಣ ವರ್ಗಾವಣೆ ವೇಳೆ ಒಪ್ಪಂದ ಕೂಡ ಆಗಿತ್ತು.
ಈ ಒಪ್ಪಂದದ ಪ್ರಕಾರ ನಿಖಿಲ್ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಹಣವನ್ನು ನಿಕ್ಕಿಗೆ ನೀಡಬೇಕು. ಇದಕ್ಕೆ ನಿಖಿಲ್ ಒಪ್ಪಿದ್ದರು. ಆದರೆ, ಈವರೆಗೆ ಒಂದು ರೂಪಾಯಿ ಹಣವನ್ನು ಕೂಡ ಅವರು ನಿಕ್ಕಿಗೆ ಹಿಂದಿರುಗಿಸಿಲ್ಲ. ಇನ್ನು, ನಿಕ್ಕಿ ಕರೆ ಮಾಡಿದರೂ ಕೂಡ ನಿಖಿಲ್ ಕಾಲ್ ಸ್ವೀಕರಿಸುತ್ತಿಲ್ಲವಂತೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ನೋಟಿಸ್ ನೀಡಿದ್ದಾರೆ.
ನಿಕ್ಕಿ ಗಲ್ರಾನಿ 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಕನ್ನಡ ತಮಿಳು, ಮಲಯಾಳಂ ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ನಿಕ್ಕಿ ಹೆಚ್ಚು ಪರಿಚಿತರಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಂಜನಾ ಗಲ್ರಾನಿ ಹೆಸರು ಮಾಡಿದ್ದಾರೆ. ಆದರೆ, ಅವರು ಡ್ರಗ್ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇದು ಅವರ ಸಿನಿಮಾ ಕೆರಿಯರ್ಗೆ ದೊಡ್ಡ ಹೊಡೆತ ನೀಡಿತ್ತು.
ಇದನ್ನೂ ಓದಿ: ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು
ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?