ಸಿನಿಮೀಯ ರೀತಿ ಪ್ರಿಯಾಂಕಾ ಉಪೇಂದ್ರ ಮೊಬೈಲ್​ ಹ್ಯಾಕ್; ಹಣಕ್ಕೆ ಬೇಡಿಕೆ ಇಟ್ಟ ಹ್ಯಾಕರ್

ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್ ಹ್ಯಾಕ್ ಆಗಿದೆ. ಅವರ ಹೆಸರಿನಲ್ಲಿ ವಾಟ್ಸಪ್ ಮೂಲಕ ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ಹ್ಯಾಕರ್ ಪಾರ್ಸಲ್ ಸಂಬಂಧಿತ ಸಂದೇಶ ಕಳುಹಿಸಿ ಮೊಬೈಲ್ ಅನ್ನು ಹ್ಯಾಕ್ ಮಾಡಿದ್ದಾನೆ. ಉಪೇಂದ್ರ ಅವರು ಈ ಬಗ್ಗೆ ಪೋಲೀಸ್ ದೂರು ದಾಖಲಿಸಿದ್ದು, ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿನಿಮೀಯ ರೀತಿ ಪ್ರಿಯಾಂಕಾ ಉಪೇಂದ್ರ ಮೊಬೈಲ್​ ಹ್ಯಾಕ್; ಹಣಕ್ಕೆ ಬೇಡಿಕೆ ಇಟ್ಟ ಹ್ಯಾಕರ್
ಪ್ರಿಯಾಂಕ್

Updated on: Sep 15, 2025 | 12:18 PM

ತಂತ್ರಜ್ಞಾನ ಮುಂದುವರಿದಂತೆ ಅದರಿಂದ ಎಷ್ಟು ಲಾಭ ಆಗುತ್ತಿದೆಯೋ ಅಷ್ಟೇ ನಷ್ಟವನ್ನು ಕೂಡ ಆಗುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಇದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಈಗ ಪ್ರಿಯಾಂಕಾ ಉಪೇಂದ್ರ (Priyanka Upendr) ಇದಕ್ಕೆ ಹೊಸ ಉದಾಹರಣೆ. ಅವರ ಮೊಬೈಲ್​ ಅನ್ನು ಹ್ಯಾಕ್ ಮಾಡಿದ ವ್ಯಕ್ತಿ, ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ. ಈ ವಿಚಾರ ಅವರ ಗಮನಕ್ಕೆ ಬಂದಿದ್ದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಲಾಗುತ್ತಿದೆ.

ಹ್ಯಾಕ್ ಆಗಿದ್ದು ಹೇಗೆ?

ಮೊಬೈಲ್ ಹ್ಯಾಕ್ ಆದ ಬಗ್ಗೆ ಉಪೇಂದ್ರ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಮೊಬೈಲ್​ಗಳನ್ನು ಹ್ಯಾಕ್ ಮಾಡುವಂತೆ ಇಲ್ಲಿಯೂ ಆಗಿದೆ. ‘ಪ್ರಿಯಾಂಕಾಗೆ ಬೆಳಿಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧದ್ದೇ ಮೆಸೇಜ್ ಇದು ಎಂದು ಅವಳು ಭಾವಿಸಿದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್​ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ’ ಎಂದು ಉಪೇಂದ್ರ ಹೇಳಿದ್ದಾರೆ.

‘ನನ್ನ ಮೊಬೈಲ್​ನಿಂದ ಅಥವಾ ಪ್ರಿಯಾಂಕಾ ಮೊಬೈಲ್​ನಿಂದ ಹಣ ಕೊಡಿ ಎಂದು ಮೆಸೇಜ್ ಬಂದರೆ ಇಗ್ನೋರ್ ಮಾಡಿ’ ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್​ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್​ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ.

ಇದನ್ನೂ ಓದಿ
ರೇಣುಕಾಸ್ವಾಮಿ ಪತ್ನಿ ಸಹನಾಗೆ ಸಿಗಲಿದೆ ಸರ್ಕಾರಿ ಕೆಲಸ; ಶಾಸಕನ ಭರವಸೆ
ಕಿರುತೆರೆ ನಟಿಯ ಪತಿ​ಗೆ ಕಾರು ಅಪಘಾತ; ಪ್ರಾಣಾಪಾಯದಿಂದ ಜಸ್ಟ್ ಮಿಸ್
ಶರಣ್-ತರುಣ್ ಸುಧೀರ್ ಗೆಳೆತನ ಎಂಥದ್ದು? ಯಾರೂ ಊಹಿಸಲೂ ಸಾಧ್ಯವಿಲ್ಲ
ರಿಯಾಲಿಟಿ ಶೋಗೆ ಬರಲ್ಲ, ಬರಲ್ಲ ಅಂತ ಬಂದೇ ಬಿಟ್ರು ನಟಿ ಸುಧಾರಾಣಿ

ಇದನ್ನೂ ಓದಿ: ಪ್ರಿಯಾಂಕಾ, ಉಪೇಂದ್ರ ಮೊಬೈಲ್ ಹ್ಯಾಕ್; ದುಡ್ಡು ಕೇಳಿದ್ರೆ ಕೊಡಬೇಡಿ ಎಂದ ರಿಯಲ್ ಸ್ಟಾರ್

ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್​ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us