KGF Chapter 2: ‘ಅದ್ಭುತ..’- ಕೆಜಿಎಫ್ ಚಾಪ್ಟರ್ 2 ನೋಡಿ ಹಾಡಿಹೊಗಳಿದ ರಾಮ್​ ಚರಣ್; ಪ್ರಭಾಸ್ ಹೇಳಿದ್ದೇನು?

Yash | Ram Charan | Prabhas: ‘ಆರ್​ಆರ್​ಆರ್​’ ನಾಯಕ ನಟರಲ್ಲಿ ಒಬ್ಬರಾದ ರಾಮ್ ಚರಣ್ ಟ್ವೀಟ್ ಮಾಡಿ, ಕೆಜಿಎಫ್ ಚಾಪ್ಟರ್ 2 ಯಶಸ್ಸಿಗೆ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಾಯಕ ನಟ ಯಶ್ ಅವರ ಅಭಿನಯಕ್ಕೆ ಫಿದಾ ಆಗಿರುವ ರಾಮ್ ಚರಣ್, ‘ಅದ್ಭುತ’ ಎಂದು ಉದ್ಗರಿಸಿದ್ದಾರೆ.

KGF Chapter 2: ‘ಅದ್ಭುತ..’- ಕೆಜಿಎಫ್ ಚಾಪ್ಟರ್ 2 ನೋಡಿ ಹಾಡಿಹೊಗಳಿದ ರಾಮ್​ ಚರಣ್; ಪ್ರಭಾಸ್ ಹೇಳಿದ್ದೇನು?
ರಾಮ್ ಚರಣ್, ಯಶ್, ಪ್ರಭಾಸ್
Edited By:

Updated on: Apr 23, 2022 | 4:42 PM

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರಕ್ಕೆ ಎಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಪರಿಣಾಮವಾಗಿ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎರಡನೇ ವೀಕೆಂಡ್​ನಲ್ಲಿಯೂ ಚಿತ್ರದ ಗಳಿಕೆ ಜೋರಾಗಿದ್ದು, ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ಮೊದಲಾದ ತಾರೆಯರ ಪಾತ್ರಪೋಷಣೆಗೆ ಬೇರೆ ಚಿತ್ರರಂಗದ ತಾರೆಯರೂ ಫಿದಾ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಚಿತ್ರವನ್ನು ವೀಕ್ಷಿಸಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಚಿತ್ರತಂಡಕ್ಕೆ ಶಹಬ್ಬಾಸ್​ಗಿರಿ ನೀಡಿದ್ದರು. ಇದೀಗ ಪ್ರಭಾಸ್ (Prabhas) ಹಾಗೂ ರಾಮ್​ ಚರಣ್ (Ram Charan) ಸರದಿ. ‘ಆರ್​ಆರ್​ಆರ್​’ ನಾಯಕ ನಟರಲ್ಲಿ ಒಬ್ಬರಾದ ರಾಮ್ ಚರಣ್ ಟ್ವೀಟ್ ಮಾಡಿ, ಕೆಜಿಎಫ್ ಚಾಪ್ಟರ್ 2 ಯಶಸ್ಸಿಗೆ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ನಾಯಕ ನಟ ಯಶ್ (Yash) ಅವರ ಅಭಿನಯಕ್ಕೆ ಫಿದಾ ಆಗಿರುವ ರಾಮ್ ಚರಣ್, ‘ಅದ್ಭುತ’ ಎಂದು ಉದ್ಗರಿಸಿದ್ದಾರೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಸ್ ಸೇರಿದಂತೆ ಕಲಾವಿದರ ನಟನೆಯನ್ನು ಹೊಗಳಿರುವ ರಾಮ್ ಚರಣ್, ರವಿ ಬಸ್ರೂರು ಸಂಗೀತಕ್ಕೂ ಶಹಬ್ಬಾಸ್ ಎಂದಿದ್ದಾರೆ.

ರಾಮ್​ ಚರಣ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಕೆಜಿಎಫ್ ಚಾಪ್ಟರ್ 2’ ನೋಡಿ ಪ್ರಭಾಸ್ ಹೇಳಿದ್ದೇನು?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಿರ್ದೇಶಕ ಪ್ರಶಾಂತ್ ನೀಲ್ ಜತೆ ‘ಸಲಾರ್’ ಚಿತ್ರವನ್ನು ಮಾಡುತ್ತಿದ್ದಾರೆ. ಈ ಹಿಂದೆಯೇ ‘ಕೆಜಿಎಫ್ 2’ ಬಗ್ಗೆ ನಟ ಮಾತನಾಡಿದ್ದರು. ಇದೀಗ ಪ್ರಭಾಸ್, ಚಿತ್ರ ಸೂಪರ್ ಹಿಟ್ ಆಗಿದ್ದಕ್ಕೆ ಯಶ್, ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ಗೆ ಅಭಿನಂದನೆ ಹೇಳಿದ್ದಾರೆ.

ಪ್ರಭಾಸ್ ಹಂಚಿಕೊಂಡಿರುವ ಸ್ಟೋರಿ ಇಲ್ಲಿದೆ:

‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ಪ್ರಭಾಸ್ ಹೇಳಿದ್ದಿದು

‘ಕೆಜಿಎಫ್ ಚಾಪ್ಟರ್ 2’ ಹೊಗಳಿದ್ದ ಅಲ್ಲು ಅರ್ಜುನ್:

ಈ ಹಿಂದೆ ಅಲ್ಲು ಅರ್ಜುನ್ ಚಿತ್ರತಂಡವನ್ನು ಹೊಗಳಿದ್ದರು. ಅವರು ತಮ್ಮ ಟ್ವೀಟ್​ನಲ್ಲಿ, ‘ಕೆಜಿಎಫ್ 2’ ತಂಡಕ್ಕೆ ಶುಭಾಶಯ. ಯಶ್ ಅವರ ಅಭಿನಯ ಅದ್ಭುತವಾಗಿದೆ. ಸಂಜಯ್ ದತ್,​ ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಹಾಗೂ ಎಲ್ಲಾ ಕಲಾವಿದರ ನಟನೆ ಉತ್ತಮವಾಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ ಔಟ್​ಸ್ಟ್ಯಾಂಡಿಂಗ್. ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವ’ ಎಂದು ಬರೆದುಕೊಂಡಿದ್ದರು.

ನಿರ್ದೇಶಕ ಪ್ರಶಾಂತ್ ನೀಲ್ ಶ್ರಮವನ್ನು ಶ್ಲಾಘಿಸಿದ್ದ ಅಲ್ಲು ಅರ್ಜುನ್, ‘‘ಪ್ರಶಾಂತ್ ನೀಲ್ ಅವರದ್ದು ಅದ್ಭುತ ಪ್ರದರ್ಶನ. ಅವರ ಆಲೋಚನೆಗೆ ನನ್ನದೊಂದು ಗೌರವ. ಭಾರತದ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದರು.

ಇದನ್ನೂ ಓದಿ: ‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್​​ಗೆ ಸ್ಟೈಲಿಶ್ ಸ್ಟಾರ್ ಫಿದಾ

ಪ್ರಶಾಂತ್​ ನೀಲ್​ರನ್ನು ‘ನನ್ನ ನಿರ್ದೇಶಕ’ ಎಂದು ಕರೆದ ನಟ ಪ್ರಭಾಸ್

Published On - 4:39 pm, Sat, 23 April 22