Rajinikanth: ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ
ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಹಾಗೂ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದವರು ಸಾಜಿದ್ ನಾಡಿಯಾದ್ವಾಲ. ಅವರು ರಜನಿಕಾಂತ್ ಬಯೋಪಿಕ್ಗೆ ಬಂಡವಾಳ ಹೂಡುತ್ತಿದ್ದಾರೆ. ಭಾರತದ ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ.

ರಜನಿಕಾಂತ್ (Rajinikanth) ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಬೆಂಗಳೂರಿನಲ್ಲಿ ಅವರು ಬಸ್ ಕಂಡಕ್ಟರ್ ಆಗಿದ್ದರು. ಆ ಬಳಿಕ ಅವರು ರಾತ್ರೋರಾತ್ರಿ ಚೆನ್ನೈಗೆ ಹೋದರು. ಅಲ್ಲಿ ಸ್ಟಾರ್ ಹೀರೋ ಆದರು. ಕನ್ನಡ ಚಿತ್ರಗಳಲ್ಲೂ ರಜನಿಕಾಂತ್ ನಟಿಸಿದ್ದಾರೆ. ಅವರ ಜೀವನ ಅನೇಕರಿಗೆ ಸ್ಫೂರ್ತಿ. ಇದನ್ನು ತೆರೆಮೇಲೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಹಾಗೂ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದವರು ಸಾಜಿದ್ ನಾಡಿಯಾದ್ವಾಲ. ಅವರು ರಜನಿಕಾಂತ್ ಬಯೋಪಿಕ್ಗೆ ಬಂಡವಾಳ ಹೂಡುತ್ತಿದ್ದಾರೆ. ಭಾರತದ ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ.
ರಜನಿಕಾಂತ್ ಬಯೋಪಿಕ್ ಸದ್ಯ ಆರಂಭದ ಹಂತದಲ್ಲಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ರಜನಿಕಾಂತ್ ಬಯೋಪಿಕ್ ಎಂದಾಗ ಕುತೂಹಲ ಜಾಸ್ತಿ. ಹೀಗಾಗಿ, ಹೀರೋ ಪಾತ್ರದಲ್ಲಿ ನಟಿಸೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ರಜನಿಕಾಂತ್ ಅಳಿಯ ಧನುಷ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ರಜನಿಕಾಂತ್ ಬಯೋಪಿಕ್ ಮಾಡಬೇಕು ಎಂದರೆ ಸಾಕಷ್ಟು ಸಿದ್ಧತೆ ಬೇಕು. ರಜನಿಕಾಂತ್ನ ಮಾತನಾಡಿಸಿ ಹಳೆಯ ಘಟನೆಗಳ ಬಗ್ಗೆ ಚರ್ಚಿಸಬೇಕು. ಇದಾದ ಬಳಿಕ ಸ್ಕ್ರಿಪ್ಟ್ ಕೆಲಸಗಳನ್ನು ಮಾಡಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. 2025ರ ವೇಳೆಗೆ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ರೆಟ್ರೋ ಕಾಲದ ಬೆಂಗಳೂರು ಹಾಗೂ ಚೆನ್ನೈನ ಮರುಸೃಷ್ಟಿ ಮಾಡುವುದು ಕೂಡ ತಂಡಕ್ಕೆ ದೊಡ್ಡ ಚಾಲೆಂಜ್.
ಇದನ್ನೂ ಓದಿ: ನಿರಾಸೆ ಮೂಡಿಸಿತಾ ರಜನಿಕಾಂತ್ ನಟನೆಯ ‘ಕೂಲಿ’ ಟೀಸರ್? ಇಲ್ಲಿವೆ ಕಾರಣ
ಸಾಜಿದ್ ನಾಡಿಯಾದ್ವಾಲ ಅವರು ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹೀರೋ. ಸಿನಿಮಾದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.