ಪ್ರಿಯಾ ಆನಂದ್ ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ಕನ್ನಡ ಮಂದಿಗೂ ಚಿರಪರಿಚಿತರಾಗಿದ್ದಾರೆ. ಇದಕ್ಕೆ ಕಾರಣ ಅವರು ಕನ್ನಡದಲ್ಲಿ ಮಾಡಿರೋ ಸಿನಿಮಾಗಳು. ಪುನೀತ್ ರಾಜ್ಕುಮಾರ್ ಜೊತೆ ಅವರು ‘ರಾಜಕುಮಾರ್’ ಹಾಗೂ ‘ಜೇಮ್ಸ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರಗಳು ಹಿಟ್ ಆಗಿವೆ. ಈ ಸಿನಿಮಾದಿಂದ ಅವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಪುನೀತ್ ಬಗ್ಗೆ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರತಿ ಸಂದರ್ಶನದಲ್ಲೂ ಪ್ರಿಯಾ ಆನಂದ್ ಅವರು ಪುನೀತ್ನ ನೆನಪಿಸಿಕೊಳ್ಳುತ್ತಿದ್ದರು. ತಮಿಳಿನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ‘ಪುನೀತ್ ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ಸಿಂಪಲ್ ಆಗಿ ಇರೋ ವಿಚಾರವನ್ನು ಅವರಿಂದಲೇ ಕಲಿತಿದ್ದೇನೆ. ಅವರದ್ದು ದೊಡ್ಡ ಕುಟುಂಬ. ಆದಾಗ್ಯೂ ಸಾಮಾನ್ಯರ ಕಷ್ಟಗಳು ಅವರಿಗೆ ಗೊತ್ತು. ಎಲ್ಲರಿಗೂ ಈ ಗುಣ ಇರಲ್ಲ. ಯಶಸ್ಸು ಕಂಡಕೂಡಲೇ ಎಲ್ಲರನ್ನೂ ಮರೆಯುವವರು ಇದ್ದಾರೆ. ಆದರೆ, ಅವರು ಹಾಗಲ್ಲ. ಟಿವಿಯಲ್ಲೂ ನೋಡಿದರೂ, ಎದುರಿಂದಲೂ ನೋಡಿದರೂ ಅವರ ಸ್ಮೈಲ್ ಇಷ್ಟ ಆಗುತ್ತದೆ’ ಎಂದು ಹೇಳಿದ್ದರು ಪ್ರಿಯಾ ಆನಂದ್.
‘ಗೆಳೆಯರ ಜೊತೆ ಅವರು ಜಾಲಿ ಆಗಿ ಇರುತ್ತಾರೆ. ನಾವು ರಾಜಕುಮಾರ ಸಿನಿಮಾ ಶೂಟ್ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದೆವು. ಅಲ್ಲಿಯೂ ಅವರನ್ನು ಫ್ರೆಂಡ್ಸ್ ಮಾತನಾಡುತ್ತಿದ್ದರು. ಮಾಧ್ಯಮಗಳ ಜೊತೆ ಅವರು ನೇರವಾಗಿ ಮಾತನಾಡುತ್ತಿದ್ದರು. ಪಿಆರ್ ಏಜೆನ್ಸಿ ಮೂಲಕ ಅವರು ಕಾಂಟ್ಯಾಕ್ಟ್ ಮಾಡ್ತಾ ಇರಲಿಲ್ಲ. ಅವರು ಫ್ಯಾಮಿಲಿ ಮ್ಯಾನ್. ಒಳ್ಳೆಯ ತಂದೆ, ಅಣ್ಣ, ಪತಿ ಎಲ್ಲವೂ ಹೌದು. ಅಮೇಜಿಂಗ್ ವ್ಯಕ್ತಿ’ ಎಂದಿದ್ದಾರೆ ಅವರು.
‘ಪುನೀತ್ ಅವರಂದ ಕಲಿತ ಒಂದು ಪ್ರಮುಖ ವಿಚಾರ ಎಂದರೆ ಆ ಕ್ಷಣವನ್ನು ಎಂಜಾಯ್ ಮಾಡಿ. ಜೀವನವನ್ನು ಗಂಭೀರವಾಗಿ ಸ್ವೀಕರಿಸಬೇಡಿ. ಅವರು ಜಾಲಿ ಆಗಿ ಇರುತ್ತಾ ಇದ್ದರು. ಅವರು ಯಾವಾಗಲೂ ನನ್ನ ಫೇವರಿಟ್ ಹೀರೋ. ಅವರು ಫೇವರಿಟ್ ಪರ್ಸನ್. ಅವರು ಇರುವಾಗಲೇ ಹಲವು ರೆಕಾರ್ಡ್ಗಳನ್ನು ಬರೆದಿದ್ದಾರೆ. ಈ ರೀತಿಯ ರೆಕಾರ್ಡ್ ಮಾಡೋದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳುತ್ತಲೇ ಕಣ್ಣೀರು ಹಾಕಿದ್ದರು ಪ್ರಿಯಾ ಆನಂದ್.
ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ನೋಡಿ ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ ಪ್ರಿಯಾ ಆನಂದ್
ಪ್ರಿಯಾ ಆನಂದ್ ಅವರು ಪುನೀತ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ. ಈ ಕಾರಣಕ್ಕೆ ಪುನೀತ್ ಮೇಲೆ ಅವರಿಗೆ ವಿಶೇಷ ಪ್ರೀತಿ. ಪುನೀತ್ ರಾಜ್ಕುಮಾರ್ ಯಾವ ರೀತಿ ಇರುತ್ತಿದ್ದರು ಎಂಬುದನ್ನು ಅವರು ಕಂಡಿದ್ದಾರೆ. ‘ರಾಜಕುಮಾರ’ ಹಾಗೂ ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ಹಾಗೂ ಪ್ರಿಯಾ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.