Kantara: ಹಿಂದಿಯಲ್ಲೂ 100 ದಿನ ಪೂರೈಸಿದ ‘ಕಾಂತಾರ’ ಚಿತ್ರ; ರಿಷಬ್ ಶೆಟ್ಟಿಗೆ ಉತ್ತರ ಭಾರತದಲ್ಲಿ ಭರ್ಜರಿ ಮೆಚ್ಚುಗೆ
Rishab Shetty | Kantara Movie: ‘ಕಾಂತಾರ’ ಸಿನಿಮಾಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದಕ್ಕೆ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಯಶಸ್ಸು ಸಿಗಲು ಕಾರಣವಾದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.
Updated on:Jan 22, 2023 | 6:21 PM

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ದೇಶಾದ್ಯಂತ ಅಬ್ಬರಿಸಿದ ಈ ಚಿತ್ರ ಹಿಂದಿಯಲ್ಲೂ 100 ದಿನಗಳನ್ನು ಪೂರೈಸಿದೆ.

‘ಕಾಂತಾರ’ ಚಿತ್ರ ಕನ್ನಡದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಗಳಿಂದಲೂ ಬೇಡಿಕೆ ಬಂತು. ಆಗ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡರು. ಪರಿಣಾಮವಾಗಿ ಉತ್ತರ ಭಾರತದಲ್ಲಿ ಬಹುಕೋಟಿ ರೂಪಾಯಿ ಕಲೆಕ್ಷನ್ ಆಯಿತು.

ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಮಾನಸಿ ಸುಧೀರ್, ಅಚ್ಯುತ್ ಕುಮಾರ್, ಕಿಶೋರ್ ಮುಂತಾದ ಕಲಾವಿದರ ನಟನೆಗೆ ಎಲ್ಲ ರಾಜ್ಯಗಳ ಜನರು ಭೇಷ್ ಎಂದಿದ್ದಾರೆ.

ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ‘ಕಾಂತಾರ’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು. ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ, ಹೃತಿಕ್ ರೋಷನ್ ಮುಂತಾದವರಿಗೆ ಈ ಸಿನಿಮಾ ತುಂಬ ಇಷ್ಟವಾಯಿತು. ಮುಂಬೈನಲ್ಲಿ ಕನ್ನಡ ವರ್ಷನ್ ಕೂಡ ಹೌಸ್ಫುಲ್ ಪ್ರದರ್ಶನ ಕಂಡಿದ್ದು ವಿಶೇಷ.

‘ಕಾಂತಾರ’ ಚಿತ್ರದ ಭರ್ಜರಿ ಯಶಸ್ಸಿನಿಂದಾಗಿ ‘ಕಾಂತಾರ 2’ ಬಗ್ಗೆ ನಿರೀಕ್ಷೆ ಮೂಡಿದೆ. ರಿಷಬ್ ಶೆಟ್ಟಿ ಅವರು ಈಗ ಅದಕ್ಕಾಗಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಜೂನ್ ತಿಂಗಳಿಂದ ಪಾರ್ಟ್ 2 ಶೂಟಿಂಗ್ ಶುರುವಾಗಲಿದೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಲು ವಿಜಯ್ ಕಿರಗಂದೂರು ಸಜ್ಜಾಗಿದ್ದಾರೆ.
Published On - 6:21 pm, Sun, 22 January 23



















