ನಿರಾಸೆ ಮೂಡಿಸಿತಾ ರಜನಿಕಾಂತ್ ನಟನೆಯ ‘ಕೂಲಿ’ ಟೀಸರ್? ಇಲ್ಲಿವೆ ಕಾರಣ
ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಮೂಲಕ ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಬಿಸ್ನೆಸ್ ಮಾಡಿತ್ತು. ಅವರು ಈಗ ‘ಕೂಲಿ’ ಚಿತ್ರದ ಮೂಲಕ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಕೆಲವು ವರದಿಗಳ ಪ್ರಕಾರ, ಅನೇಕರಿಗೆ ಈ ಟೈಟಲ್ ಇಷ್ಟವಾಗಿಲ್ಲ.

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದ (Coolie Movie) ಟೀಸರ್ ಸೋಮವಾರ (ಏಪ್ರಿಲ್ 22) ರಿಲೀಸ್ ಆಗಿದೆ. ಇದು ರಜನಿಕಾಂತ್ ನಟನೆಯ 171ನೇ ಸಿನಿಮಾ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಕೂಲಿ’ ಟೈಟಲ್ ಏನೋ ಫ್ಯಾನ್ಸ್ಗೆ ಇಷ್ಟ ಆಗಿದೆ. ಆದರೆ, ಅಂದುಕೊಂಡ ರೀತಿಯಲ್ಲಿ ಟೀಸರ್ ಮೂಡಿ ಬಂದಿಲ್ಲ ಅನ್ನೋದು ರಜನಿ ಫ್ಯಾನ್ಸ್ ಆರೋಪ. ಇದಕ್ಕೆ ಸಾಕಷ್ಟು ಕಾರಣಗಳನ್ನು ಅವರು ನೀಡಿದ್ದಾರೆ.
ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಮೂಲಕ ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಬಿಸ್ನೆಸ್ ಮಾಡಿತ್ತು. ಅವರು ಈಗ ‘ಕೂಲಿ’ ಚಿತ್ರದ ಮೂಲಕ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಕೆಲವು ವರದಿಗಳ ಪ್ರಕಾರ, ಅನೇಕರಿಗೆ ಈ ಟೈಟಲ್ ಇಷ್ಟವಾಗಿಲ್ಲ. ಈಗಾಗಲೇ ‘ಕೂಲಿ ನಂಬರ್ 1’ ರೀತಿಯ ಸಿನಿಮಾಗಳು ಬಂದು ಹೋಗಿವೆ. ಹೀಗಾಗಿ, ಟೈಟಲ್ ಹೊಸದು ಅನ್ನೋ ಫೀಲ್ ಸಿಗುತ್ತಿಲ್ಲ.
‘ವಿಕ್ರಮ್’ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಟೀಸರ್ ಮೊದಲ ಬಾರಿಗೆ ರಿಲೀಸ್ ಆದಾಗ ಜನರಲ್ಲಿ ಒಂದು ದೊಡ್ಡ ಕ್ರೇಜ್ ಸೃಷ್ಟಿ ಆಗಿತ್ತು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಲೋಕೇಶ್ ಕನಗರಾಜ್ ಅವರ ಕಾಂಬಿನೇಷನ್ ಸಖತ್ ಕ್ರೇಜ್ ಸೃಷ್ಟಿ ಮಾಡಿತ್ತು. ಆದರೆ, ಅಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿ ಮಾಡೋಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ರಜನಿಕಾಂತ್ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್
‘ಕೂಲಿ’ ಸಿನಿಮಾ ‘ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ನ ಭಾಗವಲ್ಲ ಎಂದು ಲೋಕೇಶ್ ಕನಗರಾಜ್ ಹೇಳಿಕೊಂಡಿದ್ದರು. ಆದರೆ, ಟೀಸರ್ ನೋಡಿದ ಎಲ್ಲರಿಗೂ ಟೀಸರ್ನಲ್ಲಿ ಸಿನಿಮ್ಯಾಟಿಕ್ ಯೂನಿವರ್ಸ್ನ ಶೇಡ್ ಕಾಣಿಸಿದೆ. ಈ ಮೊದಲು ರಿಲೀಸ್ ಆದ ‘ವಿಕ್ರಮ್’, ‘ಲಿಯೋ’ ಟೀಸರ್ ಮಾದರಿಯಲ್ಲೇ ಇದು ಕೂಡ ಇದೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ‘ಕೂಲಿ’ ಸಿನಿಮಾ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಇದೆ ಎಂದು ಹೇಳಲಾಗುತ್ತಿದೆ. ‘ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ಗಳು ಇದೇ ಮಾದರಿಯ ಸ್ಮಗ್ಲಿಂಗ್ ಬಗ್ಗೆ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.