ನಟಿ ಮೇಘನಾ ರಾಜ್ ಅವರ ಖುಷಿಗೆ ಪಾರವೇ ಇಲ್ಲ. ಈ ಅಪರಿಮಿತ ಖುಷಿಗೆ ಕಾರಣ ಅವರ ಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ. ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮಗ ರಾಯನ್ಗೆ ಇಂದು (ಅ.22) ಮೊದಲ ವರ್ಷದ ಜನ್ಮದಿನ. ಈ ಸಂಭ್ರಮದಲ್ಲಿ ಅವರ ಇಡೀ ಕುಟುಂಬ ಮುಳುಗೇಳುತ್ತಿದೆ. ಒಂದು ವರ್ಷ ತುಂಬಿರುವ ಕಂದನಿಗೆ ಎಲ್ಲರಿಂದಲೂ ಶುಭಾಶಯಗಳು, ಉಡುಗೊರೆಗಳು ಹರಿದುಬರುತ್ತಿವೆ. ಚಿರಂಜೀವಿ ಸರ್ಜಾ ಅಭಿಮಾನಿಗಳು ರಾಯನ್ ಫೋಟೋವನ್ನು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ಅ.22, ಈ ದಿನ ಮೇಘನಾ ರಾಜ್ ಪಾಲಿಗೆ ಅತ್ಯಮೂಲ್ಯ. ಅವರ ಬಾಳಿನಲ್ಲಿ ಮತ್ತೆ ನಗು ಅರಳಿದ ದಿನವದು. ರಾಯನ್ ರಾಜ್ ಸರ್ಜಾ ಆಗಮನದಿಂದ ಅವರ ಬದುಕು ಹೊಸ ಅರ್ಥ ಪಡೆದುಕೊಂಡಿತು. ಪತಿಯನ್ನು ಕಳೆದುಕೊಂಡಿದ್ದ ಮೇಘನಾ ಬದುಕಿನಲ್ಲಿ ಮತ್ತೆ ಭರವಸೆ ಮೂಡಿಸಿದ್ದೇ ರಾಯನ್ ರಾಜ್ ಸರ್ಜಾ. ಇಂದು ಆತನ ಜನ್ಮದಿನವನ್ನು ಅವರು ಸಖತ್ ಖುಷಿಯಿಂದ ಆಚರಿಸುತ್ತಿದ್ದಾರೆ. ಮಗನ ಜೊತೆಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡು ಅವರು ವಿಶ್ ಮಾಡಿದ್ದಾರೆ.
‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು.. ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂಬ ಕ್ಯಾಪ್ಷನ್ನೊಂದಿಗೆ ಮಗನ ಹುಟ್ಟುಹಬ್ಬದ ಸಂದೇಶವನ್ನು ಚಿರು ಜೊತೆ ಮೇಘನಾ ಹಂಚಿಕೊಂಡಿದ್ದಾರೆ. ಪನ್ನಗ ಭರಣ, ಕೃಷಿ ತಾಪಂಡ, ಅದ್ವಿತಿ ಶೆಟ್ಟಿ, ಸೋನು ಗೌಡ, ಆಶಿತಾ ಚಂದ್ರಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್ಗೆ ಕಮೆಂಟ್ ಮಾಡುವ ಮೂಲಕ ಚಿರು ಪುತ್ರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳು ಎಂದರೆ ಮೇಘನಾ ರಾಜ್ ಫ್ಯಾಮಿಲಿಗೆ ತುಂಬ ವಿಶೇಷ. ಯಾಕೆಂದರೆ, ಅ.17ರಂದು ಚಿರಂಜೀವಿ ಸರ್ಜಾ ಬರ್ತ್ಡೇ. ಆ ಪ್ರಯುಕ್ತ ಅವರು ವಿಶೇಷ ಫೋಟೋಶೂಟ್ ಮೂಲಕ ಚಿರು ನೆನಪು ಮಾಡಿಕೊಂಡಿದ್ದರು. ಇನ್ನು, ಅದೇ ದಿನ ಅವರ ಹೊಸ ಸಿನಿಮಾ ಲಾಂಚ್ ಆಗಿದ್ದು ಕೂಡ ವಿಶೇಷವಾಗಿತ್ತು. ದೊಡ್ಡ ಗ್ಯಾಪ್ ಬಳಿಕ ಮೇಘನಾ ರಾಜ್ ಮತ್ತೆ ನಟನೆಗೆ ಮರಳಿದ್ದಾರೆ. ಚಿರು ಸ್ನೇಹಿತ ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಮೇಘನಾ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ:
Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ವಿಶೇಷ ಫೋಟೋಶೂಟ್; ಇಲ್ಲಿದೆ ರಾಣಿ ಗೆಟಪ್ನ ಫೋಟೋ ಆಲ್ಬಂ
Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್ ರಾಜ್ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ
Published On - 9:39 am, Fri, 22 October 21