AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ 2’ಗಾಗಿ ಪುರಾತನ ಸಮರ ಕಲೆಯ ಅಭ್ಯಾಸದಲ್ಲಿ ತೊಡಗಿದ ರಿಷಬ್

Rishab Shetty: ರಿಷಬ್ ಶೆಟ್ಟಿ ‘ಕಾಂತಾರ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪಾತ್ರಕ್ಕಾಗಿ ಬಹಳ ಶ್ರಮ ಹಾಕುತ್ತಿದ್ದಾರೆ. ಇದೀಗ ಸಿನಿಮಾಕ್ಕಾಗಿ ಭಾರತದ ಪುರಾತನ ಸಮರ ಕಲೆಯೊಂದನ್ನು ಕಲಿಯುತ್ತಿದ್ದಾರೆ. ಮಾಹಿತಿ ಇಲ್ಲಿದೆ.

‘ಕಾಂತಾರ 2’ಗಾಗಿ ಪುರಾತನ ಸಮರ ಕಲೆಯ ಅಭ್ಯಾಸದಲ್ಲಿ ತೊಡಗಿದ ರಿಷಬ್
ರಿಷಬ್ ಶೆಟ್ಟಿ
ಮಂಜುನಾಥ ಸಿ.
|

Updated on: Aug 22, 2024 | 12:14 PM

Share

ಸದ್ಯಕ್ಕೆ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ಕಾಂತಾರ 2’ ಒಂದು. ‘ಕಾಂತಾರ’ ಸಿನಿಮಾ ಭಾರಿ ದೊಡ್ಡ ಹಿಟ್ ಆದ ಬೆನ್ನಲ್ಲೆ ಘೋಷಣೆಯಾದ ‘ಕಾಂತಾರ 2’ ಸಿನಿಮಾವನ್ನು, ರಿಷಬ್ ಶೆಟ್ಟಿ ಅವರೇ ನಿರ್ದೇಶಿಸಿ, ನಟಿಸುತ್ತಿದ್ದು, ಈ ಸಿನಿಮಾವನ್ನು ಭಾರಿ ಬಜೆಟ್​ನೊಂದಿಗೆ ಬಲು ಜಾಗರೂಕತೆಯಿಂದ ಕಟ್ಟುತ್ತಿದ್ದಾರೆ. ಸಿನಿಮಾಕ್ಕಾಗಿ ಬಲು ದೊಡ್ಡ ಸೆಟ್​ಗಳನ್ನು ನಿರ್ಮಿಸಿರುವುದು ಮಾತ್ರವೇ ಅಲ್ಲದೆ, ಸಿನಿಮಾದ ಪಾತ್ರಕ್ಕಾಗಿ ಹೆಚ್ಚುವರಿ ಶ್ರಮ ಹಾಕುತ್ತಿದ್ದಾರೆ. ಇದೀಗ ‘ಕಾಂತಾರ 2’ ಸಿನಿಮಾಕ್ಕಾಗಿ ಪುರಾತನ ಸಮರ ಕಲೆಯೊಂದನ್ನು ಕಲಿಯುತ್ತಿದ್ದಾರೆ ರಿಷಬ್ ಶೆಟ್ಟಿ.

ಕೇರಳದ ಪುರಾತನ ಸಮರ ಕಲೆ ‘ಕಲರಿಪಯಟ್ಟು’ ಅನ್ನು ರಿಷಬ್ ಶೆಟ್ಟಿ ಕಲಿಯುತ್ತಿದ್ದಾರೆ. ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ‘ಕಲರಿಪಯಟ್ಟು’ ಸಮರ ಕಲೆಯನ್ನು ಬಳಸಲಾಗುತ್ತಿದೆ. ಸಿನಿಮಾದ ನಾಯಕ ಕಲರಿಪಯಟ್ಟು ಸಮರ ಕಲೆಯ ಪರಿಣಿತನಾಗಿರುತ್ತಾನೆ, ಹಾಗಾಗಿ ನಾಯಕ ಪಾತ್ರಧಾರಿ ರಿಷಬ್ ಶೆಟ್ಟಿ ಇದೀಗ ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ತುಳುನಾಡಿನ ಸೃಷ್ಟಿಕರ್ತ ಎಂದೇ ನಂಬಲಾಗಿರುವ ಪರಶುರಾಮ, ಕಳರಿಪಯಟ್ಟು ಸಮರ ಕಲೆಯನ್ನು ಶಿವನಿಂದ ಕಲಿತನು ಎಂಬ ಪ್ರತೀತಿ ಇದೆ. ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಸಿನಿಮಾ ತುಳುನಾಡಿನ ಪೌರಾಣಿಕ ಕತೆಯನ್ನು ಆಧರಿಸಿದ್ದು, ಸಿನಿಮಾದಲ್ಲಿ ಕಳರಿಪಯಟ್ಟುವಿಗೆ ವಿಶೇಷ ಸ್ಥಾನವಿದೆಯಂತೆ. ಹಾಗಾಗಿಯೇ ರಿಷಬ್ ಶೆಟ್ಟಿ ಕಳರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಕಲೆ ಕೇರಳದ ಅತ್ಯಂತ ಪುರಾತನ ಸಮರ ಕಲೆಯೆಂದು ಕರೆಯಲಾಗುತ್ತದೆ.

ಇದನ್ನೂ ಓದಿ:ಆಗಸ್ಟ್ ಅಂತ್ಯಕ್ಕೆ ‘ಕಾಂತಾರ: ಚಾಪ್ಟರ್ 1’ ನಾಲ್ಕನೇ ಹಂತದ ಶೂಟಿಂಗ್; ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ

ಶಂಕರ್ ನಾಗ್ ನಟಿಸಿರುವ ಮೊದಲ ಕನ್ನಡ ಸಿನಿಮಾ ‘ಒಂದಾನೊಂದು ಕಾಲದಲ್ಲಿ’ ಸಿನಿಮಾದಲ್ಲಿ ಸಹ ಕಲರಿಪಯಟ್ಟು ಸಮರ ಕಲೆಯನ್ನು ಬಳಸಿಕೊಳ್ಳಲಾಗಿತ್ತು. ಆ ಸಿನಿಮಾದಲ್ಲಿ ಶಂಕರ್ ನಾಗ್ ಹಾಗೂ ಸುಂದರ್ ರಾಜ್ ಅವರು ಮಾಡುವ ಕಲರಿಪಯಟ್ಟು ಕಾಳಗ ಈಗಲೂ ಕನ್ನಡದ ಅತ್ಯುತ್ತಮ ಕಾಳಗ ದೃಶ್ಯಗಳಲ್ಲಿ ಒಂದು. ಇದೀಗ ಅದೇ ಕಲೆಯನ್ನು ರಿಷಬ್ ಶೆಟ್ಟಿ ತಮ್ಮ ಸಿನಿಮಾದಲ್ಲಿಯೂ ಬಳಸಿಕೊಳ್ಳಲಿದ್ದಾರೆ.

‘ಕಾಂತಾರ 2’ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕೆರಾಡಿ ಬಳಿ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾ ಚಿತ್ರೀಕರಣ ಮೂರು ಶೆಡ್ಯೂಲ್​ಗಳು ಈಗಾಗಲೇ ಮುಗಿದಿವೆ. ಇದೀಗ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಈ ನಾಲ್ಕನೇ ಹಂತದಲ್ಲಿ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಅದಕ್ಕಾಗಿಯೇ ಈಗ ರಿಷಬ್ ಶೆಟ್ಟಿ ತಯಾರಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಕೊಪ್ಪಳದಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಬೆಳ್ಳಂಬೆಳಗ್ಗೆ ಸಫಾರಿ ತೆರಳಿದವರಿಗೆ ದರ್ಶನ ಕೊಟ್ಟ ಅಪರೂಪದ ಕರಿಚಿರತೆ!
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ
ಡೋಲು ಬಾರಿಸುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ಶಿವಲಿಂಗೇಗೌಡ