ಮೊಟ್ಟ ಮೊದಲ ಬಾರಿಗೆ ನಿವೇದಿತಾಗೆ ತಂಗಿ ಎಂದಿದ್ದ ಚಂದನ್ ಶೆಟ್ಟಿ

|

Updated on: Jun 08, 2024 | 7:26 AM

ಚಂದನ್ ಹಾಗೂ ನಿವೇದಿತಾ 2020ರ ಫೆಬ್ರವರಿ 26ರಂದು ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆ ಆದರು. ಇಬ್ಬರೂ ರೀಲ್ಸ್ ಮಾಡಿಕೊಂಡು ಹಾಯಾಗಿದ್ದರು. ನಿವೇದಿತಾ ಅವರು ಮೂರ್ನಾಲ್ಕು ದಿನಕ್ಕೊಂದು ರೀಲ್ಸ್ ಮಾಡಿ ಅಪ್​​ಲೋಡ್ ಮಾಡುತ್ತಿದ್ದರು. ವಿಚ್ಛೇದನದ ಸಂದರ್ಭದವರೆಗೂ ಇವರು ಒಟ್ಟಾಗಿಯೇ ಇದ್ದರು.

ಮೊಟ್ಟ ಮೊದಲ ಬಾರಿಗೆ ನಿವೇದಿತಾಗೆ ತಂಗಿ ಎಂದಿದ್ದ ಚಂದನ್ ಶೆಟ್ಟಿ
ಚಂದನ್​-ನಿವೇದಿತಾ
Follow us on

ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಮಧ್ಯೆ ಮನಸ್ತಾಪ ಉಂಟಾಗಿ ಇಬ್ಬರೂ ಬೇರೆ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಇವರ ಮಧ್ಯೆ ಆಗಿದ್ದೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿವೇದಿತಾ ಹಾಗೂ ಚಂದನ್ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ. ಈ ಸೀಸನ್​ನಲ್ಲಿ ಚಂದನ್ ಶೆಟ್ಟಿ ವಿನ್ ಆದರು. ಚಂದನ್ ಅವರು ನಿವೇದಿತಾನ ಸಹೋದರಿ ಎಂದು ಕರೆದಿದ್ದರು.

ಚಂದನ್ ಹಾಗೂ ನಿವೇದಿತಾ 2020ರ ಫೆಬ್ರವರಿ 26ರಂದು ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆ ಆದರು. ಇಬ್ಬರೂ ರೀಲ್ಸ್ ಮಾಡಿಕೊಂಡು ಹಾಯಾಗಿದ್ದರು. ನಿವೇದಿತಾ ಅವರು ಮೂರ್ನಾಲ್ಕು ದಿನಕ್ಕೊಂದು ರೀಲ್ಸ್ ಮಾಡಿ ಅಪ್​​ಲೋಡ್ ಮಾಡುತ್ತಿದ್ದರು. ವಿಚ್ಛೇದನದ ಸಂದರ್ಭದವರೆಗೂ ಇವರು ಒಟ್ಟಾಗಿಯೇ ಇದ್ದರು. ಈಗ ಬೇರೆ ಆಗಿ ಎಲ್ಲರಿಗೂ ಅಚ್ಚರಿ ಹಾಗೂ ಶಾಕ್ ಮೂಡಿಸಿದ್ದಾರೆ.

ಚಂದನ್ ಶೆಟ್ಟಿ ಅವರು ಬಿಗ್ ಬಾಸ್​ನಲ್ಲಿ ನಿವೇದಿತಾ ಅವರ ಜೊತೆ ಆಪ್ತವಾಗಿದ್ದರು. ನಿವೇದಿತಾನ ಓಪನ್ ಆಗಿಯೇ ಸಹೋದರಿ ಎಂದು ಕರೆದಿದ್ದರು ಚಂದನ್ ಶೆಟ್ಟಿ. ‘ನಾವ್ಯಾರು ಹೇಳಿ ಶಿವರಾಜ್​ಕುಮಾರ್ ಹಾಗೂ ರಾಧಿಕಾ’ ಎಂದರು ಚಂದನ್. ಆ ಬಳಿಕ ಅಲ್ಲಿದ್ದ ಸಹ ಸ್ಪರ್ಧಿಗಳು ‘ಅಣ್ಣ ತಂಗಿನಾ’ ಎಂದು ಕೇಳಿದರು. ಇದಕ್ಕೆ ಹೌದು ಎನ್ನುವ ಉತ್ತರ ಚಂದನ್ ಕಡೆಯಿಂದ ಬಂತು. ಶಿವಣ್ಣ ಹಾಗೂ ನಿವೇದಿತಾ ಅಣ್ಣ ತಂಗಿ ಎಂದೇ ಫೇಮಸ್ ಆದವರು.

ಇದನ್ನೂ ಓದಿ: ಚಂದನ್ ಹಾಗೂ ನಿವೇದಿತಾ ದಾಂಪತ್ಯಕ್ಕೆ ಹುಳಿ ಹಿಂಡಿದ್ಯಾರು? ಅನುಮಾನ ಹೊರಹಾಕಿದ ನಟ

ಚಂದನ್ ಹಾಗೂ ನಿವೇದಿತಾ ಇಬ್ಬರೂ ಮದುವೆ ಒಟ್ಟಾಗಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇತ್ತೀಚಿಗಿನವರೆಗೂ ಇವರು ಹಾಯಾಗಿಯೇ ಸಂಸಾರ ನಡೆಸುತ್ತಿದ್ದರು. ಈಗ ಏಕಾ ಏಕಿ ಬೇರೆ ಆಗಿರುವ ವಿಚಾರ ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಇವರು ಮದುವೆ ಆದಗಲೇ ಕೆಲವರು ಟ್ರೋಲ್ ಮಾಡಿದ್ದರು. ಈಗ ಇವರು ಬೇರೆ ಆಗುತ್ತಿರುವ ವಿಚಾರ ಕೆಲವರಿಗೆ ಖುಷಿ ನೀಡಿದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ನಟ ಪ್ರಥಮ್ ಅವರು ಕಿವಿಮಾತು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.