ದಕ್ಷಿಣ ಭಾರತದ ನಟ-ನಟಿಯರು ಬೇರೆ ಭಾಷೆ ಸಿನಿಮಾಗಳಿಗೆ ಹೋಗಿ ನಟಿಸೋದು ಇದೇ ಮೊದಲೇನೆಲ್ಲ. ಕನ್ನಡದ ಅನೇಕ ನಟ-ನಟಿಯರು ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ತಮ್ಮ ಛಾಪು ಮೂಡಿಸಿ ಬಂದಿದ್ದಾರೆ. ಕನ್ನಡದಲ್ಲಿ ಫ್ಯಾಮಿಲಿ ಆಡಿಯನ್ಸ್ನ ಮೆಚ್ಚಿನ ನಾಯಕ ಪುನೀತ್ ರಾಜ್ಕುಮಾರ್ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋದು ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪುನೀತ್ ರಾಜ್ಕುಮಾರ್ ಅವರೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಮೆಜಾನ್ ಪ್ರೈಮ್ ನಡೆಸಿದ ವರ್ಚುವಲ್ ಮೀಟಿಂಗ್ನಲ್ಲಿ ಯುವರತ್ನ ಟೀಮ್ ಮಾತನಾಡಿದೆ. ಈ ವೇಳೆ ಬಾಲಿವುಡ್ ಹಾಗು ಪ್ಯಾನ್ ಇಂಡಿಯಾದಲ್ಲಿ ನಟಿಸುವ ಬಗ್ಗೆ ಪುನೀತ್ ರಾಜ್ಕುಮಾರ್ ಕೂಡ ಮಾತನಾಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುನೀತ್, ಒಂದೊಮ್ಮೆ ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಅಥವಾ ಬಾಲಿವುಡ್ನಿಂದ ಆಫರ್ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದಿದ್ದಾರೆ.
ಬೇರೇ ಭಾಷೆಗಳಿಂದ ಬರುವ ಪಾತ್ರ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿರುವ ಪುನೀತ್, ಲೀಡ್ ರೋಲ್ನಲ್ಲೇ ನಟಿಸಬೇಕು ಎಂದೇನೂ ಇಲ್ಲ. ಪಾತ್ರ ತೂಕದ್ದಾಗಿದ್ದರೆ ಸಾಕು ಎಂದು ಹೇಳಿದ್ದಾರೆ. ಈ ಮೂಲಕ ಅವರು ಪಾತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಚಿತ್ರಮಂದಿರದಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡುತ್ತಿದೆ. ಇದರಿಂದ ‘ಯುವರತ್ನ’ ಸಿನಿಮಾ ರಿಲೀಸ್ ಆದ ಎಂಟೇ ದಿನಕ್ಕೆ ಒಟಿಟಿಗೆ ಲಗ್ಗೆ ಇಡುತ್ತಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಪುನೀತ್ ನಟನೆಯ ಸಿನಿಮಾ ರಿಲೀಸ್ ಆದ ಎಂಟೇ ದಿನಕ್ಕೆ ಒಟಿಟಿ ಪ್ಲಾಟ್ಫಾರ್ಮ್ಗೆ ಬರುತ್ತಿರುವುದೇಕೆ? ಹೀಗೆ ಮಾಡುತ್ತಿರುವುದು ಸರಿಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
in the midst of troubling times for his college, a man takes on many a forces to fight back. but who is he really? #YuvarathnaaOnPrime, April 9@PuneethRajkumar @VKiragandur @hombalefilms @SanthoshAnand15 pic.twitter.com/eYO8bwm3i1
— amazon prime video IN (@PrimeVideoIN) April 8, 2021
Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್ ನಿರ್ಧಾರಕ್ಕೆ ಫ್ಯಾನ್ಸ್ ಆಕ್ರೋಶ