ಪುನೀತ್ ರಾಜ್ಕುಮಾರ್ ಅವರು ಸ್ಯಾಂಡಲ್ವುಡ್ಗೆ ನೀಡಿದ ಕೊಡುಗೆ ಒಂದೆರಡಲ್ಲ. ಸ್ಟಾರ್ ನಟನ ಮಗನಾಗಿ ಚಿತ್ರರಂಗಕ್ಕೆ ಬಂದರೂ ಸ್ವಂತ ಐಡೆಂಟಿಟಿ ಹೊಂದಿದ್ದರು. ಸಾಮಾಜಿಕ ಕೆಲಸಗಳ ಮೂಲಕವೂ ಅವರು ಹೆಚ್ಚು ಗುರುತಿಸಿಕೊಂಡಿದ್ದರು. ತಾಯಿ, ಖ್ಯಾತ ನಿರ್ಮಾಪಕಿ ಪಾರ್ವತಮ್ಮ ಬಗ್ಗೆ ಅವರು ಅಪಾರ ಪ್ರೀತಿ ಹೊಂದಿದ್ದರು. ಅಷ್ಟೇ ಅಲ್ಲ ತಾಯಿ ಬಗ್ಗೆ ಒಂದು ಮಹಾನ್ ಕನಸನ್ನು ಕೂಡ ಕಂಡಿದ್ದರು. ಆದರೆ, ಪುನೀತ್ ಜತೆ ಅದೂ ಈಗ ಮಣ್ಣಾಗಿದೆ.
ಪಾರ್ವತಮ್ಮ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಸಿನಿಮಾ ನಿರ್ಮಾಣದಲ್ಲಿ ಅವರು ಎಲ್ಲರಿಗೂ ಮಾದರಿ. ಅವರ ದಿಟ್ಟತನ ಅನೇಕರಿಗೆ ಇಷ್ಟವಾಗಿತ್ತು. ಅವರ ಬಗ್ಗೆ ಪುಸ್ತಕ ಬರೆಯಬೇಕು ಎಂಬುದು ಪುನೀತ್ ಕನಸಾಗಿತ್ತು. ಆದರೆ, ಅವರು ನಟನೆ, ನಿರ್ಮಾಣ ಕೆಲಸಗಳಲ್ಲಿ ಬ್ಯುಸಿಯಾದರು. ಹೀಗಾಗಿ, ಇದಕ್ಕೆ ಅವಕಾಶ ಸಿಗಲೇ ಇಲ್ಲ. ಇದರಿಂದ ಇದು ಕನಸಾಗಿಯೇ ಉಳಿದಿದೆ.
ತಾಯಿ ಪಾರ್ವತಮ್ಮ ಸಾಧನೆಗಳ ಕುರಿತು ಪುಸ್ತಕವೊಂದನ್ನು ಬರೆಯುವ ಯೋಜನೆಯನ್ನು ಪುನೀತ್ ಹಾಕಿಕೊಂಡಿದ್ದರು. ಈ ಬಗ್ಗೆ ಖುದ್ದು ಪುನೀತ್ ಮಾಹಿತಿ ನೀಡಿದ್ದರು. ಸುದ್ದಿಗೋಷ್ಠಿ ನಂತರ ಪತ್ರಕರ್ತರ ಜತೆ ಅವರು ಮಾತನಾಡುತ್ತಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ಅಮ್ಮನ ಸಾಧನೆ ಅಪಾರ. ಅವರು ದೊಡ್ಡ ನಿರ್ಮಾಪಕಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದೇಕೆ? ಈ ಜವಾಬ್ದಾರಿಯನ್ನು ಏಕೆ ತೆಗೆದುಕೊಳ್ಳಬೇಕಾಯಿತು? ಎಂಬಿತ್ಯಾದಿ ವಿಚಾರಗಳು ಜನರಿಗೆ ತಿಳಿಯಬೇಕಿದೆ. ಈ ಬಗ್ಗೆ ಅವರು ಹೇಳಿಕೊಂಡ ಕೆಲವಷ್ಟು ಮಾಹಿತಿಗಳು ಇವೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಅವರ ಬಯೋಗ್ರಫಿ ಬರೆಯಬೇಕೆಂಬ ಆಸೆಯಿದೆ. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ’ ಎಂದು ಹೇಳಿದ್ದರು. ಆದರೆ, ಅದು ಈಗ ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ: ಪತ್ನಿ ಅಶ್ವಿನಿಗೆ ಪ್ರೀತಿಯಿಂದ 4 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದ ಪುನೀತ್ ರಾಜ್ಕುಮಾರ್
ಡಿಫರೆಂಟ್ ಪಾತ್ರದಲ್ಲಿ ಪುನೀತ್; ‘ಮಿಷನ್ ಕೊಲಂಬಸ್’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ