ಬೆಂಗಳೂರಿನ ಪ್ರಶಾಂತಿ ಕುಟೀರದಲ್ಲಿ ಡಾ. ರಾಜ್‌ಕುಮಾರ್ ನೆನೆದ ಪ್ರಧಾನಿ ಮೋದಿ
ಬೆಂಗಳೂರಿನ ಜಿಗಣಿ ಬಳಿಯ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರನಟ ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಯೋಗ ಕ್ಷೇತ್ರಕ್ಕೆ ಕರ್ನಾಟಕದವರ ಕೊಡುಗೆ ದೊಡ್ಡದಿದ್ದು ಎಂದು ಮೋದಿ ಪ್ರಶಂಸಿಸಿದ್ದಾರೆ. , ಅಣ್ಣಾವ್ರು ನಿತ್ಯ ತಪ್ಪದೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡುತ್ತಿದ್ದರು.

ಬೆಂಗಳೂರಿನ ಜಿಗಣಿ ಬಳಿಯ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ ಯೋಗ ಕ್ಷೇತ್ರಕ್ಕೆ ಕರ್ನಾಟಕದವರ ಕೊಡುಗೆ ಅಪಾರ ಎಂದು ಬಣ್ಣಿಸಿರುವ ಅವರು, ವರನಟ ಡಾ. ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ.
ಯೋಗದ ಮಹತ್ವದ ಕುರಿತು ಮಾತನಾಡುತ್ತಾ ಪ್ರಧಾನಿ ಮೋದಿ ಅವರು ಡಾ. ರಾಜ್‌ಕುಮಾರ್ ಅವರ ಶಿಸ್ತಿನ ಜೀವನಶೈಲಿಯನ್ನು ಉಲ್ಲೇಖಿಸಿದ್ದಾರೆ. ‘ಯೋಗಕ್ಕೆ ಕರ್ನಾಟಕದವರ ಕೊಡುಗೆ ದೊಡ್ಡದಿದೆ. ವರ ನಟ ಡಾ. ರಾಜ್‌ಕುಮಾರ್ ಸಹ ಯೋಗಾಭ್ಯಾಸ ಮಾಡುತ್ತಿದ್ದರು’ ಎಂದು ಮೋದಿ ಶ್ಲಾಘಿಸಿದರು.
ಅಣ್ಣಾವ್ರು ತೆರೆಯ ಮೇಲೆ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ಅತ್ಯಂತ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಂಡಿದ್ದರು. ನಿತ್ಯದ ಬ್ಯುಸಿ ಶೂಟಿಂಗ್ ನಡುವೆಯೂ ಅವರು ತಪ್ಪದೇ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿದ್ದರು. ಯೋಗದ ಮೇಲಿನ ಅವರ ನಿರಂತರ ಒಲವು ಹಾಗೂ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಡಾ. ರಾಜ್‌ಕುಮಾರ್ ಅವರು ಕೇವಲ ವ್ಯಾಯಾಮದ ದೃಷ್ಟಿಯಿಂದಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿಗಾಗಿ ಯೋಗವನ್ನು ಅವಲಂಬಿಸಿದ್ದರು. ಕಠಿಣ ಆಸನಗಳು ಮತ್ತು ಉಸಿರಾಟದ ನಿಯಂತ್ರಣದ ಮೂಲಕ ತಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಿದ್ದರು. ಚಿತ್ರರಂಗದ ಉತ್ತುಂಗದಲ್ಲಿದ್ದಾಗಲೂ ಅವರು ತಮ್ಮ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಲು ಯೋಗವೇ ಪ್ರಮುಖ ಕಾರಣವಾಗಿತ್ತು.
ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದ ಈ ಐತಿಹಾಸಿಕ ವೇದಿಕೆಯಲ್ಲಿ ಡಾ. ರಾಜ್‌ಕುಮಾರ್ ಅವರ ಯೋಗ ಸಾಧನೆಯನ್ನು ಸ್ಮರಿಸಿರುವುದು ಕನ್ನಡಿಗರಲ್ಲಿ ಹೆಮ್ಮೆ ತಂದಿದೆ. ಯೋಗವನ್ನು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಮೋದಿ ವಿಶ್ವಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.
ಇದನ್ನೂ ಓದಿ: ಪ್ರಶಾಂತಿ ಕುಟೀರಕ್ಕೆ ಸುವರ್ಣ ಸಂಭ್ರಮ: ಯೋಗ ಕ್ಷೇತ್ರದ ಐದು ದಶಕಗಳ ಪಯಣಕ್ಕೆ ಪ್ರಧಾನಿ ಮೋದಿ ಸಾಕ್ಷಿ
ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಈ ಮಾತುಗಳು ಡಾ. ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ದೇಶದ ಮುಂದಿಟ್ಟಿವೆ. ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ ಎಷ್ಟು ಮುಖ್ಯ ಎಂಬುದಕ್ಕೆ ಅಣ್ಣಾವ್ರು ಜೀವಂತ ಉದಾಹರಣೆಯಾಗಿದ್ದರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:59 am, Fri, 13 November 26




