ರಕ್ಷಿತ್ ಶೆಟ್ಟಿ ವಿರುದ್ಧದ ಕೇಸ್; ಮಾತಿನ ಮೂಲಕವೇ ಬಗೆಹರಿಯಲಿದೆ ಕೇಸ್?

|

Updated on: Jul 15, 2024 | 3:10 PM

ನವೀನ್ ಕುಮಾರ್ ಎಂಬುವವರು ರಕ್ಷಿತ್ ಶೆಟ್ಟಿ ದೂರು ದಾಖಲು ಮಾಡಿದ್ದಾರೆ. ನವೀನ್ ಕುಮಾರ್ ಅವರು ಎಂಆರ್​​ಟಿ ಮ್ಯೂಸಿಕ್​ನ ಪಾಲುದಾರಿಕೆ ಹೊಂದಿದ್ದಾರೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಬಳಕೆ ಆದ ‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ವಿರುದ್ಧದ ಕೇಸ್; ಮಾತಿನ ಮೂಲಕವೇ ಬಗೆಹರಿಯಲಿದೆ ಕೇಸ್?
ರಕ್ಷಿತ್ ಶೆಟ್ಟಿ
Follow us on

ರಕ್ಷಿತ್ ಶೆಟ್ಟಿ ಅವರ ವಿರುದ್ಧ ಕೇಸ್ ಹಾಕಲಾಗಿದೆ. ಎಂಆರ್​​ಟಿ​ ಮ್ಯೂಸಿಕ್ ಅವರು ಕಾನೂನಾತ್ಮಕವಾಗಿ ಹೋರಾಡಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಆಗಿರೋದು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ. ಈ ಚಿತ್ರದಲ್ಲಿ ಬಳಕೆ ಆದ ಎರಡು ಹಾಡುಗಳನ್ನು ಒಪ್ಪಿಗೆ ಇಲ್ಲದೆ ಬಳಕೆ ಮಾಡಲಾಗಿದೆ ಎಂದು ನವೀನ್​ ಕುಮಾರ್ ಅವರು ಕೇಸ್ ದಾಖಲು ಮಾಡಿದ್ದಾರೆ. ಇದನ್ನು ಆಧರಿಸಿ ಎಫ್​ಐಆರ್ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ರಕ್ಷಿತ್ ಶೆಟ್ಟಿಗೆ ನೋಟಿಸ್ ನೀಡಲಾಗಿದೆ.

ಎಂಆರ್​ಟಿ ಲಾಯರ್ ಹೇಳೋದೇನು?

ಎಂಆರ್​ಟಿ ಮ್ಯೂಸಿಕ್‌ ಕಂಪನಿಯ ವಕೀಲ ಪ್ರಣಂ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ಪರಂವ ಸ್ಟುಡಿಯೋಸ್ ತೆಗೆದಿರೋ ಬ್ಯಾಚುಲರ್ ಪಾರ್ಟಿ ಪಿಕ್ಚರ್​ನಲ್ಲಿ ಎಂಆರ್​ಟಿ ಮ್ಯೂಸಿಕ್ ಸಂಸ್ಥೆಯ ‘ಗಾಳಿ ಮಾತು ಹಾಗೂ ಒಮ್ಮೆ ನನ್ನನ್ನು ಹಾಡನ್ನು ಯಾವುದೇ ಒಪ್ಪಿಗೆ ಇಲ್ಲದೆ ಬಳಸಿದ್ದಾರೆ. ಹಾಗೆ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಯಶವಂತಪುರ ಪೋಲೀಸ್ ಸ್ಟೇಶನ್​ನಲ್ಲಿ ದೂರು ದಾಖಲು ಮಾಡಿದ್ದೇವೆ’ ಎಂದಿದ್ದಾರೆ ಅವರು.

ಮಾತುಕತೆ ಮೂಲಕ?

‘ಪರಂವ ಸ್ಟುಡಿಯೋ’ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಸಿನಿಮಾದಲ್ಲಿ ಚಿಕ್ಕ ಬಿಟ್ ಅಷ್ಟೇ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಕೂತು ಮಾತನಾಡಿ ವಿವಾದ ಪರಿಹರಿಸಲು ಪ್ರಯತ್ನ ನಡೆಯೋ ಸಾಧ್ಯತೆ ಇದೇ ಎನ್ನಲಾಗಿದೆ. ರಕ್ಷಿತ್ ಶೆಟ್ಟಿ ಕಾಂಪ್ರೋಮೈಸ್ ಆಗಲು ರೆಡಿ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸ್ಯಾಂಡಲ್​ವುಡ್​ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು

ವಿಚಾರಣೆಗೆ ಹಾಜರಾಗಿಲ್ಲ

ರಕ್ಷಿತ್ ಶೆಟ್ಟಿಗೆ ಪತ್ರದ ಮುಖಾಂತರ ಯಶವಂತಪುರ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ. ಇಂದೇ ವಿಚಾರಣೆಗೆ ಹಾಜರಾಗಲು ಯಶವಂತಪುರ ಪೊಲೀಸರಿಂದ ನೋಟಿಸ್ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಇಲ್ಲದ ಕಾರಣ ಮ್ಯಾನೇಜರ್‌ಗೆ ಸಿಬ್ಬಂದಿ ನೋಟಿಸ್‌ ಕೊಟ್ಟಿದ್ದಾರೆ. ಸಿನಿಮಾವೊಂದರ ಸಂಬಂಧ ಹೊರ ಜಿಲ್ಲೆಯಲ್ಲಿ ರಕ್ಷಿತ್ ಇದ್ದಾರೆ. ವಾಪಸಾದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.