ಕನ್ನಡ ವರ್ಷನ್​​ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್

ಆಧುನಿಕ ಎಐ ತಂತ್ರಜ್ಞಾನದ ಪರ್ಫೆಕ್ಟ್ ಲಿಪ್‌ಸಿಂಕ್ ಡಬ್ಬಿಂಗ್ ಮೂಲಕ ಗಮನಸೆಳೆದಿರುವ 'ರಾಮಾಯಣ' ಸಿನಿಮಾ ಕನ್ನಡದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 6 ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ಗಳಿಸಿರುವ 'ರಾಮಾಯಣ', ಯಶ್ ಅವರ 'ಟಾಕ್ಸಿಕ್' ಸಿನಿಮಾದ ಒಟ್ಟು ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಒಂದೇ ವಾರದಲ್ಲಿ ಭೇದಿಸಿ ಹೊಸ ಇತಿಹಾಸ ಬರೆದಿದೆ.

ಕನ್ನಡ ವರ್ಷನ್​​ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್
ಯಶ್

Updated on: Nov 11, 2026 | 1:09 PM

ಮುಖ್ಯಾಂಶಗಳು

  • ಕನ್ನಡದಲ್ಲೂ 'ರಾಮಾಯಣ' ಕಲೆಕ್ಷನ್ ಸುನಾಮಿ
  • ₹50 ಕೋಟಿ ಕ್ಲಬ್ ಸೇರಿದ ಡಬ್ಬಿಂಗ್ ವರ್ಷನ್
  • ಎಐ ತಂತ್ರಜ್ಞಾನದ ಅದ್ಭುತ ಲಿಪ್‌ಸಿಂಕ್

ಬಾಕ್ಸ್ ಆಫೀಸ್‌ನಲ್ಲಿ ರಿಲೀಸ್ ಆದ ದಿನದಿಂದಲೂ ಕಲೆಕ್ಷನ್ ಸುನಾಮಿ ಎಬ್ಬಿಸಿರುವ ‘ರಾಮಾಯಣ‘ ಸಿನಿಮಾ ಇದೀಗ ಕನ್ನಡದಲ್ಲೂ ಹೊಸ ಇತಿಹಾಸ ಬರೆದಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡುವುದಿಲ್ಲ ಎಂಬ ಮಾತಿದೆ. ಆದರೆ ಈ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ‘ರಾಮಾಯಣ’, ಕನ್ನಡ ಆವೃತ್ತಿಯೊಂದರಲ್ಲೇ ಬರೋಬ್ಬರಿ 50 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಕನ್ನಡಿಗರ ಪ್ರೀತಿಯನ್ನು ಗಳಿಸಿದೆ.

ಈ ಸಿನಿಮಾಗೆ ಕನ್ನಡದಲ್ಲಿ ಇಷ್ಟೊಂದು ಅಭೂತಪೂರ್ವ ಬೆಂಬಲ ಸಿಗಲು ಪ್ರಮುಖ ಕಾರಣ ಚಿತ್ರದ ಅದ್ಭುತ ಡಬ್ಬಿಂಗ್ ಮತ್ತು ಪ್ರತಿಯೊಂದು ಪಾತ್ರಕ್ಕೂ ಸರಿ ಹೊಂದುವ ಸೂಕ್ತ ದ್ವನಿ. ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಕನ್ನಡ ಸಂಭಾಷಣೆಗೆ ತಕ್ಕಂತೆ ನಟರ ತುಟಿ ಚಲನೆ ಮ್ಯಾಚ್ ಮಾಡಲಾಗಿದೆ. ಇದು ಪ್ರೇಕ್ಷಕರಿಗೆ ಸ್ವತಃ ಕನ್ನಡದಲ್ಲೇ ನಿರ್ಮಾಣವಾದ ಸಿನಿಮಾ ನೋಡುತ್ತಿರುವ ಅನುಭವ ನೀಡಿದ್ದು, ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಡಬ್ಬಿಂಗ್ ಗುಣಮಟ್ಟವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

Loading...

ಕನ್ನಡ ವರ್ಷನ್‌ನ ಕಲೆಕ್ಷನ್‌ ಅನ್ನು ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾಗೆ ಹೋಲಿಸಿದರೆ ‘ರಾಮಾಯಣ’ ಮಾಡಿರುವ ಸಾಧನೆ ನಿಜಕ್ಕೂ ಬೆರಗುಗೊಳಿಸುವಂತಿದೆ. ‘ಟಾಕ್ಸಿಕ್’ ಸಿನಿಮಾದ ಕನ್ನಡ ಆವೃತ್ತಿಯು ತನ್ನ ಲೈಫ್‌ಟೈಮ್ ರನ್‌ನಲ್ಲಿ ಒಟ್ಟು 56 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಆದರೆ ‘ರಾಮಾಯಣ’ ಸಿನಿಮಾ ರಿಲೀಸ್ ಆದ ಕೇವಲ ಆರೇ ದಿನಗಳಲ್ಲಿ 50 ಕೋಟಿ ರೂಪಾಯಿ ಗಡಿ ದಾಟಿದ್ದು, ಅತ್ಯಂತ ವೇಗವಾಗಿ ‘ಟಾಕ್ಸಿಕ್’ ಕನ್ನಡ ವರ್ಷನ್ ಲೈಫ್‌ಟೈಮ್ ಕಲೆಕ್ಷನ್ ಅನ್ನು ಹಿಂದಿಕ್ಕಲು ಸಜ್ಜಾಗಿದೆ.

ಇನ್ನು ಜಾಗತಿಕ ಮತ್ತು ಒಟ್ಟು ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿಯೂ ‘ರಾಮಾಯಣ’ ಬೃಹತ್ ದಾಖಲೆ ನಿರ್ಮಿಸಿದೆ. ‘ಟಾಕ್ಸಿಕ್’ ಸಿನಿಮಾದ ಒಟ್ಟು ಲೈಫ್‌ಟೈಮ್ ಗ್ರಾಸ್ ಕಲೆಕ್ಷನ್ 250 ಕೋಟಿ ರೂಪಾಯಿ ಆಗಿದ್ದರೆ, ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 823 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ‘ಟಾಕ್ಸಿಕ್’ ಲೈಫ್‌ಟೈಮ್ ಗಳಿಕೆಯನ್ನು 2-3 ದಿನಗಳಲ್ಲಿ ಹಿಂದಿಕ್ಕಿದಂತೆ ಆಗಿದೆ.

ಇದನ್ನೂ ಓದಿ: ಮಲೇಷ್ಯಾದಲ್ಲಿ ‘ರಾಮಾಯಣ’ಕ್ಕೆ ಭರ್ಜರಿ ಕಲೆಕ್ಷನ್, ಅದ್ದೂರಿ ಸೆಲೆಬ್ರೇಷನ್

ಕನ್ನಡ ಡಬ್ಬಿಂಗ್ ಸಂಸ್ಕೃತಿಯಲ್ಲಿ ‘ರಾಮಾಯಣ’ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ದೊಡ್ಡ ಮಟ್ಟದ ದಾಖಲೆಗಳನ್ನು ನಿರ್ಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:08 pm, Wed, 11 November 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us