ಹೊಸ ವರ್ಷಕ್ಕೆ ‘ಕರಾವಳಿ’ ನೂತನ ಪೋಸ್ಟರ್​; ಕೋಣ ಏರಿ ಬಂದ ಪ್ರಜ್ವಲ್ ದೇವರಾಜ್​

‘ಕರಾವಳಿ’ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸುವ ರೀತಿಯಲ್ಲಿ ಹೊಸ ಪೋಸ್ಟರ್​ ಮೂಡಿಬಂದಿದೆ. ಒಂದಷ್ಟು ಕಾರಣಗಳಿಂದಾಗಿ ಇದು ಆಕರ್ಷಕವಾಗಿದೆ. ಪ್ರಜ್ವಲ್ ದೇವರಾಜ್ ಅವರು ಕೋಣದ ಮೇಲೆ ಕುಳಿತು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಘರ್ಷದ ಕಥೆ ಈ ಸಿನಿಮಾದಲ್ಲಿ ಇರಲಿದೆ.

ಹೊಸ ವರ್ಷಕ್ಕೆ ‘ಕರಾವಳಿ’ ನೂತನ ಪೋಸ್ಟರ್​; ಕೋಣ ಏರಿ ಬಂದ ಪ್ರಜ್ವಲ್ ದೇವರಾಜ್​
‘ಕರಾವಳಿ’ ಸಿನಿಮಾ ಪೋಸ್ಟರ್​

Updated on: Jan 02, 2024 | 12:56 PM

ಕನ್ನಡ ಚಿತ್ರರಂಗದಲ್ಲಿ ಕರಾವಳಿ ಭಾಗದ ಕಥೆಗಳು ಜನರಿಗೆ ಮೆಚ್ಚುಗೆ ಆಗುತ್ತಿವೆ. ಅದರಲ್ಲೂ ಗುರುದತ್​ ಗಾಣಿಗ ನಿರ್ದೇಶನದ ಕರಾವಳಿ’ ಸಿನಿಮಾ (Karavali Movie) ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಅದನ್ನು ಕಂಡು ಫ್ಯಾನ್ಸ್​ ವಾವ್​ ಎಂದಿದ್ದರು. ಈಗ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ನ್ಯೂ ಇಯರ್​ ಸೆಲೆಬ್ರೇಷನ್​ ಸಂದರ್ಭದಲ್ಲಿ ಈ ಪೋಸ್ಟರ್​ ಹೊರಬಂದಿದೆ.

‘ಕರಾವಳಿ’ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸುವ ರೀತಿಯಲ್ಲಿ ಈ ಹೊಸ ಪೋಸ್ಟರ್​ ಮೂಡಿಬಂದಿದೆ. ಒಂದಷ್ಟು ಕಾರಣಗಳಿಂದಾಗಿ ಇದು ಆಕರ್ಷಕವಾಗಿದೆ. ಪ್ರಜ್ವಲ್ ದೇವರಾಜ್ ಅವರು ಕೋಣದ ಮೇಲೆ ಕುಳಿತು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಘರ್ಷದ ಕಥೆ ‘ಕರಾವಳಿ’ ಸಿನಿಮಾದಲ್ಲಿ ಇರಲಿದೆ.

ಇದನ್ನೂ ಓದಿ: ‘ಸೋನಾ ಬೇಬಿ’ ಜೊತೆ ಬಿಂದಾಸ್ ಆಗಿ ಕುಣಿದ ಪ್ರಜ್ವಲ್ ದೇವರಾಜ್

ಕರ್ನಾಟಕದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲೂ ‘ಕರಾವಳಿ’ ಸಿನಿಮಾ ಬಗ್ಗೆ ಟಾಕ್​ ಶುರುವಾಗಿದೆ. ಟೀಸರ್ ವೀಕ್ಷಿಸಿದ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದರಿಂದಾಗಿ ಸಿನಿಮಾದ ಬೇಡಿಕೆ ಹೆಚ್ಚಾಗಿದೆ. ಪರಭಾಷೆಯಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಿ ಎಂದು ಬೇಡಿಕೆ ಬಂದಿದೆ. ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನವೇ ಈ ರೀತಿ ಡಿಮ್ಯಾಂಟ್​ ಸೃಷ್ಟಿ ಆಗಿರುವುದು ತಂಡದ ಖುಷಿಗೆ ಕಾರಣ ಆಗಿದೆ.

ಸಚಿನ್ ಬಸ್ರೂರು ಅವರು ‘ಕರಾವಳಿ ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ‘ಕರಾವಳಿ’ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಟೀಸರ್ ಹಾಗೂ ಪೋಸ್ಟರ್​ಗೆ ಮೆಚ್ಚುಗೆ ಸಿಕ್ಕಿರುವುದರಿಂದ ಚಿತ್ರತಂಡದ ಜವಾಬ್ದಾರಿ ಹೆಚ್ಚಾಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us