ಹಿಂದಿಗೆ ರಾಜ್ ಬಿ ಶೆಟ್ಟಿ, ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲು ಕಾರಣ ಯಾರು?

|

Updated on: Aug 22, 2024 | 3:03 PM

ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಇದೀಗ ಹಿಂದಿ ಚಿತ್ರರಂಗಕ್ಕೂ ಕಾಲಿಡಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ. ಆದರೆ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾದಲ್ಲಿ ಒಪ್ಪಿಕೊಳ್ಳಲು ಆ ಒಬ್ಬ ವ್ಯಕ್ತಿ ಕಾರಣವಂತೆ. ಯಾರದು?

ಹಿಂದಿಗೆ ರಾಜ್ ಬಿ ಶೆಟ್ಟಿ, ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲು ಕಾರಣ ಯಾರು?
Follow us on

ರಾಜ್ ಬಿ ಶೆಟ್ಟಿ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ. ಪ್ರಸ್ತುತ ಸಕ್ರಿಯವಾಗಿರುವ ಹಲವು ನಟ-ನಿರ್ದೇಶಕರಿಗಿಂತಲೂ ಭಿನ್ನವಾಗಿ ಯೋಚಿಸುವ, ಬದುಕುವ ರಾಜ್ ಬಿ ಶೆಟ್ಟಿ, ಅವರ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ಗಡಿ ದಾಟಿ ನೆರೆಯ ಚಿತ್ರರಂಗಗಳಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟಿ ಅವರೊಟ್ಟಿಗೆ ನಟಿಸಿ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ.

ರಾಜ್ ಬಿ ಶೆಟ್ಟಿ, ಹಿಂದಿ ಸಿನಿಮಾ ಒಂದರಲ್ಲಿ ನಟಿಸಿವುದು ಖಾತ್ರಿಯಾಗಿದೆ. ಸಿನಿಮಾವನ್ನು ಬಾಲಿವುಡ್​ನ ಖ್ಯಾತ ಹಾಗೂ ಭಿನ್ನ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡುತ್ತಿದ್ದಾರೆ. ಕೇವಲ ಅನುರಾಗ್ ಕಶ್ಯಪ್ ಅವರಿಗಾಗಿ ಮಾತ್ರವೇ ತಾವು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ‘ನಾನು ಅನುರಾಗ್ ಕಶ್ಯಪ್ ಅವರ ದೊಡ್ಡ ಅಭಿಮಾನಿ. ನಾನು ಸಿನಿಮಾ ನಿರ್ದೇಶಕ ಆಗಬೇಕು ಎಂದುಕೊಳ್ಳಲು ಅವರ ಸಿನಿಮಾಗಳು ಬೀರಿದ ಪ್ರಭಾವವೂ ಸಾಕಷ್ಟಿದೆ. ಅವರು ಕೆಲಸ ನನ್ನಲ್ಲಿ ಸ್ಪೂರ್ತಿ ತುಂಬಿದೆ. ನಾನು ನನ್ನ ತಂತ್ರಜ್ಞರೊಟ್ಟಿಗೆ ಹಲವು ಬಾರಿ ಕಶ್ಯಪ್​ರ ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದಿದೆ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ಇದನ್ನೂ ಓದಿ: Raj B Shetty: ದರ್ಶನ್ ನೋಡಲು ಜೈಲಿಗೆ ಹೋಗುವುದಿಲ್ಲ: ರಾಜ್ ಬಿ ಶೆಟ್ಟಿ

ಅನುರಾಗ್ ಕಶ್ಯಪ್ ಸಹ, ತಾವು ರಾಜ್ ಬಿ ಶೆಟ್ಟಿಯ ಅಭಿಮಾನಿ ಎಂದು ಈ ಹಿಂದೆ ಹೇಳಿಕೊಂಡಿದ್ದರು. ರಾಜ್​ ನಿರ್ದೇಶಿಸಿ, ನಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿದ್ದ ಅನುರಾಗ್ ಕಶ್ಯಪ್, ವಿಡಿಯೋ ಒಂದನ್ನು ಮಾಡಿ ರಾಜ್ ಬಿ ಶೆಟ್ಟಿಯನ್ನು ಅಭಿನಂದಿಸಿದ್ದರು. ಅದಾದ ಬಳಿಕ ಹಲವು ಸಂದರ್ಶನಗಳಲ್ಲಿ ರಾಜ್ ಬಿ ಶೆಟ್ಟಿಯ ಪ್ರತಿಭೆಯನ್ನು ಹೊಗಳಿದ್ದರು. ‘ಟೋಬಿ’ ಸಿನಿಮಾ ಬಿಡುಗಡೆ ಆಗುವ ಸಂದರ್ಭದಲ್ಲಿ ವಿಶೇಷ ವಿಡಿಯೋ ಒಂದನ್ನು ಮಾಡಿ ಬೆಂಬಲ ಸಹ ಸೂಚಿಸಿದ್ದರು.

ಇದೀಗ ಅನುರಾಗ್ ಕಶ್ಯಪ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೆಲ ದೊಡ್ಡ ಬಾಲಿವುಡ್ ಸ್ಟಾರ್ ನಟರು ಸಹ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್, ‘ದಂಗಲ್’ ನಟಿ ಸಾನ್ಯಾ ಮಲ್ಹೋತ್ರಾ, ಹೃತಿಕ್ ರೋಷನ್ ಗರ್ಲ್​ಫ್ರೆಂಡ್ ಸಬಾ ಅಜಾದ್ ಮಲಯಾಳಂನ ಪ್ರತಿಭಾವಂತ ನಟ ಜೋಜು ಜಾರ್ಜ್​ ಅವರುಗಳು ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೆಲ ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗಲಿದ್ದಾರಂತೆ.

ರಾಜ್ ಬಿ ಶೆಟ್ಟಿ ಪ್ರಸ್ತುತ ಶಿವರಾಜ್ ಕುಮಾರ್, ಉಪೇಂದ್ರ ಜೊತೆಗೆ ‘45’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಮತ್ತೊಂದು ಸಿನಿಮಾ ‘ರುಧಿರಂ’ನಲ್ಲಿ ನಟಿಸುತ್ತಿದ್ದಾರೆ. ಸ್ವತಃ ಹೊಸ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ