ಬಾಲಿವುಡ್​ ಸ್ಟೈಲ್​ನಲ್ಲಿ ಬಂದ ‘ಓ ಏ ಲಡ್ಕಿ’ ಹಾಡಿಗೆ ಸಾಥ್​ ನೀಡಿದ ರಾಗಿಣಿ ದ್ವಿವೇದಿ

‘ಓ ಏ ಲಡ್ಕಿ’ ಹಾಡನ್ನು ‘ಆಕಾಶ್ ಆಡಿಯೋ’ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಅಧೀರ ಸಂತು ಅವರ ನಿರ್ದೇಶನವಿದೆ. ನಿರ್ಮಾಣ ಕೂಡ ಅವರದ್ದೇ. ನಟಿ ರಾಗಿಣಿ ದ್ವಿವೇದಿ ಅವರು ಸಾಂಗ್ ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಸಾಥ್​ ನೀಡಿದ್ದಾರೆ. ಸಮೀರ್, ಅಮೃತಾ ಹಾಗೂ ಉಗ್ರಂ ರವಿ ಅವರು ‘ಓ ಏ ಲಡ್ಕಿ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್​ ಸ್ಟೈಲ್​ನಲ್ಲಿ ಬಂದ ‘ಓ ಏ ಲಡ್ಕಿ’ ಹಾಡಿಗೆ ಸಾಥ್​ ನೀಡಿದ ರಾಗಿಣಿ ದ್ವಿವೇದಿ
‘ಓ ಏ ಲಡ್ಕಿ’ ಸಾಂಗ್​ ರಿಲೀಸ್​ ಕಾರ್ಯಕ್ರಮ

Updated on: Aug 10, 2024 | 2:58 PM

ಕನ್ನಡದಲ್ಲಿ ಅನೇಕ ಮ್ಯೂಸಿಕ್​ ವಿಡಿಯೋಗಳು ಜನಮನ ಗೆದ್ದಿವೆ. ಹಾಗಾಗಿ ಅಂಥ ಪ್ರಯತ್ನಗಳು ಆಗಾಗ ನಡೆಯುತ್ತವೆ. ಈಗ ಅಧೀರ ಸಂತು ಅವರು ಒಂದು ಹೊಸ ಆಲ್ಬಂ ಸಾಂಗ್​ ಮಾಡಿದ್ದಾರೆ. ‘ಓ ಏ ಲಡ್ಕಿ’ ಎಂಬುದು ಇದರ ಶೀರ್ಷಿಕೆ. ಈ ಟೈಟಲ್​ಗೆ ತಕ್ಕಂತೆಯೇ ಬಾಲಿವುಡ್​ ಶೈಲಿಯಲ್ಲಿ ಸಾಂಗ್​ ಮೂಡಿಬಂದಿದೆ. ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ರಿಲೀಸ್​ ಮಾಡಿ ಶುಭ ಹಾರೈಸಿದರು. ‘ಆಕಾಶ್ ಆಡಿಯೋ’ ಸಂಸ್ಥೆಯ ಮೂಲಕ ಈ ಗೀತೆ ರಿಲೀಸ್​ ಆಗಿದೆ. ಅಧೀರ ಸಂತು ಅವರೇ ನಿರ್ಮಾಣ ಕೂಡ ಮಾಡಿದ್ದಾರೆ.

ಸಾಂಗ್​ ರಿಲೀಸ್​ ಬಳಿಕ ಮಾತನಾಡಿದ ಅಧೀರ ಸಂತು ಅವರು ‘ನಾನು ಚಿತ್ರರಂಗಕ್ಕೆ ಹೊಸಬನಲ್ಲ. ಉಪೇಂದ್ರ ಅವರ 50ನೇ ಸಿನಿಮಾವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿದ ಬಳಿಕ ಡೇಟ್ಸ್ ಸಹ ನೀಡಿದ್ದರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್​ ಡ್ರಾಪ್ ಆಯಿತು. ಈಗ ಸ್ನೇಹಿತರ ಸಹಕಾರದಿಂದ ಈ ಹಾಡನ್ನು ನಿರ್ದೇಶಿಸಿದ್ದೇನೆ. ರಾಗಿಣಿ ದ್ವಿವೇದಿ ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಹಾಡು ಮಾಡಿದ್ದೇವೆ. ರಾಗಿಣಿ ಬ್ಯುಸಿ ಇದ್ದ ಕಾರಣದಿಂದ ಬೇರೆ ನಟಿ ಇದರಲ್ಲಿ ನಟಿಸಿದರು. ರಾಗಿಣಿ ಜೊತೆ ಮುಂದಿನ ದಿನಗಳಲ್ಲಿ ಇನ್ನೊಂದು ಆಲ್ಬಂ ಸಾಂಗ್​ ಮಾಡುವ ಪ್ಲ್ಯಾನ್​ ಇದೆ’ ಎಂದರು.

ಇದನ್ನೂ ಓದಿ: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು

‘ಓ ಏ ಲಡ್ಕಿ’ ಸಾಂಗ್​ ರಿಲೀಸ್​ ವೇಳೆ ಇದರ ಇದರ ಲಿರಿಕಲ್ ವಿಡಿಯೋ ಮತ್ತು ರಿಮಿಕ್ಸ್ ವರ್ಷನ್ ಸಹ ಪ್ರದರ್ಶನ ಮಾಡಲಾಯಿತು. ಅಧೀರ ಸಂತು ಅವರೇ ಈ ಗೀತೆಗೆ ಸಾಹಿತ್ಯ ಬರೆದು ಹಾಡಿದ್ದಾರೆ. ಸಾಮಾನ್ಯ ಡೆಲಿವರಿ ಹುಡುಗನೊಬ್ಬ ಒಬ್ಬ ತನ್ನ ಡ್ಯಾನ್ಸ್​ ಮೂಲಕ ಎನ್.ಆರ್.ಐ. ಹುಡುಗಿಯನ್ನು ಹೇಗೆ ಮೆಚ್ಚಿಸುತ್ತಾನೆ ಎಂಬುದನ್ನು ಈ ಹಾಡಲ್ಲಿ ತೋರಿಸಲಾಗಿದೆ.

Oy Yeah Ladki - Album Video Song | Adheera Santhu | M.S Thyagaraja | Love Song | Akash Audio

ಎಂಎಸ್. ತ್ಯಾಗರಾಜ್ ಸಂಗೀತ, ಎಸ್. ಹಾಲೇಶ್ ಛಾಯಾಗ್ರಹಣದಲ್ಲಿ ಈ ಸಾಂಗ್​ ಮೂಡಿಬಂದಿದೆ. ತಂಡದ ಕೆಲಸವನ್ನು ರಾಗಿಣಿ ದ್ವಿವೇದಿ ಮೆಚ್ಚಿಕೊಂಡು ಭೇಷ್​ ಎಂದಿದ್ದಾರೆ. ‘ಈ ಹಾಡು ಬಹಳ ಚೆನ್ನಾಗಿದೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂಬ ಆಸೆಯಿದೆ’ ಎಂದು ಅವರು ಹೇಳಿದರು. ಉಗ್ರಂ ರವಿ ಅವರು ಇದೇ ಮೊದಲ ಬಾರಿಗೆ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅನುಭವ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us