2020ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟ: ‘ಜೋಕರ್’ಗೆ ಅತ್ಯುತ್ತಮ ನಟ ಪ್ರಶಸ್ತಿ
ಕ್ಯಾಲಿಪೋರ್ನಿಯಾ: ಸಿನಿಮಾಗಳಲ್ಲಿ ಜೋಕರ್ ಪಾತ್ರ ಚಿತಸ್ಥಾಯಿ, ಚಿರನೂತನ. ಅಂತಹ ಸಾರ್ವಕಾಲಿಕ ಪಾತ್ರಕ್ಕೆ ಜೀವತುಂಬುವುದು ಸುಲಭದ ಮಾತಲ್ಲ. ಹಾಗೆಂದೇ ಆ ಪಾತ್ರಕ್ಕೆ ಯಾವ ಕಲಾವಿದ ಜೀವತುಂಬುತ್ತಾನೋ ಆತ ಸರ್ವಪ್ರಿಯ ಆಗುತ್ತಾನೆ, ಮನ್ನಣೆಗಳೂ ಪ್ರಾಪ್ತಿಯಾಗುತ್ತವೆ. ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನದ ವೇಳೆ ಇಂತಹ ಒಬ್ಬ ಜೋಕರ್ಗೆ ಆ ಗೌರವ ಲಭಿಸಿದೆ. 2020ನೇ ಸಾಲಿನ 92ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಹಾಲಿವುಡ್ ನಟ ಬ್ರ್ಯಾಡ್ ಪಿಟ್ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಹಾಲಿವುಡ್ನ ನಟಿ ಲಾರಾ ಡರ್ನ್ಗೆ ಉತ್ತಮ […]
ಕ್ಯಾಲಿಪೋರ್ನಿಯಾ: ಸಿನಿಮಾಗಳಲ್ಲಿ ಜೋಕರ್ ಪಾತ್ರ ಚಿತಸ್ಥಾಯಿ, ಚಿರನೂತನ. ಅಂತಹ ಸಾರ್ವಕಾಲಿಕ ಪಾತ್ರಕ್ಕೆ ಜೀವತುಂಬುವುದು ಸುಲಭದ ಮಾತಲ್ಲ. ಹಾಗೆಂದೇ ಆ ಪಾತ್ರಕ್ಕೆ ಯಾವ ಕಲಾವಿದ ಜೀವತುಂಬುತ್ತಾನೋ ಆತ ಸರ್ವಪ್ರಿಯ ಆಗುತ್ತಾನೆ, ಮನ್ನಣೆಗಳೂ ಪ್ರಾಪ್ತಿಯಾಗುತ್ತವೆ. ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನದ ವೇಳೆ ಇಂತಹ ಒಬ್ಬ ಜೋಕರ್ಗೆ ಆ ಗೌರವ ಲಭಿಸಿದೆ.
2020ನೇ ಸಾಲಿನ 92ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಹಾಲಿವುಡ್ ನಟ ಬ್ರ್ಯಾಡ್ ಪಿಟ್ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಹಾಲಿವುಡ್ನ ನಟಿ ಲಾರಾ ಡರ್ನ್ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ.
ಅಮೆರಿಕನ್ ಫ್ಯಾಕ್ಟರಿ ಚಿತ್ರಕ್ಕೆ ಉತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಸಿಕ್ಕಿದ್ದು, ದಕ್ಷಿಣ ಕೊರಿಯಾಗೆ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ಗೆ ಆಸ್ಕರ್ ದೊರೆತಿದ್ದು, ಉತ್ತಮ ಪ್ರೊಡಕ್ಷನ್ ವಿನ್ಯಾಸಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ‘ಟಾಯ್ ಸ್ಟೋರಿ 4’ಕ್ಕೆ ಉತ್ತಮ ಅನಿಮೇಟೆಡ್ ಚಿತ್ರ ಪ್ರಶಸ್ತಿ ಲಭಿಸಿದೆ.
Published On - 9:50 am, Mon, 10 February 20