Dr Rajkumar: ಪ್ರತಿವರ್ಷ ಭೀಮನ ಅಮಾವಾಸ್ಯೆ ಹೊತ್ತು ತರುತ್ತದೆ ಡಾ.ರಾಜ್ ಅಪಹರಣದ ಕಹಿ ನೆನಪನ್ನು!

ಡಾ.ರಾಜ್​ಕುಮಾರ್ ಅವರು ಅಪಹರಣಗೊಂಡ ದಿನದ ಕಹಿ ನೆನಪು ಪ್ರತೀ ವರ್ಷದ ಭೀಮನ ಅಮಾವಾಸ್ಯೆಯಲ್ಲಿ ನೆನಪಾಗುತ್ತಲೇ ಇರುತ್ತದೆ. ಆ ಕುರಿತ ಒಂದು ಬರಹ ಇಲ್ಲಿದೆ.

Dr Rajkumar: ಪ್ರತಿವರ್ಷ ಭೀಮನ ಅಮಾವಾಸ್ಯೆ ಹೊತ್ತು ತರುತ್ತದೆ ಡಾ.ರಾಜ್ ಅಪಹರಣದ ಕಹಿ ನೆನಪನ್ನು!
ಡಾ.ರಾಜ್​ಕುಮಾರ್ ಅವರನ್ನು ಅಪಹರಣದಿಂದ ಬಿಡುಗಡೆಗೊಳಿಸುವ ಸಂದರ್ಭದ ಚಿತ್ರ
Follow us
TV9 Web
| Updated By: shivaprasad.hs

Updated on: Aug 08, 2021 | 12:30 PM

ಪ್ರತಿವರ್ಷ ಭೀಮನ ಅಮಾವಾಸ್ಯೆ ಮರೆಯಲಾರದ ನೆನಪೊಂದನ್ನು ತನ್ನ ಹೆಗಲಲ್ಲಿ ಹೊತ್ತು ತರುತ್ತದೆ. ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕರಾಳ ಘಟನೆಯೊಂದು ನಡೆದಿದ್ದು ಇದೇ ದಿನ. ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ.ರಾಜ್​ಕುಮಾರ್ ಅವರನ್ನು 2000ನೇ ಇಸವಿಯ ಜುಲೈ 30ರ ರಾತ್ರಿ ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಅಂದು ಭೀಮನ ಅಮಾವಾಸ್ಯೆ, ಭಾನುವಾರ. 2021ರ ಭೀಮನ ಅಮಾವಾಸ್ಯೆಯ ಈ ಭಾನುವಾರವೂ 21 ವರ್ಷಗಳ ಹಿಂದಿನ ಆ ಘಟನೆ, ಆಗ ಎದುರಿಸಿದ್ದ ತಲ್ಲಣಗಳು, ಪ್ರತಿಯೊಬ್ಬ ಅಭಿಮಾನಿಯು ದೇವರಲ್ಲಿ ಕ್ಷಣ ಕ್ಷಣವೂ ಮಾಡುತ್ತಿದ್ದ ಪ್ರಾರ್ಥನೆ, ಸರ್ಕಾರದ ಅವಿರತ ಹುಡುಕಾಟ, ದಿನಕ್ಕೊಂದು ತಿರುವು, ಕಾಯುವಿಕೆ… ಎಲ್ಲವನ್ನೂ ಮತ್ತೆ ಮತ್ತೆ ನೆನಪಿಸುತ್ತದೆ.

ರಾಜ್​ಕುಮಾರ್ ತಮ್ಮ ಪತ್ನಿ ಪಾರ್ವತಮ್ಮ ಮತ್ತು ಸ್ನೇಹಿತ, ಕುಟುಂಬದವರೊಡನೆ ಗಾಜನೂರಿನ ತೋಟದಲ್ಲಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ವೀರಪ್ಪನ್ ಮತ್ತು ಸಹಚರರು ಅಲ್ಲಿಗೆ ನುಗ್ಗಿದ್ದರು. ರಾಜ್ ಅವರ ಬೆನ್ನಿಗೆ ಬಂದೂಕಿಟ್ಟು, ಪಾರ್ವತಮ್ಮನವರ ಕೈಗೆ ಬೇಡಿಕೆಗಳಿರುವ ಕ್ಯಾಸೆಟ್​ ಒಂದನ್ನು ನೀಡಿ ಅದನ್ನು ಸರ್ಕಾರಕ್ಕೆ ತಲುಪಿಸುವಂತೆ ಹೇಳಿದ ವೀರಪ್ಪನ್, ರಾಜ್ ಅವರೊಂದಿಗೆ ಮೂರು ಜನರನ್ನು ಅಪಹರಿಸಿದ. ರಾಜ್ ಅವರ ಅಳಿಯ ಎಸ್​.ಎ.ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ ಹಾಗೂ ಸಂಬಂಧಿ ನಾಗೇಶ್ ಅವರೂ ಡಾ.ರಾಜ್ ಅವರೊಂದಿಗೆ ಬಂಧಿಯಾದರು.

Veerappan, Rajkumar

ಸಂಧಾನಕಾರ ‘ನಕ್ಕೀರನ್’ ಗೋಪಾಲನ್, ಡಾಕ್ಟರ್ ರಾಜ್ ಮತ್ತು ವೀರಪ್ಪನ್

ವೀರಪ್ಪನ್ ಕೊಟ್ಟ ಕ್ಯಾಸೆಟ್ ತೆಗೆದುಕೊಂಡು ಅಂದು ರಾತ್ರಿಯೇ ಚಾಮರಾಜನಗರಕ್ಕೆ ಬಂದ ಪಾರ್ವತಮ್ಮನವರು ಮೊದಲು ತಮ್ಮ ಮಕ್ಕಳಿಗೆ ಸುದ್ದಿ ಮುಟ್ಟಿಸಿದರು. ನಂತರ ಬೆಂಗಳೂರಿಗೆ ಹೊರಟರು. ರಾತ್ರಿ 1.30ರ ಸುಮಾರಿಗೆ ಆಗಿನ ಕರ್ನಾಟಕ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದರು. ಮಾರನೇ ದಿನ ಬೆಳಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಎಸ್.ಎಂ.ಕೃಷ್ಣ ಮಾತುಕತೆ ನಡೆಸಿದರು. ಅಲ್ಲಿಂದ ಡಾ.ರಾಜ್ ಬಿಡುಗಡೆಗೆ ಆಡಳಿತಾತ್ಮಕ ಪ್ರಯತ್ನಗಳು ಆರಂಭವಾದವು.

Rajkumar and Veerappan

ಕಾಡಿನಲ್ಲಿದ್ದಾಗ ಡಾ.ರಾಜ್​ಕುಮಾರ್ ಮತ್ತು ವೀರಪ್ಪನ್

ಹಲವು ಸುತ್ತಿನ ಮಾತುಕತೆ, ಸಂಧಾನದ ಬಳಿಕ ಡಾ.ರಾಜ್ ಅವರನ್ನು ಬಿಡುಗಡೆಗೊಳಿಸಲು ವೀರಪ್ಪನ್ ಒಪ್ಪಿಕೊಂಡ. ಸುಮಾರು 108 ದಿನಗಳ ಬಳಿಕ, ಅಂದರೆ ನವೆಂಬರ್ 15ರಂದು ರಾಜ್ ಅವರನ್ನು ವೀರಪ್ಪನ್ ಬಿಡುಗಡೆಗೊಳಿಸಿದ. ಇಡೀ ಕರ್ನಾಟಕದ ಪ್ರಾರ್ಥನೆ ಸಾಕಾರಗೊಂಡ ದಿನವದು.

ಈ ಘಟನೆಗಳ ನಾಲ್ಕು ವರ್ಷಗಳ ನಂತರ, ವೀರಪ್ಪನ್ 2004ರಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 9 ಆರೋಪಿಗಳನ್ನು ನ್ಯಾಯಾಲಯವು ಸಾಕ್ಷಾಧಾರಗಳ ಕೊರತೆಯಿಂದ 2018ರ ಸೆಪ್ಟೆಂಬರ್ 25ರಂದು ಖುಲಾಸೆಗೊಳಿಸಿತು. ಅಪಹರಣದಲ್ಲಿ ಭಾಗಿಯಾಗಿದ್ದ ರಂಗಸ್ವಾಮಿ ಹಾಗೂ ಸೇತುಕುಳಿ ಗೋವಿಂದನ್ ಈ ಮೊದಲೇ ಪೊಲೀಸರಿಂದ ಹತರಾಗಿದ್ದರು.

ಇದನ್ನೂ ಓದಿ:

Dr Rajkumar ಡಾ.ರಾಜ್​ಕುಮಾರ್​ ಬಿಡುಗಡೆಗೆ ಕರ್ನಾಟಕ ಸರ್ಕಾರದಿಂದ ವೀರಪ್ಪನ್​ಗೆ ಪಾವತಿಯಾಗಿತ್ತು ₹15 ಕೋಟಿ! ಪುಸ್ತಕ ಬಿಚ್ಚಿಟ್ಟ ಸತ್ಯ

ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

(Rajkmar Kidnapped by Veerappan incident turns to 21 year today)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ