Ramesh Aravind: ‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ; ರಿಷಬ್​, ಅನಿಲ್​ ಕುಂಬ್ಳೆ, ದ್ರಾವಿಡ್​, ಮಾಲಾಶ್ರೀಗೆ ಬೇಡಿಕೆ

Weekend with Ramesh | Zee Kannada: ‘ವೀಕೆಂಡ್​ ವಿತ್​ ರಮೇಶ್​’ ಹೊಸ ಸೀಸನ್​ ನಡೆಸಿಕೊಡಲು ರಮೇಶ್​ ಅರವಿಂದ್​ ಸಜ್ಜಾಗಿದ್ದಾರೆ. ಈ ಬಾರಿ ಯಾವೆಲ್ಲ ಸಾಧಕರು ಬರುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

Ramesh Aravind: ‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ; ರಿಷಬ್​, ಅನಿಲ್​ ಕುಂಬ್ಳೆ, ದ್ರಾವಿಡ್​, ಮಾಲಾಶ್ರೀಗೆ ಬೇಡಿಕೆ
‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ
Follow us
ಮದನ್​ ಕುಮಾರ್​
|

Updated on:Feb 05, 2023 | 2:05 PM

ಖ್ಯಾತ ನಟ ರಮೇಶ್​ ಅರವಿಂದ್​ (Ramesh Aravind) ಅವರು ಸಿನಿಮಾದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಫೇಮಸ್​ ಆಗಿದ್ದಾರೆ. ನಿರೂಪಕನಾಗಿ ಅವರಿಗೆ ಟಿವಿಯಲ್ಲಿ ಸಖತ್​ ಬೇಡಿಕೆ ಇದೆ. ಈವರೆಗೂ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ವೀಕೆಂಡ್​ ವಿತ್​ ರಮೇಶ್​’ (Weekend with Ramesh) ಕಾರ್ಯಕ್ರಮವಂತೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಈ ಕಾರ್ಯಕ್ರಮದ ಹೊಸ ಆವೃತ್ತಿಗಾಗಿ ವೀಕ್ಷಕರು ಕಾದಿದ್ದಾರೆ. ಅಂಥವರಿಗೆಲ್ಲ ‘ಜೀ ಕನ್ನಡ’ (Zee Kannada) ವಾಹಿನಿ ಕಡೆಯಿಂದ ಗುಡ್​ ನ್ಯೂಸ್​ ಸಿಕ್ಕಿದೆ. ‘ವೀಕೆಂಡ್​ ವಿತ್​ ರಮೇಶ್​’ 5ನೇ ಸೀಸನ್​ಗೆ ದಿನಗಣನೆ ಶುರುವಾಗಿದೆ. ಈ ಬಾರಿಗೆ ರಿಷಬ್​ ಶೆಟ್ಟಿ, ಮಾಲಾಶ್ರೀ ಮುಂತಾದ ಸಾಧಕರು ಬರಲಿ ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ಶೀಘ್ರದಲ್ಲೇ ‘ವೀಕೆಂಡ್​ ವಿತ್​ ರಮೇಶ್​’ ಕಾರ್ಯಕ್ರಮ ಶುರುವಾಗಲಿದೆ ಎಂಬುದನ್ನು ತಿಳಿಸಲು ‘ಜೀ ಕನ್ನಡ’ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಒಂದು ಪ್ರೋಮೋ ಹಂಚಿಕೊಂಡಿದೆ. ಇದಕ್ಕೆ ಅಭಿಮಾನಿಗಳು ಖುಷಿಯಿಂದ ಕಮೆಂಟ್​ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವು ಕಾತರದಿಂದ ಕಾಯುತ್ತಿರುವುದಾಗಿ ವೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Ramesh Aravind: ಯಕ್ಷಗಾನದ ವೇಷದಲ್ಲಿ ರಮೇಶ್​ ಅರವಿಂದ್​; ಫೋಟೋ ಕಂಡು ‘ಆಹಾ ಎಷ್ಟು ಚಂದ’ ಎಂದ ಫ್ಯಾನ್ಸ್​

ಇದನ್ನೂ ಓದಿ
Image
ರಮೇಶ್​ ಅರವಿಂದ್​ ಜತೆ ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ನಟಿಸಲಿರುವ ಖ್ಯಾತ ನಟ ನಾಸರ್​
Image
2022ರ ಪೂರ್ತಿ ರಮೇಶ್​ ಅರವಿಂದ್​ ವಿಶೇಷ ಮಾತುಗಳು; ಹೊಸ ಪ್ರಯತ್ನಕ್ಕೆ ಕೈ ಹಾಕಿದ ಎವರ್​ಗ್ರೀನ್​ ನಟ
Image
‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ
Image
ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್​ ಅರವಿಂದ್​

ಪ್ರತಿ ಬಾರಿಗೂ ಸಿನಿಮಾ ಕ್ಷೇತ್ರದ ಸಾಧಕರನ್ನು ‘ವೀಕೆಂಡ್​ ವಿತ್​ ರಮೇಶ್​’ ಕಾರ್ಯಕ್ರಮದ ವೇದಿಕೆಗೆ ಕರೆತಂದು ಅವರ ಬದುಕಿನ ವಿವರಗಳನ್ನು ವೀಕ್ಷಕರ ಮುಂದಿಡಲಾಗುತ್ತದೆ. ಸ್ಫೂರ್ತಿ ನೀಡುವಂತಹ ವಿಷಯಗಳು ಬಿತ್ತರ ಆಗುತ್ತವೆ. ಈ ಬಾರಿ ‘ಕಾಂತಾರ’ ಚಿತ್ರದ ಹೀರೋ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಈ ಶೋಗೆ ಬರಲಿ ಎಂದು ಅಭಿಮಾನಿಗಳು ಬಯಸಿದ್ದಾರೆ. ಅದೇ ರೀತಿ ಮಾಲಾಶ್ರೀ ಅವರು ಕೂಡ ಬರಬೇಕು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಕೊನೇ ದಿನದ ಹಿಂದಿನ ರಾತ್ರಿ ಪುನೀತ್​ ಮತ್ತು ರಮೇಶ್​ ಅರವಿಂದ್​ ನಡುವೆ ನಡೆದ ಮಾತುಕಥೆ ಏನು?

ಕ್ರಿಕೆಟ್​ ಲೋಕದಲ್ಲಿ ಸಾಧನೆ ಮಾಡಿದ ಕರುನಾಡಿನ ಹೆಮ್ಮೆಯ ಆಟಗಾರರಾದ ಅನಿಲ್​ ಕುಂಬ್ಳೆ, ರಾಹುಲ್​ ದ್ರಾವಿಡ್​ ಅವರು ‘ವೀಕೆಂಡ್​ ವಿತ್​ ರಮೇಶ್​’ ಕಾರ್ಯಕ್ರಮಕ್ಕೆ ಬಂದು ಸಾಧಕರ ಸೀಟ್​ನಲ್ಲಿ ಕುಳಿತುಕೊಳ್ಳಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬೇಡಿಕೆ. 5ನೇ ಸೀಸನ್​ನಲ್ಲಾದರೂ ಅದು ಈಡೇರಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ.

‘ವೀಕೆಂಡ್​ ವಿತ್ ರಮೇಶ್​’​ ಕಾರ್ಯಕ್ರಮ ಕೇವಲ ಸಿನಿಮಾದವರಿಗೆ ಮಾತ್ರ ಸೀಮಿತ ಆಗದೇ ಇರಲಿ ಎಂದು ಕೆಲವರು ಆಶಿಸಿದ್ದಾರೆ. ತೆರೆಮರೆಯಲ್ಲಿ ಸಾಧನೆ ಮಾಡಿದ ಅನೇಕರನ್ನು ಈ ಶೋ ಮೂಲಕ ಕರುನಾಡಿಗೆ ಪರಿಚಯಿಸುವಂತಾಗಲಿ ಎಂದು ವೀಕ್ಷಕರು ಬೇಡಿಕೆ ಇಟ್ಟಿದ್ದಾರೆ. 5ನೇ ಸೀಸನ್​ ಯಾವಾಗ ಪ್ರಸಾರ ಆರಂಭಿಸಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿತು. ಈ ಬಗ್ಗೆ ಜೀ ಕನ್ನಡ ವಾಹಿನಿಯಿಂದ ಇನ್ನಷ್ಟೇ ಅಪ್​ಡೇಟ್​ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:05 pm, Sun, 5 February 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್