‘ಟಾಕ್ಸಿಕ್’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಆಸೆ ಈಡೇರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಹಲವು ವರ್ಷಗಳ ಹಿಂದೆ ನಟಿ ರಾಧಿಕಾ ಪಂಡಿತ್ ನೀಡಿದ್ದ ಸಂದರ್ಶನ ವೈರಲ್ ಆಗಿದ್ದು, ಯಶ್ ದ್ವಿಪಾತ್ರದಲ್ಲಿ ನಟಿಸಬೇಕೆಂಬ ಅವರ ಆಸೆ ಈಗ ಈ ಸಿನಿಮಾ ಮೂಲಕ ಈಡೇರಿದೆ. 'ರಾಯ' ಮತ್ತು 'ಟಿಕೆಟ್' ಪಾತ್ರಗಳಲ್ಲಿ ಯಶ್ ಮಿಂಚಲಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಆಸೆ ಈಡೇರಿಸಿದ ಯಶ್
ರಾಧಿಕಾ-ಯಶ್

Updated on: Aug 22, 2026 | 7:40 AM

ಮುಖ್ಯಾಂಶಗಳು

  • ರಾಧಿಕಾ ಪಂಡಿತ್ ಆಸೆ ನಿಜವಾಯಿತು
  • 'ರಾಯ' ಮತ್ತು 'ಟಿಕೆಟ್' ಅವತಾರದಲ್ಲಿ ರಾಕಿ
  • ಯಶ್ ಮಾಡಿರೋದು ಎರಡೋ ಅಥವಾ ಮೂರೋ ಪಾತ್ರ?

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​ಗೆ ಬಾಕಿ ಇರುವುದು ಇನ್ನು ಕೆಲವೇ ದಿನಗಳು ಮಾತ್ರ. ಈ ಚಿತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿಯೇ ನಡೆದಿದೆ. ಈ ನಡುವೆ, ಹಲವು ವರ್ಷಗಳ ಹಿಂದೆ ಯಶ್ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಅವರು ನೀಡಿದ್ದ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂದರ್ಶನದಲ್ಲೇನಿತ್ತು?

‘ಟಿವಿ9 ಕನ್ನಡ’ ಸಂದರ್ಶನದಲ್ಲಿ ‘ಯಶ್ ಅವರನ್ನು ಯಾವ ರೀತಿಯ ಪಾತ್ರದಲ್ಲಿ ನೋಡಲು ಬಯಸುತ್ತೀರ?’ ಎಂದು ರಾಧಿಕಾ ಪಂಡಿತ್ ಅವರಿಗೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ರಾಧಿಕಾ, ಯಶ್ ಅವರನ್ನು ಐತಿಹಾಸಿಕ ಪಾತ್ರದಲ್ಲಿ ಅಥವಾ ದ್ವಿಪಾತ್ರದಲ್ಲಿ ನೋಡಲು ಆಸೆ ಇದೆ ಎಂದು ಹೇಳಿದ್ದರು.

ಈಗ ನಿಜವಾದ ರಾಧಿಕಾ ಮಾತು

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ‘ರಾಯ’ ಹಾಗೂ ‘ಟಿಕೆಟ್’ (ರಾಯನ ಮಗ) ಹೆಸರಿನ ಎರಡು ವಿಭಿನ್ನ ಪಾತ್ರಗಳಲ್ಲಿ (ಅಪ್ಪ-ಮಗನಾಗಿ) ನಟಿಸುತ್ತಿದ್ದಾರೆ ಎಂಬುದು ಅಧಿಕೃತವಾಗಿ ಹೊರಬಿದ್ದಿದೆ. ರಾಧಿಕಾ ಪಂಡಿತ್ ವರ್ಷಗಳ ಹಿಂದೆ ಆಸೆಪಟ್ಟಿದ್ದ ದ್ವಿಪಾತ್ರದ ಕನಸು ಈಗ ‘ಟಾಕ್ಸಿಕ್’ ಮೂಲಕ ನನಸಾಗಿದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್; ‘ಟಾಕ್ಸಿಕ್’ ಪ್ರಚಾರದಲ್ಲಿ ಯಶ್ ಬ್ಯುಸಿ

ಆಗಸ್ಟ್ 26ರಂದು ಬಿಡುಗಡೆಯಾಗಲಿರುವ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಈ ದ್ವಿಪಾತ್ರದ ಅವತಾರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮೊದಲು ರಿಲೀಸ್ ಆಗಿದ್ದ ಪೋಸ್ಟರ್​​ನಲ್ಲಿ ಹಾಗೂ ಟ್ರೇಲರ್​​ನಲ್ಲಿ ಬರೋ ಒಂದು ಡೈಲಾಗ್​ನಿಂದ ಯಶ್ ಅವರು ಮೂರು ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂಬ ಅನುಮಾನ ಮೂಡಿಸಿತ್ತು. ಆದರೆ, ಸದ್ಯದ ಮಟ್ಟಿಗೆ ಅದು ನಿಜವಲ್ಲ. ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಪ್ರಶ್ನೆ: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರೇನು?
ಉತ್ತರ: ರಾಯ ಹಾಗೂ ಟಿಕೆಟ್

ಪ್ರಶ್ನೆ: ಟಾಕ್ಸಿಕ್ ಚಿತ್ರದ ನಿರ್ದೇಶನ ಯಾರದ್ದು?
ಉತ್ತರ: ಗೀತು ಮೋಹನ್​ದಾಸ್

ಪ್ರಶ್ನೆ: ಟಾಕ್ಸಿಕ್ ರಿಲೀಸ್ ಯಾವಾಗ?
ಉತ್ತರ: ಆಗಸ್ಟ್​ 26

Published On - 7:39 am, Sat, 22 August 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us