ಪುನೀತ್ ರಾಜ್‍ಕುಮಾರ್ ದಾರಿ ಹಿಡಿದ ಅಭಿಮಾನಿಗಳು, ಗಜೇಂದ್ರಗಡ ತಾಂಡದ 40 ಮಂದಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ

ಅಭಿಮಾನಿ ದೇವರುಗಳು ಸಹ ಅಪ್ಪು ಮಾರ್ಗವನ್ನು ಅನುಸರಿಸಿದ್ದಾರೆ. ಗದಗದ ಗಜೇಂದ್ರಗಡ ತಾಂಡದ 40ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಲು ನಿರ್ಧರಿಸಿರುದಾಗಿ ಅಭಿಮಾನಿ ಅಪ್ಪು ಪರ್ವತಗೋಳ ಹೇಳಿದ್ದಾರೆ.

ಪುನೀತ್ ರಾಜ್‍ಕುಮಾರ್ ದಾರಿ ಹಿಡಿದ ಅಭಿಮಾನಿಗಳು, ಗಜೇಂದ್ರಗಡ ತಾಂಡದ 40 ಮಂದಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ
ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:Nov 09, 2021 | 9:38 AM

ಗದಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಇವತ್ತಿಗೆ 12 ದಿನಗಳು ಕಳೆದಿವೆ. ಇವತ್ತಿಗೂ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕ್ತಿದ್ದಾರೆ. ಅಪ್ಪು ಸಾವು ಸಹಿಸಿಕೊಳ್ಳದ ಅಭಿಮಾನಿಗಳು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದ್ರೆ ಗದಗನಲ್ಲಿ ಕಟ್ಟಾ ಅಪ್ಪು ಅಭಿಮಾನಿಗಳು ಅಪ್ಪುನ ಸಾಮಾಜಿಕ ಕಾರ್ಯಗಳಿಂದ ಪ್ರೇರಿತರಾಗಿದ್ದಾರೆ. ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದು ತಮ್ಮ ನೇತ್ರದಾನ ಮಾಡಿದ್ದರು. ಅದೇ ಮಾದರಿಯನ್ನಿಟ್ಟುಕೊಂಡು ಸುಮಾರು 40 ಕ್ಕೂ ಹೆಚ್ಚು ಜನ ಅಭಿಮಾನಿಗಳು ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸುಮಾರು 40 ಕ್ಕೂ ಹೆಚ್ಚು ಜನ ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ. ನಟ ಪುನೀತ್ ರಾಜ್ಕುಮಾರ್ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರು. ನೇತ್ರದಾನ ಮಾಡಿದ ಅಪ್ಪು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಈಗ ಅವರ ಅಭಿಮಾನಿ ದೇವರುಗಳು ಸಹ ಅಪ್ಪು ಮಾರ್ಗವನ್ನು ಅನುಸರಿಸಿದ್ದಾರೆ. ಗದಗದ ಗಜೇಂದ್ರಗಡ ತಾಂಡದ 40ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಲು ನಿರ್ಧರಿಸಿರುದಾಗಿ ಅಭಿಮಾನಿ ಅಪ್ಪು ಪರ್ವತಗೋಳ ಹೇಳಿದ್ದಾರೆ.

ನಟ ಸಾರ್ವಭೌಮ ಡಾ.ರಾಜ್ಕುಮಾರ್ ವಿಧಿವಶರಾದಾಗ ನೇತ್ರ ದಾನ ಮಾಡಿದಂತೆ, ನಟ ಪುನೀತ್ ರಾಜ್‍ಕುಮಾರ್ ಕೂಡ ನೇತ್ರ ದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಇದರಿಂದ ಪ್ರೇರಿತರಾದ ಜಿಲ್ಲೆಯ ಗಜೇಂದ್ರಗಡ ಬಂಜಾರ ಸಮುದಾಯದ 40ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗಿದ್ದಾರೆ. ಗಜೇಂದ್ರಗಡದಲ್ಲಿ ನಡೆದ 11 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ಕೇವಲ ನೇತ್ರದಾನ ಮಾಡುವುದು ಮಾತ್ರವಲ್ಲದೆ, ಅಪ್ಪುಗೆ ವಿಶೇಷ ಪೂಜೆ, ಅನ್ನ ಸಂತರ್ಪಣೆ ಕೂಡ ಮಾಡಿದ್ದಾರೆ. ಪುನೀತ್ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಗಜೇಂದ್ರಗಡ ತಾಂಡಾದ ಅಪ್ಪು ಅಭಿಮಾನಿಗಳು 10 ದಿನ ಶೋಕದಲ್ಲಿ ಮುಳುಗಿದ್ದರು. ನಟ ಪುನೀತ್ ನೇತ್ರದಾನ ಮಾಡಿದ್ದರಿಂದ ಅವರ ಅಭಿಮಾನಿಗಳು ಕೂಡ 11 ದಿನದ ಪುಣ್ಯಸ್ಮರಣೆ ಹಿನ್ನಲೆ, ಈ ಆದರ್ಶವನ್ನು ಮೈಗೂಡಿಸಿಕೊಂಡಿದ್ದು, 40ಕ್ಕೂ ಅಧಿಕ ಮಂದಿ ಗಜೇಂದ್ರಗಡ ಸರಕಾರಿ ಆಸ್ಪತ್ರೆಗೆ ನೇತ್ರದಾನ ಮಾಡುವ ಮೂಲಕ ಅಭಿಮಾನಿಗಳ ವಾಗ್ದಾನದಿಂದ ಪುನೀತ್ಗೆ ನಮನ ಸಲ್ಲಿಸಿರುವುದಾಗಿ ಅಪ್ಪು ಅಭಿಮಾನಿ ಶರತ್ ರಾಠೋಡ್ ಹೇಳಿದ್ದಾರೆ.

ತಾಂಡಾದ ಯುವಕರು, ಮಹಿಳೆಯರು, ನೇತ್ರದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ. ಅಪ್ಪು ಅಭಿಮಾನಿಗಳಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಗಜೇಂದ್ರಗಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಅವರ ಅಭಿಮಾನಿಗಳು ಈ ಕಾರ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಗಜೇಂದ್ರಗಡ ಪಟ್ಟಣದ ಅಪ್ಪು ಅಭಿಮಾನಿಗಳ ಕಾರ್ಯ ನಿಜಕ್ಕೂ ಮಾದರಿ ವಿಚಾರ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: Shankar Nag Birthday: ನಮ್ಮ ಮೆಟ್ರೋ ಶಂಕರ್​ ನಾಗ್​ ಮೆಟ್ರೋ ಆಗಲಿ; ಕೇಳಿಬಂತು ಹೊಸ ಕೂಗು

Published On - 9:35 am, Tue, 9 November 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ