Shivaji Surathkal 2: ‘ಟ್ವಿಂಕಲ್​’ ಹಾಡಿನಲ್ಲಿ ಸಸ್ಪೆನ್ಸ್​ ಕಾಯ್ಡುಕೊಂಡ ‘ಶಿವಾಜಿ ಸುರತ್ಕಲ್​ 2’; ಸಂಗೀತಾ ಶೃಂಗೇರಿ ಸೂಪರ್​ ಡ್ಯಾನ್ಸ್​

Twinkle Twinkle Song | Sangeetha Sringeri: ‘ಈ ಸಿನಿಮಾದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ ನನಗೆ ಅಮೃತ ವರ್ಷಿಣಿ ಚಿತ್ರದ ಪಾತ್ರ ನೆನಪಾಗುತ್ತದೆ’ ಎಂದು ನಿರ್ಮಾಪಕ ಅನೂಪ್ ಗೌಡ ಹೇಳಿದ್ದಾರೆ. ಆ ಮೂಲಕ ಅವರು ಕುತೂಹಲ ಹೆಚ್ಚಿಸಿದ್ದಾರೆ.

Shivaji Surathkal 2: ‘ಟ್ವಿಂಕಲ್​’ ಹಾಡಿನಲ್ಲಿ ಸಸ್ಪೆನ್ಸ್​ ಕಾಯ್ಡುಕೊಂಡ ‘ಶಿವಾಜಿ ಸುರತ್ಕಲ್​ 2’; ಸಂಗೀತಾ ಶೃಂಗೇರಿ ಸೂಪರ್​ ಡ್ಯಾನ್ಸ್​
‘ಶಿವಾಜಿ ಸುರತ್ಕಲ್ 2’ ಚಿತ್ರತಂಡ
Edited By:

Updated on: Mar 16, 2023 | 12:50 PM

‘ಶಿವಾಜಿ ಸುರತ್ಕಲ್​’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಅದರ ಸೀಕ್ವೆಲ್​ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಹಾಡಿನ ಮೂಲಕ ಗಮನ ಸೆಳೆಯಲಾಗಿದೆ. ‘ಶಿವಾಜಿ ಸುರತ್ಕಲ್​ 2’ (Shivaji Surathkal 2) ಸಿನಿಮಾದ ‘ಟ್ವಿಂಕಲ್​ ಟ್ವಿಂಕಲ್​..’ ಸಾಂಗ್​ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಗ್ಲಾಮರಸ್​ ಅವತಾರದಲ್ಲಿ ಅವರು ಅಭಿಮಾನಿಗಳ ಕಣ್ಮನ ಸೆಳೆಯುತ್ತಿದ್ದಾರೆ. ಇದು ಬರೀ ಕುಣಿಯೋಕೆ ಇರುವ ಸಾಂಗ್​ ಅಲ್ಲ. ಇದರಲ್ಲಿ ಸಸ್ಪೆನ್ಸ್​ ಕೂಡ ಇದೆ. ಶಿವಾಜಿ ಪಾತ್ರದಲ್ಲಿರುವ ರಮೇಶ್ ಅರವಿಂದ್​ (Ramesh Aravind)​ ಅವರು ಈ ಹಾಡಿನಲ್ಲಿ ಎರಡು ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಯಾಕೆ ಎಂಬುದು ಸಿನಿಮಾ ನೋಡಿದಾಗ ಗೊತ್ತಾಗಲಿದೆ.

‘ಶಿವಾಜಿ ಸುರತ್ಕಲ್​ 2’ ಸಿನಿಮಾಗೆ ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ರಮೇಶ್ ಅರವಿಂದ್, ಸಂಗೀತಾ ಶೃಂಗೇರಿ ಜೊತೆಗೆ ಮೇಘನಾ ಗಾಂವ್ಕರ್​​, ರಾಧಿಕಾ ನಾರಾಯಣ್​ ಮುಂತಾದವರು ನಟಿಸಿದ್ದಾರೆ. ‘ಟ್ವಿಂಕಲ್ ಟ್ವಿಂಕಲ್..’ ಹಾಡು ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಗೀತೆಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಕಂಠದಲ್ಲಿ ಈ ಸಾಂಗ್​ ಮೂಡಿಬಂದಿದೆ. ಎಪ್ರಿಲ್​ 14ರಂದು ‘ಶಿವಾಜಿ ಸುರತ್ಕಲ್​ 2’ ಸಿನಿಮಾ ಬಿಡುಗಡೆ ಆಗಲಿದೆ.

Ramesh Aravind: ‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ; ರಿಷಬ್​, ಅನಿಲ್​ ಕುಂಬ್ಳೆ, ದ್ರಾವಿಡ್​, ಮಾಲಾಶ್ರೀಗೆ ಬೇಡಿಕೆ

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ರಮೇಶ್​ ಅರವಿಂದ್​ ಮಾತನಾಡಿದರು. ‘ರಾಹುಲ್ ದ್ರಾವಿಡ್ ಕುಟುಂಬದವರ ಜೊತೆ ನಾವು ‘ಶಿವಾಜಿ ಸುರತ್ಕಲ್’ ಸಿನಿಮಾ ನೋಡಿದ್ದೆವು. ಈಗ 2ನೇ ಪಾರ್ಟ್​ ತೆರೆಗೆ ಬರಲು ಸಿದ್ಧವಾಗಿದೆ. ಇದರಲ್ಲಿ ಶಿವಾಜಿ ಯಾವ ಕೇಸ್​ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

Shivaji Surathkal 2 | Twinkle Twinkle|Sangeetha Sringeri|Ramesh Aravind| Akash Srivatsa|Judah Sandhy

‘ಈ ಸಿನಿಮಾದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ ನನಗೆ ಅಮೃತ ವರ್ಷಿಣಿ ಚಿತ್ರದ ಪಾತ್ರ ನೆನಪಾಗುತ್ತದೆ’ ಎನ್ನುವ ಮೂಲಕ ಇನ್ನಷ್ಟು ಕುತೂಹಲ ಹೆಚ್ಚಿಸಿದ್ದಾರೆ ನಿರ್ಮಾಪಕ ಅನೂಪ್ ಗೌಡ. ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತಾ ಇಷ್ಟಪಡುತ್ತಾರೆ ಎಂಬ ಭರವಸೆ ಅವರಿಗೆ ಇದೆ. ಈ ಚಿತ್ರದಲ್ಲಿ 5 ಹಾಡುಗಳಿವೆ ಎಂದು ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:09 am, Thu, 16 March 23

Follow Us