Puneeth Rajkumar: ಪುನೀತ್​ ಕಣ್ಣುಗಳು ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಾಧ್ಯತೆ; ನಾರಾಯಣ ನೇತ್ರಾಲಯದಿಂದ ವಿನೂತನ ಪ್ರಯೋಗ

| Updated By: shivaprasad.hs

Updated on: Nov 13, 2021 | 12:11 PM

Puneeth Rajkumar eyes: ಪುನೀತ್ ಕಣ್ಣುಗಳಿಂದ ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಕುರಿತು ನಾರಾಯಣ ನೇತ್ರಾಲಯವು ವಿನೂತನ ಪ್ರಯೋಗ ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Puneeth Rajkumar: ಪುನೀತ್​ ಕಣ್ಣುಗಳು ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಾಧ್ಯತೆ; ನಾರಾಯಣ ನೇತ್ರಾಲಯದಿಂದ ವಿನೂತನ ಪ್ರಯೋಗ
ಪುನೀತ್ ರಾಜ್​ಕುಮಾರ್
Follow us on

ನಟ ಪುನೀತ್ ರಾಜ್​ಕುಮಾರ್ ಅವರ ನಿಧನದ ನಂತರ ನೇತ್ರದಾನ ಮಾಡಲಾಗಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಪುನೀತ್​ರಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ನಾರಾಯಣ ನೇತ್ರಾಲಯವು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪುನೀತ್ ರಾಜ್ ಕುಮಾರ್ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯಾ ಕಾರ್ನಿಯಾ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದು, ಯಶಸ್ವಿಯಾದರೆ ‌10 ದಿನದಲ್ಲಿ 10 ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ಬರಲಿದೆ. ಸ್ಟೆಮ್ ಸೆಲ್ ಗಳಿಂದ ಸ್ಟೇಮ್ ಸೆಲ್ ಥರಫಿ ನಡೆಸಿದರೆ ಮತ್ತೆ ದೃಷ್ಟಿ ಬರಲಿದ್ದು, ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ.

ಈ ಪ್ರಕ್ರಿಯೆ ಹೇಗೆ ಎನ್ನುವುದನ್ನ ಹೇಗೆ ಎಂದು ನೋಡುವುದಾದರೆ, ನಾರಾಯಣ ನೇತ್ರಲಯದಲ್ಲಿ ಪುನೀತ್ ಕಣ್ಣಿನ ಸ್ಟೆಮ್ ಸೆಲ್ ಗಳನ್ನ ಅಭಿವೃದ್ಧಿ ಮಾಡುತ್ತಿದ್ದು, ಸ್ಟೆಮ್ ಸೆಲ್​ಗಳು ಮಲ್ಟಿಪಲ್ ಆಗುತ್ತಿವೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಸ್ಟೆಮ್ ಸೆಲ್​ಗಳು ಅಭಿವೃದ್ಧಿ ಹೊಂದಿದ ಬಳಿಕ, ಸ್ಟೆಮ್ ಸೆಲ್‌ನಿಂದಾ ದೃಷ್ಟಿ ಕಳೆದುಕೊಂಡಿದ್ದ ಅಂಧರಿಗೆ ಕಸಿ ಮಾಡಬಹುದಾಗಿದೆ. ಸ್ಟೆಮ್ ಸೆಲ್ ಥೆರಫಿ ಎಂದರೆ, ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವು ಜನರಿಗೆ ಅಂಧತ್ವ ಸಮಸ್ಯೆ ಇರುತ್ತದೆ. ಇಂಥಹವರಿಗೆ ಸ್ಟೆಮ್ ಸೆಲ್ ಆಳವಡಿಕೆ ಮಾಡುವುದರಿಂದ ದೃಷ್ಟಿ ನೀಡಲು ಸಾಧ್ಯವಿದೆ. ಇದೀಗ ನಾರಾಯಣ ನೇತ್ರಾಲಯವು ಈ ಪ್ರಕ್ರಿಯೆಗೆ ಮುಂದಾಗಿದೆ.

ಪುನೀತ್​ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೇಳಿದ್ದೇನು?
ಪುನೀತ್ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರಾದ ಡಾ.ಭುಜಂಗ ಶೆಟ್ಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ನಾರಾಯಣ ನೇತ್ರಾಲಯದಿಂದ ಅಪರೂಪದ ಸಾಧನೆ ಮಾಡಲಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಕಾರ್ನಿಯಾದಿಂದ ಈಗಾಗಲೇ ನಾಲ್ಕು ಜನರಿಗೆ ದೃಷ್ಟಿ ನೀಡಲಾಗಿದೆ. ಈಗ ಅವರ ಸ್ಟೆಮ್ ಸೆಲ್​ಗಳಿಂದ 5 ರಿಂದ 10 ಜನರಿಗೆ ದೃಷ್ಟಿ ನೀಡಬಹುದು. ಪುನೀತ್ ಕಣ್ಣಿನ ಸ್ಟೆಮ್ ಸೆಲ್​ಗಳನ್ನ ಲ್ಯಾಬೊರೇಟರಿಗಳಲ್ಲಿ ಇಡಲಾಗಿದ್ದು, ವೃದ್ದಿ ಮಾಡಲಾಗುತ್ತಿದೆ. ಕಣ್ಣಿನ ಬಿಳಿ ಗುಡ್ಡೆಯಿಂದ ಈ ಸ್ಟೆಮ್ ಸೆಲ್​ಗಳನ್ನ ಸಂಗ್ರಹಮಾಡಲಾಗಿದೆ. ಯಾರಿಗೆ ಬಿಳಿ ಗುಡ್ಡೆ ಸಮಸ್ಯೆ ಇರುವವರಿಗೆ, ಆ್ಯಸಿಡ್ ಬಿದ್ದು ಹಾನಿಯಾಗಿರುವವರಿಗೆ, ಕಣ್ಣಿಗೆ ಹಾನಿಯಾಗಿರುವವರಿಗೆ ಅದನ್ನ ಅಳವಡಿಸಬಹುದು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ಮಾಡಲಾಗುತ್ತಿದೆ. ಪುನೀತ್ ಅವರ ಕಣ್ಣಿನಿಂದ ತೆಗೆದ ಸ್ಟೆಮ್ ಸೆಲ್​ಗಳು ಮಾತ್ರ ಉಳಿದಿವೆ. ಈ ಹಿಂದೆ ಸ್ಟೆಮ್ ಗಳು ಅಳವಡಿಕೆ ಮಾಡಿದ್ದೇವೆ. ಆದರೆ ಇಷ್ಟೊಂದು ಜನರಿಗೆ ಅಳವಡಿಕೆ ಮಾಡಿರಲಿಲ್ಲ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥರಾದ ಡಾ. ಭುಜಂಗ ಶೆಟ್ಟಿ ನುಡಿದಿದ್ದಾರೆ.

ಈ ಪ್ರಯತ್ನ ದೇಶದಲ್ಲೇ ಮೊದಲನೆಯದು; ಡಾ.ಯತೀಶ್ ಹೇಳಿಕೆ
ನಾರಾಯಣ ನೇತ್ರಾಲಯದ ನೇತ್ರ ತಜ್ಞ ಡಾ.ಯತೀಶ್ ಹೇಳಿಕೆ ನೀಡಿದ್ದು, ಖಚಿತವಾಗಿ ಇಷ್ಟೇ ಜನರಿಗೆ ಸ್ಟೆಮ್ ಲೇನ್ ಹಾಕಬೇಕು ಎನ್ನುವುದು ಕಷ್ಟ. ಅಪ್ಪುವಿನ ಕಪ್ಪುಗುಡ್ಡೆಯನ್ನ ೪ ಜನರಿಗೆ ಟ್ರಾನ್ಸ್ ಪ್ಲಾಂಟ್ ಮಾಡಿದ್ದೇವೆ. ಕೆಲವರಿಗೆ ಸ್ಟೆಮ್ ಸೆಲ್ ಸಮಸ್ಯೆಯಿರುತ್ತದೆ. ಸ್ಟೆಮ್ ಸೆಲ್ ಕೆಲಸವೇ ಕಪ್ಪುಗುಡ್ಡೆಯನ್ನು ರಕ್ಷಣೆ ಮಾಡುವಂಥದ್ದು. ಸ್ಟೆಮ್ ಸೆಲ್ಸ್ ಸಮಸ್ಯೆಯಿರುವ ಅಂಧರಿಗೆ ದೃಷ್ಟಿ ನೀಡಲು ಪ್ರಯೋಗದಲ್ಲಿ ಸ್ಟೆಮ್ ಸೆಲ್ ಗಳನ್ನ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ 5 ರಿಂದ 10 ಜನ ಅಂಧರಿಗೆ ದೃಷ್ಟಿ ಬರಿಸಬಹುದು. ಸ್ಪಮ್ ಸೆಲ್ ಬೆಳವಣಿಗೆಯಾಗಲು ಎರಡು ವಾರ ತಗುಲಿದೆ. ನಂತರ ಸ್ಟಮ್ ಸೆಲ್ ಅಳವಡಿಕೆ ಮಾಡಲಾಗುತ್ತದೆ ಎಂದು ನುಡಿದಿದ್ದಾರೆ.

‘‘ಬಿಳಿ ಗುಡ್ಡೆ ಮಧ್ಯೆ ಸ್ಟೆಮ್ ಸೆಲ್ಸ್ ಇರುತ್ತದೆ. ಈ ಸ್ಟೆಮ್ ಸೆಲ್ಸ್ ಕಣ್ಣನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತದೆ. ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆದರೆ ಕಪ್ಪು ಗುಡ್ಡೆ ಗೆ ಸಮಸ್ಯೆ ಆಗುತ್ತದೆ. ಅಂದರೆ ದೃಷ್ಟಿಯಲ್ಲಿ ಏರುಪೇರಾಗುತ್ತದೆ. ಹೀಗೆ ಸ್ಟೆಮ್ ಸೆಲ್ಸ್ ಡ್ಯಾಮೇಜ್ ಆಗಿರುವ ಜನರಿಗೆ ಈಗ ನಾವು ಇದನ್ನು ಅಳವಡಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಅಪ್ಪು ಅವರು ಬಹುಮುಖ ಪ್ರತಿಭೆ. ಹೀಗಾಗಿ ಅವರ ಕಣ್ಣುಗಳನ್ನು ಹೆಚ್ಚು ಜನರಿಗೆ ಅಳವಡಿಸಲು ಮುಂದಾಗಿದ್ದೇವೆ. ಅಪ್ಪು ಅವರ ಸ್ಟೆಮ್ ಸೆಲ್ಸ್ ಈಗಾಗಲೇ ಲ್ಯಾಬ್ ನಲ್ಲಿಟ್ಟು ವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಸ್ಟೆನ್ ಸೆಲ್ಸ್ ಅಳವಡಿಕೆ ಆಗಲಿದೆ. ಇದಕ್ಕೆ ಬೇಕಾಗಿರುವ ಜನರನ್ನೂ ಡಾ. ರಾಜ್ ಕುಮಾರ್ ಐ ಬ್ಯಾಂಕ್ ಮೂಲಕ ಪತ್ತೆ ಹಚ್ಚಲಾಗಿದೆ. ಈ ಪ್ರಯತ್ನ ಇಡೀ ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಡಾ.ಯತೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಪುನೀತ್ ರಾಜ್‍ಕುಮಾರ್ ದಾರಿ ಹಿಡಿದ ಅಭಿಮಾನಿಗಳು, ಗಜೇಂದ್ರಗಡ ತಾಂಡದ 40 ಮಂದಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ

ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ; ಹಾಗಾದರೆ ವೀಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

Published On - 11:40 am, Sat, 13 November 21