ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit) ವಿವಾಹವಾಗಿ ಕೆಲವು ವರ್ಷಗಳು ಕಳೆದಿವೆ. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಅನೇಕರಿಗೆ ಮಾದರಿ ಆಗಿದ್ದಾರೆ. ಈ ಜೋಡಿಯ ಆದರ್ಶವನ್ನು ಫಾಲೋ ಮಾಡುವ ಸಾಕಷ್ಟು ಮಂದಿ ಇದ್ದಾರೆ. ಇಬ್ಬರೂ ಪ್ರೀತಿಸಿ ಮದುವೆ ಆದವರು. ಅನೇಕ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇಬ್ಬರೂ ನಂತರ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಈ ವಿಚಾರವನ್ನು ಅಧಿಕೃತ ಮಾಡಿದ್ದರು. ಯಶ್ ಜತೆಗಿನ ಪ್ರೀತಿ ವಿಚಾರದ ಬಗ್ಗೆ ರಾಧಿಕಾ ಪಂಡಿತ್ ಹಲವು ವಿಚಾರಗಳನ್ನು ಈ ಮೊದಲು ರಿವೀಲ್ ಮಾಡಿದ್ದರು. ಅದರಲ್ಲಿ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಯಶ್ಗೆ ರಾಧಿಕಾ ಒಂದು ನಿಕ್ನೇಮ್ ಇಟ್ಟಿದ್ದಾರೆ. ಅದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರೀತಿ ವಿಚಾರವನ್ನು ಯಶ್-ರಾಧಿಕಾ ಗುಟ್ಟಾಗಿ ಇಟ್ಟಿದ್ದರು. ತೀರಾ ಆಪ್ತರು ಎನಿಸಿಕೊಂಡವರಿಗೆ ಮಾತ್ರ ಈ ವಿಚಾರದ ಬಗ್ಗೆ ಗೊತ್ತಿತ್ತು. ಎಂಗೇಜ್ಮೆಂಟ್ ಆದ ಬಳಿಕವೇ ಈ ವಿಚಾರ ಅಧಿಕೃತವಾಗಿತ್ತು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಒಂದು ನಿಕ್ನೇಮ್ ಮೂಲಕ ಯಶ್ ಹೆಸರನ್ನು ಸೇವ್ ಮಾಡಿದ್ದರು ರಾಧಿಕಾ. ಈಗಲೂ ಅದೇ ಹೆಸರಿದೆ ಎಂದು ರಾಧಿಕಾ ಹೇಳಿಕೊಂಡಿದ್ದರು.
‘ಯಶ್ ನಂಬರ್ ನನ್ನ ಮೊಬೈಲ್ನಲ್ಲಿ ಇದ್ದಾಗಿನಿಂದಲೂ ನಾನು ಹೆಸರನ್ನು ಚೇಂಜ್ ಮಾಡೇ ಇಲ್ಲ. ಡೇಟಿಂಗ್ ಮಾಡುವ ಟೈಮ್ನಲ್ಲಿ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಒಂದು ಹೆಸರಿಟ್ಟಿದ್ದೆ. ‘ಡೊಲ್ಲ’ ಎಂದು ಯಶ್ ಹೆಸರನ್ನು ಸೇವ್ ಮಾಡಿಕೊಂಡಿದ್ದೆ. ನನ್ನ ಮಾತೃಭಾಷೆ ಕೊಂಕಣಿಯಲ್ಲಿ ಡೊಲ್ಲಾ ಎಂದರೆ ಫ್ಯಾಟ್ ಎಂದರ್ಥ’ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದರು.
ರಾಧಿಕಾ ಪಂಡಿತ್ ನಟನೆಯಿಂದ ದೂರ ಉಳಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ನಟನೆಯ ಯಾವ ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಅವರು ಮತ್ತೆ ನಟನೆಗೆ ಮರಳಬೇಕು ಎನ್ನುವ ಇಂಗಿತವನ್ನು ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ. ಯಶ್ ‘ಕೆಜಿಎಫ್ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಈ ಸಿನಿಮಾ ತಂಡ ಕೆಲ ಪ್ಯಾಚ್ವರ್ಕ್ ಕೆಲಸಗಳ ಶೂಟಿಂಗ್ನಲ್ಲಿ ತೊಡಗಿಕೊಂಡಿತ್ತು. ಅದರ ಫೋಟೋಗಳನ್ನು ನಟಿ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದರು. ಕೊವಿಡ್ ಕಾರಣದಿಂದ ‘ಕೆಜಿಎಫ್ 2’ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಎನ್ನುವ ಆತಂಕ ಅಭಿಮಾನಿಗಳಲ್ಲಿ ಇದೆ.
ಇದನ್ನೂ ಓದಿ: Yash Birthday: ಯಶ್ ಜನ್ಮದಿನಕ್ಕೆ ಆಯ್ರಾ, ಯಥರ್ವ್ ಕೊಟ್ಟ ಗಿಫ್ಟ್ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಯಶ್ -ರಾಧಿಕಾ ಪಂಡಿತ್ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್
Published On - 1:42 pm, Thu, 13 January 22