ಈ ವಾರ ಕನ್ನಡದಲ್ಲಿ ಬರ್ತಿದೆ ‘ಪೌಡರ್’; ಈ ಚಿತ್ರದ ಸ್ಪೆಷಾಲಿಟಿ ಬಗ್ಗೆ ಇಲ್ಲಿದೆ ವಿವರ

|

Updated on: Aug 22, 2024 | 12:48 PM

ಆಗಸ್ಟ್ 23ರಂದು ‘ಪೌಡರ್’ ಸಿನಿಮಾ ರಿಲೀಸ್ ಆಗಲಿದೆ. ಜನಾರ್ಧನ್ ಚಿಕ್ಕಣ್ಣ ಅವರು ‘ಗುಳ್ಟು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಅವರು ‘ಪೌಡರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ಪೌಡರ್’ ಜೊತೆಗೆ ‘ಸಿ’ ಹಾಗೂ ‘ತಾಜ್’ ಹೆಸರಿನ ಥ್ರಿಲ್ಲರ್ ಸಿನಿಮಾ ರಿಲೀಸ್ ಆಗುತ್ತಿವೆ.

ಈ ವಾರ ಕನ್ನಡದಲ್ಲಿ ಬರ್ತಿದೆ ‘ಪೌಡರ್’; ಈ ಚಿತ್ರದ ಸ್ಪೆಷಾಲಿಟಿ ಬಗ್ಗೆ ಇಲ್ಲಿದೆ ವಿವರ
ಈ ವಾರ ಕನ್ನಡದಲ್ಲಿ ಬರ್ತಿದೆ ‘ಪೌಡರ್’; ಈ ಚಿತ್ರದ ಸ್ಪೆಷಾಲಿಟಿ ಬಗ್ಗೆ ಇಲ್ಲಿದೆ ವಿವರ
Follow us on

ಶುಕ್ರವಾರ ಬಂತು ಎಂದರೆ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ. ಈ ಶುಕ್ರವಾರವೂ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ ವಾರ ರಿಲೀಸ್ ಆದ ಸಿನಿಮಾಗಳ ಜೊತೆ ಈ ಚಿತ್ರಗಳೂ ಸ್ಪರ್ಧೆಗೆ ಇಳಿಯುತ್ತಿವೆ. ಈ ವಾರ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ಈ ವಾರ ರಿಲೀಸ್ ಆಗಲಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಪೌಡರ್’

ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ

ಪಾತ್ರವರ್ಗ: ದಿಗಂತ್ ಮಂಚಾಲೆ, ಧನ್ಯಾ ರಾಮ್​ಕುಮಾರ್, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ರವಿಶಂಕರ್ ಗೌಡ, ನಾಗಭೂಷಣ್

ನಿರ್ಮಾಣ: ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ಅರುಣಭ್ ಕುಮಾರ್

ಸಂಗೀತ: ವಾಸುಕಿ ವೈಭವ್

ಜನಾರ್ಧನ್ ಚಿಕ್ಕಣ್ಣ ಅವರು ‘ಗುಳ್ಟು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರ ಕಾಮಿಡಿ, ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿತ್ತು. ಈಗ ಅವರು ‘ಪೌಡರ್’ ಸಿನಿಮಾ ಮಾಡಿದ್ದಾರೆ. ಇದು ಕೂಡ ಕಾಮಿಡಿ, ಥ್ರಿಲ್ಲರ್ ಅಂಶವನ್ನು ಹೊಂದಿದೆ.

ವಿಶೇಷತೆ

‘ಗುಳ್ಟು’ ಸಿನಿಮಾ ಜನರಿಂದ ಮೆಚ್ಚುಗೆ ಪಡೆಯಿತು. ಈ ಕಾರಣಕ್ಕೆ ‘ಪೌಡರ್’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಸಿನಿಮಾದ ಕೊನೆಯ 20 ನಿಮಿಷ ಗ್ರಾಫಿಕ್ಸ್ ಬಳಕೆ ಆಗಿದೆ. ಈ ಸಿನಿಮಾ ಭರಪೂರ ಕಾಮಿಡಿ ಇರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸೂಚನೆ ಸಿಕ್ಕಿದೆ.

ಉಳಿದ ಸಿನಿಮಾಗಳು

‘ಪೌಡರ್’ ಜೊತೆಗೆ ‘ಸಿ’ ಹಾಗೂ ‘ತಾಜ್’ ಹೆಸರಿನ ಥ್ರಿಲ್ಲರ್ ಸಿನಿಮಾ ರಿಲೀಸ್ ಆಗುತ್ತಿವೆ. ಎರಡೂ ಸಿನಿಮಾಗಳಲ್ಲಿ ಇರೋದು ಹೊಸಬರ ತಂಡ. ತೆಲುಗಿನಲ್ಲಿ ರಾವ್ ರಮೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋ ‘ಮಾರುತಿ ನಗರ್ ಸುಬ್ರಮಣ್ಯಂ’ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ಜಗ್ಗೇಶ್ ಧ್ವನಿಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ; ಇದು ಪಕ್ಕಾ ‘ಪೌಡರ್’ ಕಥೆ

ಕಳೆದ ವಾರದ ಸಿನಿಮಾಗಳು

ಈ ಮೊದಲು ರಿಲೀಸ್ ಆಗಿರೋ ಕನ್ನಡದ ‘ಭೀಮ’, ‘ಕೃಷ್ಣಂ ಪ್ರಣಯಸಖಿ’ ಸಿನಿಮಾಗಳು ಸ್ಪರ್ಧೆಯಲ್ಲಿ ಇವೆ. ಹಿಂದಿಯ ‘ಸ್ತ್ರೀ 2’ ಸಿನಿಮಾ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾಗಳ ಜೊತೆಗೆ ಹೊಸ ಸಿನಿಮಾಗಳು ಸ್ಪರ್ಧೆ ಎದುರಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.