ಪುನೀತ್ ರಾಜ್​ಕುಮಾರ್ ಬರ್ತ್​ಡೇಗೆ ಬಿಗ್ ಸರ್​ಪ್ರೈಸ್; ಈ ಸೂಪರ್ ಹಿಟ್ ಚಿತ್ರ ರೀ-ರಿಲೀಸ್

|

Updated on: Feb 26, 2025 | 11:35 AM

ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದಂದು, ಅವರ ಸೂಪರ್ ಹಿಟ್ ಚಿತ್ರ ಮರು-ಬಿಡುಗಡೆಯಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಒಂದು ದೊಡ್ಡ ಉಡುಗೊರೆ. 2002ರಲ್ಲಿ ಬಿಡುಗಡೆಯಾದ ಈ ಚಿತ್ರವು ಅಪಾರ ಜನಪ್ರಿಯತೆ ಗಳಿಸಿತ್ತು. ಈ ಮರು-ಬಿಡುಗಡೆಯು ಅವರ ನೆನಪನ್ನು ಜೀವಂತವಾಗಿರಿಸಲು ಒಂದು ಪ್ರಯತ್ನವಾಗಿದೆ.

ಪುನೀತ್ ರಾಜ್​ಕುಮಾರ್ ಬರ್ತ್​ಡೇಗೆ ಬಿಗ್ ಸರ್​ಪ್ರೈಸ್; ಈ ಸೂಪರ್ ಹಿಟ್ ಚಿತ್ರ ರೀ-ರಿಲೀಸ್
ಪುನೀತ್ ರಾಜ್​ಕುಮಾರ್
Follow us on

ಪುನೀತ್ ರಾಜ್​ಕುಮಾರ್ ಅವರು ಬದುಕಿದ್ದರೆ ಮಾರ್ಚ್ 17ರಂದು 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ನಮ್ಮೊಂದಿಗೆ ಇಲ್ಲ. ಹಾಗಂತ ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಪುನೀತ್ ಅವರ ನೆನಪನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಲೇ ಇದ್ದಾರೆ. ಈಗ ಅವರ 50ನೇ ವರ್ಷದ ಜನ್ಮದಿನದ ಪ್ರಯುಕ್ತ ಪುನೀತ್​​ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ಸೂಪರ್ ಹಿಟ್ ಚಿತ್ರ ರೀ-ರಿಲೀಸ್ ಆಗುತ್ತಿದೆ.

ಮಾರ್ಚ್ 17ರಂದು ಪುನೀತ್ ಜನ್ಮದಿನ. ಹೀಗಾಗಿ, ಮಾರ್ಚ್ 14ರಂದು (ಶುಕ್ರವಾರ) ಪುನೀತ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ರೀ-ರಿಲೀಸ್ ಆಗುತ್ತಿದೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳುತ್ತಿದ್ದಂತೆ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ‘ಬಿಗ್ಗೆಸ್ಟ್ ರೀ-ರಿಲೀಸ್ ಲೋಡಿಂಗ್’ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.


ತೆಲುಗಿನ ಪುರಿ ಜಗನ್ನಾಥ್ ಅವರು ‘ಅಪ್ಪು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪುನೀತ್ ಹೀರೋ ಆಗಿ ನಟಿಸಿದ್ದ ಮೊದಲ ಚಿತ್ರ ಇದು. 2002ರಲ್ಲಿ ‘ಅಪ್ಪು’ ಚಿತ್ರ ಸಿನಿಮಾ ರಿಲೀಸ್ ಆಯಿತು. ಆಗಿನ ಕಾಲದಲ್ಲಿ ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ರಕ್ಷಿತಾ ಈ ಚಿತ್ರಕ್ಕೆ ನಾಯಕಿ ಆಗಿದ್ದರು. ಸಿನಿಮಾದ ಹಾಡುಗಳು ಕೂಡ ಯಶಸ್ಸು ಕಂಡವು. ಗುರು ಕಿರಣ್ ಮ್ಯೂಸಿಕ್ ಗಮನ ಸೆಳೆಯಿತು. ಪುನೀತ್ ರಾಜ್​ಕುಮಾರ್​ಗೆ ‘ಅಪ್ಪು’ ಅನ್ನೋ ನಿಕ್​ನೇಮ್ ಈ ಚಿತ್ರದಿಂದಲೇ ಬಂದಿದ್ದು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​ಗೆ ಒಮ್ಮೆ ಬಿದ್ದಿತ್ತು ಲಾಠಿ ಏಟು: ಮಾಡಿದ್ದ ತಪ್ಪೇನು?

ಟೈಟಲ್ ಕೊಟ್ಟಿದ್ದು ಯಾರು?

ಈ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಪಾರ್ವತಮ್ಮ ರಾಜ್​​ಕುಮಾರ್. ಪುನೀತ್ ರಾಜ್​ಕುಮಾರ್ ಅವರನ್ನು ಪ್ರೀತಿಯಿಂದ ಮನೆಯಲ್ಲಿ ಅಪ್ಪು ಎಂದು ಕರೆಯಲಾಗುತ್ತಿತ್ತು. ಅದನ್ನೇ ಸಿನಿಮಾ ಟೈಟಲ್ ರೂಪದಲ್ಲಿ ಇಡಲಾಗಿತ್ತು. ಈ ಚಿತ್ರ ಈಗ ರೀ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ನಿಧನ

ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಸತ್ಯವನ್ನು ಫ್ಯಾನ್ಸ್​​ಗೆ ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.