ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ, ‘ಬುಲ್-ಬುಲ್’ ಚೆಲುವೆಗೆ ನಿಲ್ಲದ ಬೇಡಿಕೆ

Rachita Ram movies: ಸಿನಿಮಾ ರಂಗದಲ್ಲಿ ಸ್ಟಾರ್ ನಟರಿಗಿರುವ ಅರ್ಧದಷ್ಟು ಸಹ ನಟಿಯರಿಗೆ ಶೆಲ್ಫ್ ಇರುವುದಿಲ್ಲ. ನಾಯಕಿಯರು ಹೀಗೆ ಬಂದು ಹಾಗೆ ಮರೆ ಆಗಿ ಬಿಡುತ್ತಾರೆ. ಒಂದು ದಶಕದ ಕಾಲ ಉಳಿವುದು ಮಹಾನ್ ಸಾಧನೆ. ಅದರಲ್ಲೂ ಹೊಸ ಜಮಾನಾನಲ್ಲಿ ಅಂತೂ ಬಹುತೇಕ ಅಸಾಧ್ಯ. ಪ್ರತಿಭೆ, ವ್ಯಕ್ತಿತ್ವ, ಸೌಂದರ್ಯ ಎಲ್ಲವೂ ಜೊತೆಗಿದ್ದರಷ್ಟೆ ನಟಿಯರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಅಂಥಹಾ ಕೆಲವೇ ಕೆಲವು ನಟಿಯರಲ್ಲಿ ಕನ್ನಡದ ನಟಿ ರಚಿತಾ ರಾಮ್ ಸಹ ಒಬ್ಬರು.

ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ, ‘ಬುಲ್-ಬುಲ್’ ಚೆಲುವೆಗೆ ನಿಲ್ಲದ ಬೇಡಿಕೆ
Rachita Ram

Updated on: May 10, 2026 | 11:02 PM

ಸಿನಿಮಾ (Cinema) ರಂಗದಲ್ಲಿ ಸ್ಟಾರ್ ನಟರಿಗಿರುವ ಅರ್ಧದಷ್ಟು ಸಹ ನಟಿಯರಿಗೆ ಶೆಲ್ಫ್ ಇರುವುದಿಲ್ಲ. ನಾಯಕಿಯರು ಹೀಗೆ ಬಂದು ಹಾಗೆ ಮರೆ ಆಗಿ ಬಿಡುತ್ತಾರೆ. ಒಂದು ದಶಕದ ಕಾಲ ಉಳಿವುದು ಮಹಾನ್ ಸಾಧನೆ. ಅದರಲ್ಲೂ ಹೊಸ ಜಮಾನಾನಲ್ಲಿ ಅಂತೂ ಬಹುತೇಕ ಅಸಾಧ್ಯ. ಪ್ರತಿಭೆ, ವ್ಯಕ್ತಿತ್ವ, ಸೌಂದರ್ಯ ಎಲ್ಲವೂ ಜೊತೆಗಿದ್ದರಷ್ಟೆ ನಟಿಯರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ. ಅಂಥಹಾ ಕೆಲವೇ ಕೆಲವು ನಟಿಯರಲ್ಲಿ ಕನ್ನಡದ ನಟಿ ರಚಿತಾ ರಾಮ್ ಸಹ ಒಬ್ಬರು.

ಡಿಂಪಲ್ ಚೆಲುವೆ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿ 14 ವರ್ಷಗಳಾಗಿವೆ. ರಚಿತಾ ರಾಮ್ ಮೊದಲು ನಟಿಸಿದ್ದ ಸಿನಿಮಾ ‘ಬುಲ್ ಬುಲ್’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 14 ವರ್ಷ. 2013 ರ ಮೇ 10 ರಂದು ಬಿಡುಗಡೆ ಆಗಿದ್ದ ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಕ್ಕೆ ಮುನ್ನ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್, ‘ಬುಲ್ ಬುಲ್’ ಸಿನಿಮಾಕ್ಕೆ ಆಡಿಷನ್ ನೀಡಿ, ಸಾವಿರಾರು ಯುವತಿಯರ ನಡುವೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಮೊದಲ ಸಿನಿಮಾನಲ್ಲೇ ಸ್ಟಾರ್ ನಟ ದರ್ಶನ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ:ಸಿನಿಮಾ ಶೂಟ್​​ನಲ್ಲಿ ರಚಿತಾ ರಾಮ್ ಸಖತ್ ಬ್ಯುಸಿ

‘ಬುಲ್ ಬುಲ್’ ಬಳಿಕ ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸಿದ್ದು, ದರ್ಶನ್, ಸುದೀಪ್, ಪುನೀತ್ ರಾಜ್​​ಕುಮಾರ್, ಶಿವರಾಜ್ ಕುಮಾರ್ ಇನ್ನೂ ಕೆಲವು ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದರು. ಸ್ಟಾರ್ ನಟರು ಮಾತ್ರವೇ ಅಲ್ಲದೆ ಹಲವು ಸಮಕಾಲೀನ ನಟರು, ಕೆಲ ಕಿರಿಯ ನಟರ ಜೊತೆಗೂ ನಟಿಸಿದ ರಚಿತಾ ರಾಮ್, ಹಳ್ಳಿ ಹುಡುಗಿ, ಮಾಡರ್ನ್ ಹುಡುಗಿ, ಗೌರಮ್ಮ, ಬಜಾರಿ ಎಲ್ಲ ರೀತಿಯ ಪಾತ್ರಗಳನ್ನೂ ಲೀಲಾ ಜಾಲವಾಗಿ ನಟಿಸಿದ್ದಾರೆ.

ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ರಚಿತಾ ರಾಮ್ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಪವರ್​​ಫುಲ್ ಪಾತ್ರದಲ್ಲಿ ರಚಿತಾ ರಾಮ್ ನಟಿಸಿದ್ದರು. ಈಗಲೂ ಸಹ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ರಚಿತಾ ರಾಮ್ ಹೊಸ ಸಿನಿಮಾದ ಚರ್ಚೆಯಲ್ಲಿದ್ದಾರಂತೆ. ಅದರ ಜೊತೆಗೆ ಧ್ರುವ ಜೊತೆ ‘ಕ್ರಿಮಿನಲ್’, ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ನಟಿಸುತ್ತಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆಯಂತೆ.

ರಚಿತಾ ರಾಮ್ ಅವರು ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದನ್ನು ಅವರ ಅಭಿಮಾನಿಗಳು ಸಂಭ್ರಮಿಸಿದ್ದು, ಅನಾಥಾಶ್ರಮಗಳಿಗೆ ತೆರಳಿ ಸೇವೆ ಮಾಡಿದ್ದಾರೆ. ರಚಿತಾ ರಾಮ್ ಫೋಟೊಗಳನ್ನು ಹಿಡಿದುಕೊಂಡು ಕೇಕ್ ಕತ್ತರಿಸಿ, ನಟಿಯ ಪರವಾಗಿ ಘೋಷಣೆಗಳನ್ನು ಸಹ ಕೂಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us