ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರು ದರ್ಶನ್ರ (Darshan Thoogudeepa) ಕೆಲವು ಹಳೆ ಪ್ರಕರಣಗಳು, ರೌಡಿ ವರ್ತನೆಗಳ ಘಟನೆಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ. ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಇದೀಗ ಮಾಧ್ಯಮಗಳ ಮುಂದೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ರೇಣುಕಾ ಸ್ವಾಮಿಯ ಕುಟುಂಬದ ಪರವಾಗಿ ನಿಲ್ಲುವುದು ದರ್ಶನ್ ಅಭಿಮಾನಿಗಳ ಕರ್ತವ್ಯ ಎಂದಿರು ಸಂಬರ್ಗಿ, ಅಪಾರ್ಟ್ಮೆಂಟ್ನಲ್ಲಿ ದರ್ಶನ್ ಕರ್ಮಕಾಂಡಗಳ ಬಗ್ಗೆಯೂ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರೊಟ್ಟಿಗೆ ಮಾತನಾಡಿರುವ ಸಂಬರ್ಗಿ, ‘ದರ್ಶನ್ ರ ಪತ್ನಿ ವಿಜಯಲಕ್ಷ್ಮಿ ಅವರು ವಾಸವಿರುವ ಅಪಾರ್ಟ್ಮೆಂಟ್ನಲ್ಲಿಯೇ ನಾನು ಸಹ ಕಳೆದ ಕೆಲ ವರ್ಷಗಳಿಂದಲೂ ವಾಸವಿದ್ದೇನೆ. ಒಂದು ಬಾರಿಯೂ ಅವರನ್ನು ನೋಡಿದ್ದಿಲ್ಲ. ಅವರು ಹಗಲು ಬರುವುದೇ ಅಪರೂಪ, ಅವರೇನಿದ್ದರೂ ದೆವ್ವಗಳು ಓಡಾಡುವ ಸಮಯದಲ್ಲಿಯೇ ಬರುತ್ತಿದ್ದಿದ್ದು, ಅವರಿಂದಾಗಿ ಆಗಾಗ್ಗೆ ಅಪಾರ್ಟ್ಮೆಂಟ್ನಲ್ಲಿ ಸಮಸ್ಯೆ ಆಗುತ್ತಲೇ ಇರುತ್ತಿತ್ತು’ ಎಂದಿದ್ದಾರೆ ಸಂಬರ್ಗಿ.
ಇದನ್ನೂ ಓದಿ:ದರ್ಶನ್ ಬಂಧನದ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ
‘ರಾತ್ರಿ ಬಂದರು ವಾಚ್ಮ್ಯಾನ್ಗೆ ಹೊಡೆದರು, ಆ ನಿಯಮ ಮುರಿದರು, ಅವರೊಟ್ಟಿಗೆ ಜಗಳ ಮಾಡಿದರು ಇದೇ ವಿಷಯಗಳು ಕೇಳಲು ಸಿಗುತ್ತಿತ್ತು. ನಮ್ಮ ಅಪಾರ್ಟ್ಮೆಂಟ್ ಇರುವುದು ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಆ ಠಾಣೆಯಲ್ಲಿ ಇವರ ಮೇಲೆ ಹತ್ತಕ್ಕೂ ಪ್ರಕರಣಗಳಿರಬಹುದೇನೋ, ದಾಖಲೆ ತೆಗೆಸಿದರೆ ಗೊತ್ತಾಗುತ್ತದೆ. ಇಷ್ಟೆಲ್ಲ ಆಗಿದ್ದರೂ ಸಹ ಒಮ್ಮೆಯೂ ಸಹ ಅವರನ್ನು ಹೋಗಿ ಮಾತನಾಡಿಸಬೇಕು ಎಂದು ನಮಗೆ ಅನಿಸಿದ್ದಿಲ್ಲ’ ಎಂದಿದ್ದಾರೆ ಸಂಬರ್ಗಿ.
‘ನನ್ನ 20 ವರ್ಷದ ಸಿನಿಮಾ ಕರಿಯರ್ನಲ್ಲಿ ಈ ವರೆಗೆ ಒಮ್ಮೆಯೂ ಸಹ ದರ್ಶನ್ ಜೊತೆ ಫೋಟೊ ತೆಗೆಸಿಕೊಂಡಿಲ್ಲ. ಅವರ ಕೈಕುಲುಕಿಲ್ಲ. ಅವರ ಮನೆಗೆ ಹತ್ತಿರದಲ್ಲೇ ಇದ್ದರು ನಾನು ಅವರ ಸಂಪರ್ಕ ಬೆಳೆಸಲು ಪ್ರಯತ್ನಿಸಿದವನಲ್ಲ. ದುಷ್ಟರಿಂದ ದೂರ ಇರಬೇಕು ಎಂಬುದು ನನ್ನ ನಂಬಿಕೆ, ಹಾಗಾಗಿ ಆ ದೇವರೆ ನಮ್ಮನ್ನು ಅವರನ್ನೂ ದೂರ ಇಟ್ಟಿದ್ದಾನೆ’ ಎಂದಿದ್ದಾರೆ ಸಂಬರ್ಗಿ. ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಅವರ ಪತ್ನಿಯ ಬ್ಯಾಂಕ್ ಖಾತೆ ಹಂಚಿಕೊಂಡಿದ್ದರು ಸಂಬರ್ಗಿ, ದರ್ಶನ್ ಅಭಿಮಾನಿಗಳು ಆ ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ