ರಾಜ್​ಕುಮಾರ್ ಕೊನೆ ಆಸೆ ಏನಾಗಿತ್ತು? ಅದು ಈಡೇರಲೇ ಇಲ್ಲ

ರಾಜ್​ಕುಮಾರ್ ಹುಟ್ಟಿದ್ದು ಗಾಜನೂರಿನಲ್ಲಿ. ಅವರು ಹಳ್ಳಿಯ ಹಿನ್ನೆಲೆಯಿಂದ ಬಂದವರು. ಅವರು ಸಿನಿಮಾಗಳಿಗೂ ಮೊದಲು ನಾಟಕಗಳನ್ನು ಮಾಡಿಕೊಂಡಿದ್ದರು. ಬಿಡುವು ಸಿಕ್ಕಾಗ ಅವರು ಕೃಷಿ ಕೆಲಸ ಮಾಡುತ್ತಿದ್ದರು ಹೀಗಾಗಿ, ಕೃಷಿಕನಾಗಬೇಕು ಎಂಬ ಕನಸು ಅವರಲ್ಲಿ ಬಹುವಾಗಿ ಇತ್ತು.

ರಾಜ್​ಕುಮಾರ್ ಕೊನೆ ಆಸೆ ಏನಾಗಿತ್ತು? ಅದು ಈಡೇರಲೇ ಇಲ್ಲ
ರಾಜ್​ಕುಮಾರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 22, 2024 | 10:07 AM

ವರನಟ ಡಾ.ರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದರು. ಅವರು ಅನೇಕರಿಗೆ ಮಾದರಿ. ರಾಜ್​ಕುಮಾರ್ ಅವರು ಇತರ ಹೀರೋಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದರು. ರಾಜ್​ಕುಮಾರ್ ಅವರ ಕೊನೆಯ ಒಂದು ಆಸೆ ಇತ್ತು. ಆದರೆ, ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಅವರು ಈ ಬಗ್ಗೆ ಹೇಳಿಕೊಂಡಿದ್ದರು.

ರಾಜ್​ಕುಮಾರ್ ಅವರು ಗಾಜನೂರಿನವರು. ಹಳ್ಳಿಯ ಹಿನ್ನೆಲೆಯಿಂದ ಬಂದವರು ಅವರು. ಅವರು ಸಿನಿಮಾಗಳಿಗೂ ಮೊದಲು ನಾಟಕಗಳನ್ನು ಮಾಡಿಕೊಂಡಿದ್ದರು. ಬಿಡುವು ಸಿಕ್ಕಾಗ ಅವರು ಕೃಷಿ ಕೆಲಸ ಮಾಡುತ್ತಿದ್ದರು. ದನ ಕಾಯುತ್ತಿದ್ದರು. ಕೃಷಿ ಮಾಡಬೇಕು ಎನ್ನುವ ಆಸೆ ಅವರಿಗೆ ಇತ್ತು. ಆದರೆ, ಸಿನಿಮಾ ರಂಗದಲ್ಲಿ ತೊಡಗಿಕೊಂಡು ಬಿಡುವು ಸಿಗದ ಕಾರಣ ಅವರಿಗೆ ಕೃಷಿ ಮಾಡಲು ಸಾಧ್ಯವಾಗಲೇ ಇಲ್ಲ.

ವೇದಿಕೆ ಮೇಲೆ ರಾಜ್​ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಸಣ್ಣವನಿದ್ದಾಗ ಮೂರು ನಾಲ್ಕು ಮೈಲಿ ಕಾಡಿಗೆ ಹೋಗುತ್ತಾ ಇದ್ದೆ. ಕುರಿ ಮರಿ, ಹಸುಗಳನ್ನು ಮೇಯಿಸುತ್ತಿದ್ದೆ. ಈ ರೀತಿ ಕಾಲ ಕಳೆದವನಾದ್ದಾರಿಂದ ನನಗೆ ನನ್ನ ವೃತ್ತಿ ಬಿಟ್ಟು ತೃಪ್ತಿ ಕೊಡೋ ಕೆಲಸ ಎಂದರೆ ಅದು ಕೃಷಿ’ ಎಂದಿದ್ದರು ರಾಜ್​ಕುಮಾರ್.

‘ನನ್ನ ಕಡೆಯ ಆಸೆ ಭೂಮಿಯಲ್ಲಿ ಕೆಲಸ ಮಾಡಬೇಕು, ಕೃಷಿಕನಾಗಬೇಕು ಎಂಬು. ಸಣ್ಣ ವಯಸ್ಸಿನಿಂದ ಈ ಆಸೆ ನನ್ನಲ್ಲಿ ಬೇರೂರಿತ್ತು’ ಎಂದಿದ್ದರು ರಾಜ್​ಕುಮಾರ್. ಆದರೆ, ರಾಜ್​ಕುಮಾರ್ ಅವರಿಗೆ ಸೃಷ್ಟಿ ಆದ ಬೇಡಿಕೆ ತುಂಬಾನೇ ದೊಡ್ಡದಿತ್ತು. ಈ ಕಾರಣದಿಂದ ಅವರಿಗೆ ಬೇರೆ ಕೆಲಸಗಳನ್ನು ಮಾಡಲು ಅವಕಾಶವೇ ಸಿಗಲಿಲ್ಲ. ಅವರು ಕುಟುಂಬದ ಜೊತೆ ಸಮಯ ಕೊಡೋಕೂ ಸಾಧ್ಯವಾಗದ ಸ್ಥಿತಿ ಇತ್ತು. ರಾಜ್​ಕುಮಾರ್ ನಟನೆಯ ಮೂರ್ನಾಲ್ಕು ಚಿತ್ರಗಳು ಪ್ರತಿ ವರ್ಷ ರಿಲೀಸ್ ಆಗುತ್ತಿದ್ದವರು. ಅವರ ಪತ್ನಿ ಪಾರ್ವತಮ್ಮ ಅವರು ರಾಜ್​ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದರು.

ಇದನ್ನೂ ಓದಿ: ಕೀರ್ತಿ ಸುರೇಶ್ ತಾಯಿ ರಾಜ್​ಕುಮಾರ್ ಜೊತೆ ನಟಿಸಿದ್ದರು ಅನ್ನೋ ವಿಚಾರ ಗೊತ್ತೇ?

1942ರಲ್ಲಿ ರಿಲೀಸ್ ಆದ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ  ಬಾಲ ಕಲಾವಿದನಾಗಿ ರಾಜ್​ಕುಮಾರ್ ಅವರು ನಟಿಸಿದ್ದರು. 1954ರಲ್ಲಿ ರಿಲೀಸ್ ಆದ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ಅವರು ನಟಿಸಿದ ಕೊನೆಯ ಸಿನಿಮಾ ‘ಶಬ್ದವೇದಿ’.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:04 am, Thu, 22 August 24

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ