ಕನ್ನಡ ಸಿನಿಮಾಗೆ ‘ಕಮಲ್ ಶ್ರೀದೇವಿ’ ಟೈಟಲ್; ಇಂಥ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ಏನು?
ಸಚಿನ್ ಚೆಲುವರಾಯ ಸ್ವಾಮಿ ನಟನೆಯ ಹೊಸ ಸಿನಿಮಾಗೆ ‘ಕಮಲ್ ಶ್ರೀದೇವಿ’ ಎಂದು ಶೀರ್ಷಿಕೆ ಇಡಲಾಗಿದೆ. ಹಾಗಾದ್ರೆ ಈ ಸಿನಿಮಾಗೂ ಕಮಲ್ ಹಾಸನ್, ಶ್ರೀದೇವಿಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಆ ಪ್ರಶ್ನೆಗೆ ಚಿತ್ರತಂಡದವರು ಉತ್ತರ ನೀಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಟೈಟಲ್ನಿಂದಾಗಿ ‘ಕಮಲ್ ಶ್ರೀದೇವಿ’ (Kamal Sridevi) ಸಿನಿಮಾ ಕೌತುಕ ಮೂಡಿಸಿದೆ. ಸಚಿನ್ ಚೆಲುವರಾಯ ಸ್ವಾಮಿ (Sachin Cheluvarayaswamy), ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಗಜರಾಮ’ ಖ್ಯಾತಿಯ ವಿ.ಎ. ಸುನೀಲ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ-ನಿರ್ಮಾಪಕ ರಾಜವರ್ಧನ್ ವಹಿಸಿಕೊಂಡಿದ್ದಾರೆ. ಎನ್. ಚೆಲುವರಾಯ ಸ್ವಾಮಿ ಅವರು ‘ಕಮಲ್ ಶ್ರೀದೇವಿ’ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ‘ಸ್ವರ್ಣಾಂಬಿಕ ಪಿಕ್ಚರ್ಸ್’ ಮೂಲಕ ಬಿ.ಕೆ. ಧನಲಕ್ಷ್ಮೀ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಕಮಲ್ ಹಾಸನ್ ಮತ್ತು ಶ್ರೀದೇವಿ ಅವರು ಜೋಡಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಅವರದ್ದು ಹಿಟ್ ಜೋಡಿ. ಈಗ ಕನ್ನಡದ ಸಿನಿಮಾಗೆ ‘ಕಮಲ್ ಶ್ರೀದೇವಿ’ ಎಂದು ಶೀರ್ಷಿಕೆ ಇಟ್ಟಿರುವುದು ಕೌತುಕಕ್ಕೆ ಕಾರಣ ಆಗಿದೆ. ಆದರೆ, ‘ಕಮಲ್ ಶ್ರೀದೇವಿ’ ಚಿತ್ರಕ್ಕೂ ಕಮಲ್ ಹಾಸನ್ ಶ್ರೀದೇವಿ ಹೆಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಕಮಲ್ ಮತ್ತು ಶ್ರೀದೇವಿ ಎಂಬುದು ಸಿನಿಮಾದಲ್ಲಿನ ಎರಡು ಪಾತ್ರಗಳು ಎಂದು ಚಿತ್ರತಂಡ ತಿಳಿಸಿದೆ.
‘ಕಮಲ್ ಶ್ರೀದೇವಿ’ ಟೈಟಲ್ ಕೆಳಗೆ ಅಡಿ ಬರಹವಾಗಿ ಬರೆದಿರುವ ಕೇಸ್ ನಂಬರ್ ನೋಡಿದರೆ ಇದು ನೈಜ ಘಟನೆ ಆಧಾರಿತ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಈ ಸಿನಿಮಾಗೆ ಬಹುತೇಕ ಚಿತ್ರೀಕರಣ ಮುಗಿದಿದೆ. ಸಿನಿಮಾದ ಪೋಸ್ಟರ್ ನೋಡಿ ಪ್ರೇಕ್ಷಕರು ಇಂಪ್ರೆಸ್ ಆಗಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ.
ಸದ್ಯಕ್ಕೆ ‘ಕಮಲ್ ಶ್ರೀದೇವಿ’ ಸಿನಿಮಾಗೆ ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಜೊತೆಗೆ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಸಚಿನ್ ಚೆಲುವರಾಯ ಸ್ವಾಮಿ, ರಾಜವರ್ಧನ್, ಉಮೇಶ್, ಮಿತ್ರ, ಅಕ್ಷಿತಾ ಬೋಪಯ್ಯ, ರಾಘು ಶಿವಮೊಗ್ಗ, ನಿರ್ದೇಶಕ ಸುನೀಲ್, ಸಂಗೀತ ನಿರ್ದೇಶಕ ಕೀರ್ತನ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ‘45’ ಸಿನಿಮಾ ಹಾಡಿನಲ್ಲಿ ಶಿವಣ್ಣ, ಉಪ್ಪಿ, ರಾಜ್ ಶೆಟ್ಟಿ ಜತೆ ಉಗಾಂಡ ಮಕ್ಕಳ ಡ್ಯಾನ್ಸ್
‘ಮಮ್ಮಿ’ ಸಿನಿಮಾ ಖ್ಯಾತಿಯ ಲೋಹಿತ್ ಅವರ ನೀಡಿದ ಕಥೆಯ ಎಳೆಯನ್ನು ಇಟ್ಟುಕೊಂಡು ‘ಕಮಲ್ ಶ್ರೀದೇವಿ’ ಸಿನಿಮಾ ಮಾಡಲಾಗಿದೆ. ‘ಗೊಂಬೆಗಳ ಲವ್’ ಖ್ಯಾತಿಯ ಸಂತೋಷ್ ಅವರು ‘ಕಮಲ್ ಶ್ರೀದೇವಿ’ ಟೈಟಲ್ ನೀಡಿದ್ದು ಎಂದು ರಾಜವರ್ಧನ್ ಮಾಹಿತಿ ಹಂಚಿಕೊಂಡರು. ಕೆಲವೇ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








