Rajkumar and Sachin Birthday: ಒಬ್ಬರು ಅಭಿಮಾನಿಗಳ ಪಾಲಿನ ರಾಜಕುಮಾರ; ಮತ್ತೊಬ್ಬರು ದಾಖಲೆಗಳ ಸರದಾರ

| Updated By: ಡಾ. ಭಾಸ್ಕರ ಹೆಗಡೆ

Updated on: Apr 24, 2021 | 4:09 PM

ರಾಜ್​ಕುಮಾರ್​ ಮತ್ತು ಸಚಿನ್​- ಈ ಮಹಾನ್​ ಸಾಧಕರಿಬ್ಬರ ಬದುಕು ಕೋಟ್ಯಂತರ ಜನರಿಗೆ ಸ್ಫೂರ್ತಿ. ಏ.24ರಂದು ಇಬ್ಬರ ಜನ್ಮದಿನ ಎಂಬುದು ವಿಶೇಷ. ಇಬ್ಬರ ಬಗೆಗಿನ ವಿಶೇಷ ಪದಪುಂಜ ಇಲ್ಲಿದೆ..

Rajkumar and Sachin Birthday: ಒಬ್ಬರು ಅಭಿಮಾನಿಗಳ ಪಾಲಿನ ರಾಜಕುಮಾರ; ಮತ್ತೊಬ್ಬರು ದಾಖಲೆಗಳ ಸರದಾರ
ರಾಜ್​ಕುಮಾರ್​ - ಸಚಿನ್​
Follow us on

ಮುತ್ತು – ರತ್ನ

ಒಬ್ಬರು ಸಿನಿಮಾ‌ ದೇವರು

ಮತ್ತೊಬ್ಬರು ಕ್ರಿಕೆಟ್ ದೇವರು.

ಒಬ್ಬರು ಅಭಿಮಾನಿಗಳನ್ನೇ ದೇವರೆಂದವರು.

ಮತ್ತೊಬ್ಬರು ಅಭಿಮಾನಿಗಳ ಕ್ರಿಕೆಟ್ ದೇವರು.

 

ಇವೇರೆ ನಮ್ಮ ಕನ್ನಡದ ಮುತ್ತು ಭಾರತದ ರತ್ನ

ಒಬ್ಬರು ನಟಸಾರ್ವಭೌಮ.

ಮತ್ತೊಬ್ಬರು ಅಪ್ರತಿಮ.

ಒಬ್ಬರು ಅಭಿಮಾನಿಗಳ ಪಾಲಿನ ರಾಜಕುಮಾರ.

ಮತ್ತೊಬ್ಬರು ದಾಖಲೆಗಳ ಸರದಾರ.

 

ಕನ್ನಡದ ಮುತ್ತು – ಭಾರತದ ರತ್ನ

ಒಬ್ಬರು ಸಹನೆಯ ಪ್ರತಿರೂಪ.

ಮತ್ತೊಬ್ಬರು ಸೌಮ್ಯದ ಸ್ವರೂಪ.

ಒಬ್ಬರು ಹೃದಯ ಶ್ರೀಮಂತರು.

ಮತ್ತೊಬ್ಬರು ಎಲ್ಲರ ಹೃದಯ ಗೆದ್ದವರು.

 

ಕನ್ನಡದ ಮುತ್ತು – ಭಾರತದ ರತ್ನ

ಒಬ್ಬರು ಎತ್ತರಕ್ಕೆ ಏರಿದರು ನೆಲದಲ್ಲೇ ನಿಂತವರು.

ಮತ್ತೊಬ್ಬರು ವಾಮನ ರೂಪವಾದರೂ ಎತ್ತರಕ್ಕೆ ಬೆಳೆದವರು‌.

ಒಬ್ಬರು ಸಿನಿಮಾಗಾಗೇ ಬದುಕಿದವರು.

ಮತ್ತೊಬ್ಬರು ಕ್ರಿಕೆಟ್‌ನ್ನೇ ಉಸಿರಾಗಿಸಿಕೊಂಡವರು.

 

ಕನ್ನಡದ ಮುತ್ತು – ಭಾರತದ ರತ್ನ

ಒಬ್ಬರದ್ದು ಸ್ಪೂರ್ತಿದಾಯಕ ಆತ್ಮಕಥೆ.

ಮತ್ತೊಬ್ಬರದ್ದು ಜೀವಂತ ದಂತ‌ಕಥೆ.

ಒಬ್ಬರು ಬದುಕುವುದನ್ನು ಕಲಿಸಿದವರು.

ಮತ್ತೊಬ್ಬರು ಬಾಳಿ ತೋರಿಸಿದವರು.

 

ಕನ್ನಡದ ಮುತ್ತು – ಭಾರತದ ರತ್ನ

ಒಬ್ಬರು ಜಾತಿ ಭೇಧವ ಮೀರಿದವರು.

ಮತ್ತೊಬ್ಬರು ಧರ್ಮದ ಅಡೆ ತಡೆಗಳ ದಾಟಿ ಸಾಗಿದವರು.

ಒಬ್ಬರು ಅಜಾತಶತ್ರು.

ಮತ್ತೊಬ್ಬರು ಕ್ರಿಕೆಟ್ ಇತಿಹಾಸದ ದಾಖಲೆಗಳ ಕತೃ

 

ಕನ್ನಡದ ಮುತ್ತು – ಭಾರತದ ರತ್ನ

ಒಬ್ಬರು ವೈರಾಗ್ಯಮೂರ್ತಿ.

ಮತ್ತೊಬ್ಬರು ಶಾಂತಮೂರ್ತಿ.

ಒಬ್ಬರು ಕನ್ನಡಿಗರ ಸ್ವಾಭಿಮಾನ.

ಮತ್ತೊಬ್ಬರು ಭಾರತೀಯರ ಅಭಿಮಾನ.

 

ಕನ್ನಡದ ಮುತ್ತು – ಭಾರತದ ರತ್ನ

ಇಬ್ಬರು ಹುಟ್ಟಿದ ಈ ದಿನ.

ಕೋಟ್ಯಾಂತರ ಅಭಿಮಾನಿಗಳ ಸುದಿನ.

ಅವರ ಹಾದಿಯಲ್ಲಿ ನಡೆಯೋಣ.

ಅವರ ಎಲ್ಲಾ ಸದ್ಗುಣಗಳನ್ನು ನಮ್ಮದಾಗಿಸಿಕೊಂಡು ಬದುಕೋಣ.

 

ಮುತ್ತು ರಾಜ ಕುಮಾರ ಹಾಗೂ ಸ ಚಿನ್ನ ತೆಂಡೂಲ್ಕರ್ ಅವರಿಗೆ ಜನುಮದಿನದ ಶುಭಾಶಯಗಳು.

(ಬರಹ: ರಾಮ್ ಮೈಸೂರು)

 

(Rajkumar and Sachin Birthday: special writing about two legends of India)

Published On - 2:58 pm, Sat, 24 April 21