‘ಸಾಲುಮರದ ತಿಮ್ಮಕ್ಕ’ನ ಸಿನಿಮಾಕ್ಕೆ ಸಾಕು ಮಗ ಸಮಸ್ಯೆ?

Saalumarada Thimmakka: ಮಹಾನ್ ಸಾಧಕಿ ಸಾಲುಮರದ ತಿಮ್ಮಕ್ಕ ಜೀವನವನ್ನು ತೆರೆ ಮೇಲೆ ತರುವ ಪ್ರಯತ್ನವೊಂದು ನಡೆಯುತ್ತಿದೆ. ಆದರೆ ಇದಕ್ಕೆ ಅವರ ಸಾಕು ಮಗ ಅಡ್ಡ ಬಂದಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪುಸ್ತಕವನ್ನು ಆಧರಿಸಿ ‘ಸಾಲು ಮರದ ತಿಮ್ಮಕ್ಕ’ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಮಾಗಡಿ ಸಮೀಪದ ಕುದೂರಿನ ಬಳಿ ನಡೆಯುತ್ತಿದ್ದು, ಪೊಲೀಸರು ಬಂದು ಸಿನಿಮಾ ಚಿತ್ರೀಕರಣ ನಿಲ್ಲಿಸಿದ್ದಾರಂತೆ.

‘ಸಾಲುಮರದ ತಿಮ್ಮಕ್ಕ’ನ ಸಿನಿಮಾಕ್ಕೆ ಸಾಕು ಮಗ ಸಮಸ್ಯೆ?
Salu Marada Thimmakka
Updated By: ರಾಜೇಶ್ ದುಗ್ಗುಮನೆ

Updated on: Jun 16, 2025 | 1:40 PM

ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (saalumarada thimmakka) ರಾಜ್ಯದ ಬಲು ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಜೀವನವನ್ನು ಪ್ರಕೃತಿಗಾಗಿ ಮುಡಿಪಾಗಿಟ್ಟು ತಮ್ಮ ಈ ವರೆಗಿನ ಜೀವತಾವಧಿಯಲ್ಲಿ ಅಸಂಖ್ಯ ಗಿಡಗಳನ್ನು ನೆಟ್ಟು ಬೆಳೆಸಿರುವ ತಿಮ್ಮಕ್ಕನನ್ನು ಇದೇ ಕಾರಣಕ್ಕೆ ಸಾಲುಮರದ ತಿಮ್ಮಕ್ಕ ಎಂದು ಕರೆಯಲಾಗುತ್ತದೆ. ಈ ಮಹಾನ್ ಸಾಧಕಿಯ ಜೀವನವನ್ನು ತೆರೆ ಮೇಲೆ ತರುವ ಪ್ರಯತ್ನವೊಂದು ನಡೆಯುತ್ತಿದೆ. ಆದರೆ ಇದಕ್ಕೆ ಅವರ ಸಾಕು ಮಗ ಅಡ್ಡ ಬಂದಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ.

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪುಸ್ತಕವನ್ನು ಆಧರಿಸಿ ‘ಸಾಲು ಮರದ ತಿಮ್ಮಕ್ಕ’ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಮಾಗಡಿ ಸಮೀಪದ ಕುದೂರಿನ ಬಳಿ ನಡೆಯುತ್ತಿದ್ದು, ಪೊಲೀಸರು ಬಂದು ಸಿನಿಮಾ ಚಿತ್ರೀಕರಣ ನಿಲ್ಲಿಸಿದ್ದಾರಂತೆ. ಈ ಬಗ್ಗೆ ಚಿತ್ರತಂಡ ದೂರಿದ್ದು, ಚಿತ್ರತಂಡವನ್ನು ಪೊಲೀಸರು ಬಂದು ಕರೆದುಕೊಂಡು ಹೋಗಿ ಸ್ಟೇಷನ್​​ನಲ್ಲಿ ಕುಳಿಸಿಕೊಂಡರು ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚಿತ್ರತಂಡ, ಸಿನಿಮಾ ಮಾಡದಂತೆ ನಮ್ಮ ಮೇಲೆ ಒತ್ತಡ ಬರ್ತಿದೆ, ಸಾಲು ಮರದ ತಿಮ್ಮಕ್ಕನ ಸಾಕು ಮಗ ಉಮೇಶ್ ಅವರು ಸಾಲು ಮರದ ತಿಮ್ಮಕ್ಕನ ಜೀವನದ ಬಗ್ಗೆ ಸಿನಿಮಾ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ‘ಸಾಲು ಮರದ ತಿಮ್ಮಕ್ಕ’ ಸಿನಿಮಾನಲ್ಲಿ ನೀನಾಸಂ ಅಶ್ವತ್, ಎಂಕೆ ಮಠ ಸೇರಿಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮಾಡುತ್ತಿರುವಾಗಲೇ ಚಿತ್ರತಂಡದ ಕೆಲ ಪ್ರಮುಖರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರಂತೆ.

ಇದನ್ನೂ ಓದಿ:ಸಿದ್ಧವಾಗುತ್ತಿದೆ ಸಾಲುಮರದ ತಿಮ್ಮಕ್ಕನ ಬಯೋಪಿಕ್; ಮುಖ್ಯ ಪಾತ್ರದಲ್ಲಿ ನಟಿ ಸೌಜನ್ಯ

ವೃಕ್ಷಮಾತೆ ಸಿನಿಮಾ ಮಾಡಲು ಸಾಲು ಮರದ ತಿಮ್ಮಕ್ಕ ಅವರ ಸಾಕು ಸಾಕು ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಸಿನಿಮಾ ಚಿತ್ರೀಕರಣಕ್ಕೆ ತಡೆ ಒಡ್ಡಿದ್ದಾರೆ ಎಂದಿದೆ ಚಿತ್ರತಂಡ. ಸಿನಿಮಾದ ಘೋಷಣೆ ಆದಾಗಿನಿಂದಲೂ ಸಾಲು ಮರದ ತಿಮ್ಮಕ್ಮ ಅವರ ಸಾಕು ಮಗ ಉಮೇಶ್ ಹಾಗೂ ಚಿತ್ರತಂಡದ ನಡುವೆ ಘರ್ಷಣೆ ಇದೆ ಎನ್ನಲಾಗುತ್ತಿದೆ.

‘ಒರಟ ಐ ಲವ್ ಯು” ಸಿನಿಮಾ ನಿರ್ದೇಶಿಸಿದ್ದ ಒರಟ ಶ್ರೀ ಅವರು ‘ವೃಕ್ಷಮಾತೆ’ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಸೌಜನ್ಯ ಅವರು ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ‌. ನೀನಾಸಂ ಅಶ್ವಥ್ ತಿಮ್ಮಕ್ಕನ ಪತಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಂ.ಕೆ.ಮಠ, ಗಣೇಶ್ ಕೆ ಸರ್ಕಾರ್, ದೀಪ ಡಿ‌.ಕೆ ಅಂಜನಮ್ಮ, ಭೂಮಿಕಾ, ಪ್ರಕಾಶ್ ಶೆಟ್ಟಿ, ಮನು ಸೇರಿ ಮೊದಲಾದವರು ತಾರಾಬಳಗದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Sat, 14 June 25