ಪ್ರಶಾಂತ್​ ನೀಲ್​ಗೆ ಇದೆ ಒಂದು ಒಸಿಡಿ; ‘ಕೆಜಿಎಫ್ 2’ ನಿರ್ದೇಶಕ ಹೇಳಿದ್ದು ಏನು?

ಪ್ರಶಾಂತ್ ನೀಲ್ ಅವರ ಹಳೆಯ ಸಂದರ್ಶನದಲ್ಲಿ ಅವರ ಒಸಿಡಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಬಗ್ಗೆ ಮಾಹಿತಿ ಹೊರಬಿದ್ದಿದೆ. ಅವರು ಕಪ್ಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ ಮತ್ತು ಕೆಜಿಎಫ್ ಚಿತ್ರಗಳ ಕಪ್ಪು ಬಣ್ಣದ ಶೈಲಿ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ವೇಷಭೂಷಣವೂ ಇದಕ್ಕೆ ಉದಾಹರಣೆಯಾಗಿದೆ.

ಪ್ರಶಾಂತ್​ ನೀಲ್​ಗೆ ಇದೆ ಒಂದು ಒಸಿಡಿ; ‘ಕೆಜಿಎಫ್ 2’ ನಿರ್ದೇಶಕ ಹೇಳಿದ್ದು ಏನು?
ಪ್ರಶಾಂತ್ ನೀಲ್
Edited By:

Updated on: Feb 08, 2025 | 8:00 AM

ಪ್ರಶಾಂತ್ ನೀಲ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ‘ಕೆಜಿಎಫ್ 2’ ನಿರ್ದೇಶನದ ಮೂಲಕ ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಪ್ರಶಾಂತ್ ನೀಲ್ ಅವರ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮಗೆ ಇರುವ ಒಸಿಡಿ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಸಿನಿಮಾ ತುಂಬಾನೇ ಬ್ಲ್ಯಾಕ್ ಆಗಿ ಮೂಡಿ ಬರೋದು ಏಕೆ ಎಂಬುದನ್ನು ವಿವರವಾಗಿ ಹೇಳಿದ್ದರು.

ರಾಜಮೌಳಿ ಅವರ ಸಿನಿಮಾಗಳು ತುಂಬಾನೇ ರಿಚ್ ಆಗಿ, ಕಲರ್​ಫುಲ್ ಆಗಿ ಮೂಡಿ ಬರುತ್ತವೆ. ಆದರೆ, ಪ್ರಶಾಂತ್ ನೀಲ್ ಅವರಿಗೆ ಈ ರೀತಿ ಸಿನಿಮಾ ಮಾಡಲು ಸಾಧ್ಯವೇ ಇಲ್ಲವಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಈ ಮೊದಲು ಹೇಳಿಕೊಂಡಿದ್ದರು. ಕಪ್ಪು ಎಂದರೆ ಅವರಿಗೆ ಇಷ್ಟ. ಅವರಿಗೆ ಕಲರ್​ಫುಲ್ ಅಂದರೆ ಇಷ್ಟ ಆಗೋದಿಲ್ಲ.

ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್​ನ ಶಾರ್ಟ್​ ಆಗಿ ಒಸಿಡಿ ಎಂದು ಕರೆಯಲಾಗುತ್ತದೆ. ಬಣ್ಣಗಳ ವಿಚಾರದಲ್ಲಿ ಪ್ರಶಾಂತ್ ನೀಲ್ ಅವರಿಗೆ ಈ ಒಸಿಡಿ ಇದೆ. ಅಂದರೆ ಅವರಿಗೆ ಹೆಚ್ಚಿನ ಬಣ್ಣ ಇಷ್ಟ ಆಗುವುದಿಲ್ಲ. ಅದರಲ್ಲೂ ಡಾರ್ಕ್ ಬಣ್ಣ ಎಂದರೆ ದೂರವೇ ಇರುತ್ತಾರೆ. ಅದುವೇ ಸಿನಿಮಾದಲ್ಲೂ ರಿಫ್ಲೆಕ್ಟ್ ಆಗಿದೆ.

ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಒಂದು ಕುರ್ತಾ ತಂದುಕೊಟ್ಟರು. ಅದು ಕಪ್ಪು ಬಣ್ಣದಲ್ಲಿ ಇತ್ತು. ಆ ಬಳಿಕ ಇಷ್ಟ ಆಗಿಲ್ಲ ಎಂದಾಗ ಮತ್ತೊಂದು ತಂದರು. ಅದು ಕಪ್ಪು ಬಣ್ಣ ಹೊಂದಿತ್ತು. ನಂತರ ತಂದಿದ್ದೂ ಕಪ್ಪು ಬಣ್ಣದಲ್ಲೇ ಇತ್ತು. ಈ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪೃಥ್ವಿರಾಜ್ ಅವರು ಕಪ್ಪು ಬಣ್ಣದ ಡ್ರೆಸ್​ನಲ್ಲೇ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ‘ಸಲಾರ್’ ಸಿನಿಮಾ ಬಗ್ಗೆ ಅಸಮಾಧಾನ ಹೊರ ಹಾಕಿದ ಪ್ರಶಾಂತ್ ನೀಲ್

ಬಟ್ಟೆಗಳ ವಿಚಾರದಲ್ಲೂ ಪ್ರಶಾಂತ್ ನೀಲ್ ಅವರಿಗೆ ಹೆಚ್ಚು ಕಲರ್ಸ್ ಇಷ್ಟ ಆಗೋದಿಲ್ಲ. ಇದನ್ನು ಅವರು ಅನೇಕ ಬಾರಿ ಹೇಳಿದ್ದರು. ಹೀಗಾಗಿ, ಅವರು ಕಲರ್​ಫುಲ್ ಡ್ರೆಸ್​ಗಳನ್ನು ಧರಿಸಿಯೇ ಇರಲಿಲ್ಲ. ಸದ್ಯ ಅವರು ‘ಸಲಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜೂನಿಯರ್ ಎನ್​ಟಿಆರ್ ಚಿತ್ರದಲ್ಲೂ ಅವರು ತೊಡಗಿಕೊಳ್ಳಬೇಕಿದೆ. ‘ಕೆಜಿಎಫ್ 3’ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.